ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಇಡಿ ವಿಚಾರಣೆ ಹೆಸರಲ್ಲಿ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಚಾಮರಾಜ ಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಜಮೀರ್ ಅಹಮದ್ ಖಾನ್ ವಿಚಾರಣೆಯ ನೆಪದಲ್ಲಿ ನಮ್ಮ ನಾಯಕರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಇಡಿ ವಿಚಾರಣೆ ಸಂಪೂರ್ಣ ರಾಜಕೀಯ ಪ್ರೇರೇಪಿತವಾಗಿದ್ದು,ಈ ಕಿರುಕುಳ ನಿಲ್ಲಿಸುವವರೆಗೆ ನಮ್ಮ ಹೋರಾಟವೂ ನಿಲ್ಲುವುದಿಲ್ಲ ಎಂದು ಹೇಳಿದರು.
ಕಳೆದ 2002ರಲ್ಲಿಯೇ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ. ಆದರೆ, ಇದೇ ಪ್ರಕರಣವನ್ನು ರೀ ಓಪನ್ ಮಾಡಿ, ಇಡಿ ಬೇಕಂತಲೇ ಸತತ ಐದು ದಿನಗಳಿಂದ ವಿಚಾರಣೆ ನಡೆಸುತ್ತಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆ ನಡೆಸೋದಕ್ಕೆ ಇಷ್ಟು ದಿನ ಬೇಕಾ.? ಇದೊಂದು ಉದ್ದೇಶ ಪೂರಿತ ಹುನ್ನಾರವಾಗಿದೆ. ಮುಂಬರುವ ಚುನಾವಣೆಯ ದೃಷ್ಠಿಯಿಂದ ಹೀಗೆ ಇಡಿ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಂತರ ಪ್ರತಿಭಟನಾಕಾರರನ್ನು ರಾಯನ್ ವೃತ್ತದಲ್ಲಿ ಕೆಲ ಕಾಲ ರಸ್ತ ತಡೆ ನಡೆಸಿದರು ಇದರಿಂದ ಆ ಪ್ರದೇಶದಲ್ಲಿ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು ಕೂಡಲೆ ಪೊಲೀಸರು ಶಾಸಕ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವು ಕಾರ್ಯಕರ್ತರನ್ನು ಬಂಧಿಸಿದರು.
Previous Articleಅರ್ಜುನ್ ಜನ್ಯಾ ನಿರ್ದೇಶನದ ಚಿತ್ರಕ್ಕೆ ನಡಿ ರಮೇಶ್ ರೆಡ್ಡಿ ಪ್ರೊಡ್ಯೂಸರ್
Next Article ವೀರ ಕಂಬಳದಲ್ಲಿ ಪ್ರಕಾಶ್ ರೈ