ಬೆಂಗಳೂರು,ಜು.26
ರಾಷ್ಟ್ರಮಟ್ಟದಲ್ಲಿ ಹೊಸ ನಾಯಕರ ಹುಡುಕಾಟ ನಡೆಯುತ್ತಿದೆ. ಯೂತ್ ಕಾಂಗ್ರೆಸ್ Election ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಇಂದಿನಿಂದ ಸಾರ್ಟ್ ಫೋನ್ ಮೂಲಕ ಆನ್‌ಲೈನ್ ಸದಸ್ಯತ್ವ ನೋಂದಣಿ ಆರಂಭಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕಟಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಾರು ಬೇಕಾದರೂ ಆನ್‌ಲೈನ್‌ನಲ್ಲೇ ಸದಸ್ಯತ್ವ ಪಡೆಯಬಹುದು. ಸದಸ್ಯತ್ವದ ಜೊತೆಗೆ ಬ್ಲಾಕ್, ಡಿಸ್ಟ್ರಿಕ್ಟ್ ಪ್ರೆಸಿಡೆಂಟ್, ಜನರಲ್ ಸೆಕ್ರೆಟರಿ, ಕೆಪಿಸಿಸಿ ಪದಾಧಿಕಾರಿಗಳ ಚುನಾವಣೆಗೆ ಮತ ಚಲಾವಣೆಗೆ ಅವಕಾಶ ಕೊಡಲಾಗತ್ತದೆ. ಒಬ್ಬರಿಗೆ 6 ಮತ ಚಲಾವಣೆ ಮಾಡಲು ಅವಕಾಶ ಇದೆ ಎಂದು ತಿಳಿಸಿದರು.
ಸದಸ್ಯತ್ವ ನೋಂದಣಿಯನ್ನು ಪಾರದರ್ಶಕವಾಗಿ ಮಾಡಲಾಗುತ್ತದೆ. ಟೆಕ್ನಾಲಜಿ ಬಳಸಿ ಫೇಸ್ ಐಡೆಂಟಿಟಿ ಒಳಗೊಂಡಂತೆ ಸದಸ್ಯತ್ವ ಮಾಡಿಸುತ್ತಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲಿ ಚುನಾವಣಾಧಿಕಾರಿಗಳು ಇರುತ್ತಾರೆ. ಆಗಸ್ಟ್ 2ರಿಂದ ನಾಮಪತ್ರ ಸಲ್ಲಿಕೆ. ಆ.9 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿದೆ. ಚುನಾವಣೆಗೆ ಮೀಸಲಾತಿ ಕೂಡ ನಿಗಧಿ ಮಾಡಲಾಗಿದೆ. ಎಸ್ಸಿ ಎಸ್ಟಿ, ಜನರಲ್ ಕೆಟಗರಿ ಇರಲಿದೆ ಎಂದು ಮಾಹಿತಿ ನೀಡಿದರು
ಮಹಾತ್ಮ ಗಾಂಧಿ ಕಾಂಗ್ರೆಸ್ ನಾಯಕತ್ವ ವಹಿಸಿ ನೂರು ವರ್ಷ ಆಗಿದೆ. ಈ ಸುಸಂದರ್ಭದಲ್ಲಿ ದೊಡ್ಡ ಸಂಭ್ರಮಾಚರಣೆ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಕಾರ್ಯಕ್ರಮ ರೂಪಿಸಲು ಸಮಿತಿ ರಚನೆ ಮಾಡಲಾಗುವುದು. 15 ಸಚಿವರು, ಪದಾಧಿಕಾರಿಗಳು ಸೇರಿ 60 ನಾಯಕರ ಕಮಿಟಿ ಮಾಡುತ್ತಿದ್ದೇವೆ. ಬೆಳಗಾವಿ ಹಾಗೂ ಎಲ್ಲೆಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಇದೆಯೋ ಅಲ್ಲಿ ಕಾರ್ಯಕ್ರಮ ಮಾಡಲಾಗುವುದು ಎಂದರು.
ಹೆಚ್.ಕೆ.ಪಾಟೀಲ್ ಅಧ್ಯಕ್ಷತೆಯ ಸಮಿತಿಯಲ್ಲಿ ವೀರಪ್ಪ ಮೊಯ್ಲಿ ಸಲಹೆಗಾರರಾಗಿ ಇರುತ್ತಾರೆ. ಆ.9ರೊಳಗೆ ಸಭೆ ನಡೆಸಿ ನಂತರ ಸಲಹೆ ಕೊಡುತ್ತಾರೆ. ಪಕ್ಷ ಸರ್ಕಾರ ಮಟ್ಟದಲ್ಲಿ ಏನು ಕಾರ್ಯಕ್ರಮ ಮಾಡಬೇಕೋ ಮಾಡುತ್ತಿದ್ದೇವೆ ಎಂದು ಹೇಳಿದರು.
Previous Articleಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ ಮತ್ತೊಮ್ಮೆ ಬಹಿರಂಗ.
Next Article POP ಗಣೇಶ ತಡೆಗೆ ಮಾರ್ಷಲ್ ಗಳ ನೇಮಕ.