ಬೆಂಗಳೂರು- ರಾಜಕೀಯದಲ್ಲಿ ಯಾರೂ ಕೂಡ ದೀರ್ಘ ಅವಧಿಯವರೆಗೆ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎನ್ನುವುದೊಂದು ನಾಣ್ನುಡಿ.ಇದಕ್ಕೆ ಪೂರಕವಾದ
ವಿದ್ಯಮಾನಗಳು ಇತ್ತೀಚೆಗೆ ನಡೆಯುತ್ತಿವೆ. ರಾಮನಗರ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಹಾವು- ಮುಂಗುಸಿಯಂತಾಡುತ್ತಿದ್ದ, ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಇದೀಗ ಭಾಯಿ ಭಾಯಿ .ಈ ಇಬ್ಬರ ಅನ್ಯೋನ್ಯತೆ ನೋಡಿದಾಗ ರಾಮನಗರ ಜಿಲ್ಲಾ ಉಸ್ತುವಾರಿಯಾಗಿ ತೋಳು ಮೇಲೇರಿಸಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸ್ಥಿತಿ ಇದೀಗ ಎನು ಮಾಡಬೇಕು ಎಂದು ದಿಕ್ಕು ತೋಚದಂತಾಗಿದೆ.
ಅಷ್ಕಕ್ಕೂ ಇದೆಲ್ಲಾ ಏನು ಹೇಗೆ ಅಂತಿರಾ ಅದನ್ನೆಲ್ಲಾ ಹೇಳ್ತೀವಿ ಅದಕ್ಕೂ ಮೊದಲು ನಮ್ಮ ಚಾನೆಲ್ ಸಬ್ ಸ್ಕ್ರೈಬ್ ಮಾಡಿ.ಷೇರ್ ಮಾಡಿ.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಪರಿಶೀಲನೆಗಾಗಿ ಕೇಂದ್ರ ಭೂ ಸಾರಿಗೆ ಮಂತ್ರಿ ನಿತಿನ್ ಗಡ್ಕರಿ (Nitin Gadkari) ಆಗಮಿಸಿದ ವೇಳೆ ಸಿ.ಪಿ.ಯೋಗೇಶ್ವರ್ ಮತ್ತು ಡಿ.ಕೆ.ಸುರೇಶ್ ಮುಖಾಮುಖಿಯಾದರು ಈ ವೇಳೆ ಸುರೇಶ್ ಅವರನ್ನು ಉದ್ದೇಶಿಸಿ ಯೋಗೇಶ್ವರ್
ಕಳೆದ ಬಾರಿ ಬ್ರದರ್- ಸಿಸ್ಟರ್ ಎಂದು ಹೋಗಿದ್ದೀರಿ? ಏನಾಯಿತು ದೋಸ್ತಿ?’ ಎಂದು ಪ್ರಶ್ನಿಸಿದರು ಇದಕ್ಕೆ. ಮುಗುಳ್ನಗೆಯಷ್ಟೇ ಸುರೇಶ್ ಉತ್ತರವಾಗಿತ್ತು.
ಇದರಲ್ಲಿ ವಿಶೇಷವೇನು ಗೊತ್ತಾ..ವಿಧಾನಸಭೆ ಚುನಾವಣೆಗೆ ಚನ್ನಪಟ್ಟಣದಲ್ಲಿ ಈ ಬಾರಿ ಬಿಜೆಪಿಯಿಂದ ಯೋಗೇಶ್ವರ್ ಹಾಗೂ ಜೆಡಿಎಸ್‌ನಿಂದ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಖಚಿತವಾಗಿದೆ. ಕಾಂಗ್ರೆಸ್ ಮಾತ್ರ ಇನ್ನೂ ಅಭ್ಯರ್ಥಿ ಹಾಕಿಲ್ಲ. ಈ ನಡುವೆಯೇ ಈ ಇಬ್ಬರ ಸಾಮೀಪ್ಯ ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಮತ್ತು ಶಿವಕುಮಾರ್ ಜೋಡೆತ್ತು ಎಂಬಂತೆ ಬಿಂಬಿಸಲ್ಪಟ್ಟಿದ್ದರು. ರಾಜಕೀಯದಲ್ಲಿ ಪ್ರಬಲ ಎದುರಾಳಿಗಳಾಗಿದ್ದ ಈ ಇಬ್ಬರೂ ಬದಲಾದ ಪರಿಸ್ಥಿತಿಯಲ್ಲಿ ಜೋಡೆತ್ತುಗಳಂತಿದ್ದರು.ಈ ಸರ್ಕಾರ ಪತನ ಹೊಂದುತ್ತಿದ್ದಂತೆ ಜೋಡೆತ್ತುಗಳು ಬೇರೆಯಾಗಿ ದ್ವೇಷ ಕಾರತೊಡಗಿದ್ದಾರೆ.
ಹಾಗೆಯೇ ಸಿ.ಪಿ.ಯೋಗೇಶ್ವರ್ ಕೂಡಾ ಕುಮಾರಸ್ವಾಮಿ ಅವರ ಕಡು ವಿರೋಧಿ, ಇದಕ್ಕೂ ಮೊದಲು ಕಾಂಗ್ರೆಸ್ ನಲ್ಲಿದ್ದ ಅವರು ಮೈತ್ರಿ ಸರ್ಕಾರದ ಕಾರಣಕ್ಕೆ ಕಾಂಗ್ರೆಸ್ ತೊರೆದು BJP ಸೇರಿದ್ದರು. ಈಗ ಇವರಿಬ್ಬರ ಗುರಿ ಒಂದೇ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರನ್ನು ಮಣಿಸುವುದು.ಅದಕ್ಕಾಗಿ ಕಾಂಗ್ರೆಸ್ ಸಮರ್ಥರ ಹುಡುಕಾಟದಲ್ಲಿದೆ.
ಇನ್ನು BJPಯಿಂದ ಕಣಕ್ಕಿಳಿಯಲು ತಯಾರಿ ನಡೆಸಿರುವ ಯೋಗೇಶ್ವರ್ ತಮಗೆ ಕುಮಾರಸ್ವಾಮಿ ಅವರನ್ನು ಮಣಿಸಲು ಬಿಜೆಪಿಗಿಂತ ಕಾಂಗ್ರೆಸ್ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಯಾಕೆಂದರೆ ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕ ಈ ಸಮುದಾಯ ಒಬ್ಬ ನಾಯಕನಾಗಿ ಯೋಗೇಶ್ವರ್ ಅವರನ್ನು ಬೆಂಬಲಿಸಲಿದೆ.ಆದರೆ,ಅವರು ಬಿಜೆಪಿಯಿಂದ ಕಣಕ್ಕಿಳಿದರೆ ಮತ ಹಾಕುವುದಿಲ್ಲ ಎಂಬ ವರದಿಗಳಿವೆ ಹೀಗಾಗಿ ಯೋಗೇಶ್ವರ್ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ
ಮೂಲಗಳ ಪ್ರಕಾರ ಸಂಸದ ಡಿ.ಕೆ.ಸುರೇಶ್ ಈ ವಿಷಯವಾಗಿ ಹೆಚ್ಚು ಆಸಕ್ತಿವಹಿಸಿದ್ದ ಈಗಾಗಲೇ ತಮ್ಮ ಸೋದರ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆಗೆ ಪೂರ್ವ ಭಾವಿ ಮಾತುಕತೆ ನಡೆಸಿದ್ದಾರೆ.
ಈ ಇಬ್ಬರೂ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣದಲ್ಲಿ ಮಣಿಸಬೇಕಾದರೆ ಯೋಗೇಶ್ವರ್ ಸೂಕ್ತ ಎಂಬ ಅಭಿಪ್ರಾಯ ಹೊಂದಿದ್ದಾರೆ ಹೀಗಾಗಿ ಸಂಕ್ರಮಣ ಮುಗಿಯುತ್ತಿದ್ದಂತೆ ಯೋಗೇಶ್ವರ್ Congress ಸೇರಲಿದ್ದಾರೆ ಎನ್ನಲಾಗುತ್ತಿದೆ.
Previous Articleತಮಾಷೆಗಾಗಿ ಬಾಂಬ್ ಬೆದರಿಕೆ ಕರೆ ಮಾಡಿದ ಬಾಲಕ
Next Article ಕನ್ನಡದ ಕಿಶೋರ್ ಕುಮಾರ್ ನಿಮಗೆಷ್ಟು ಗೊತ್ತು?