ಮುಂಬೈ
ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕುಟುಂಬ ಇತ್ತೀಚೆಗಷ್ಟೇ ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆಯನ್ನು ಬಹಳ ಅದ್ಧೂರಿಯಾಗಿ ನೆರವೇರಿಸಿದ್ದು ಎಲ್ಲರಿಗೂ ಗೊತ್ತೇ ಇದೆ.
ಜಗತ್ತಿನಲ್ಲಿ ಅತ್ಯಂತ ದುಬಾರಿ ಮದುವೆ ಇದು ಎಂದು ಖ್ಯಾತಿ ಪಡೆದ ಈ ಅದ್ದೂರಿ ವೈಭವಕ್ಕೆ ಮಾಡಿದ ಖರ್ಚು ಬರೋಬ್ಬರಿ 5,454 ಕೋಟಿ ರೂಪಾಯಿ. ದೇಶ ವಿದೇಶಗಳ ಖ್ಯಾತನಾಮರು ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ಹಾಡಿ ಕುಣಿದು ಕುಪ್ಪಳಿಸಿ ಅದ್ದೂರಿಯ ಉಡುಗೊರೆ ಪಡೆದುಕೊಂಡು ಸಂಭ್ರಮದಿಂದ ತೇಲಿ ಹೋದ ಈ ವಿವಾಹ ಸಮಾರಂಭವನ್ನು ನೋಡಿ ಬಾಯಿ ಮೇಲೆ ಬೆರಳಿಟ್ಟುಕೊಂಡಿತು.
ಇಂತಹ ಅದ್ದೂರಿ ವಿವಾಹ ಮಾಡಿದ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕುರಿತು ಬಿನ್ನ ವಿಭಿನ್ನ ವ್ಯಾಖ್ಯಾನಗಳು ಕೇಳಿ ಬಂದವು ಅಂದಹಾಗೆ ಇಷ್ಟೊಂದು ಅದ್ದೂರಿಯಾದ ಮದುವೆ ಮಾಡಿದ ಅಂಬಾನಿ ಒಡೆತನದ ರಿಲಾಯನ್ಸ್ ಕಂಪನಿ
ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ದ ಶೇ.10 ರಷ್ಟು ಆಸ್ತಿಯನ್ನು ಅಂಬಾನಿ ಕುಟುಂಬವೇ ಹೊಂದಿದೆ.ಹೀಗಾಗಿ ಸಹಜವಾಗಿಯೇ ಇಷ್ಟೊಂದು ಅದ್ದೂರಿಯಾಗಿ ಮದುವೆ ಮಾಡಲಾಯಿತು ಎಂಬ ಸಮರ್ಥನೆ ಕೇಳಿಬಂದರೆ ಮತ್ತೆ ಕೆಲವರು ಇದನ್ನು ಸಂಪತ್ತಿನ ಅಸಹ್ಯ ವೈಭವೀಕರಣ ಎಂದು ಟೀಕಿಸಲಾಗಿತ್ತು.
ಇದೆಲ್ಲಾ ಒಂದು ಕಡೆ ಇರಲಿ ಈಗ ಮುಕೇಶ್ ಅಂಬಾನಿ ಸುಮಾರು ಒಂದೂವರೆ ಲಕ್ಷ ಜನರ
ಮನೆಯಲ್ಲಿ ದುಃಖ ಮತ್ತು ಆತಂಕಕ್ಕೆ ಕಾರಣರಾಗಿದ್ದಾರೆ ಅದು ಏನೆಂದರೆ ರಿಲಯನ್ಸ್ ನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 42 ಸಾವಿರ ಉದ್ಯೋಗಿಗಳನ್ನು ನಿರ್ಧಾಕ್ಷಿಣ್ಯವಾಗಿ ಕೆಲಸದಿಂದ ತೆಗೆದು ಮನೆಗೆ ಕಳುಹಿಸಿದ್ದಾರೆ.
ಇದಕ್ಕೆ ಅವರು ಕೊಡುವ ಕಾರಣ ಕಂಪನಿಯ ಆರ್ಥಿಕ ಹೊರೆ ಹೆಚ್ಚುತ್ತಿದೆ ಕೆಲಸಗಾರರಿಗೆ ಕೊಡುವ ಸಂಬಳ ಹೆಚ್ಚಾಗುತ್ತಿದೆ ಹೀಗಾಗಿ ಇಷ್ಟೊಂದು ದೊಡ್ಡ ಪ್ರಮಾಣದ ಕೆಲಸಕಾರರನ್ನು ಇಟ್ಟುಕೊಳ್ಳುವ ಬದಲಿಗೆ ಅವರ ಸ್ಥಾನದಲ್ಲಿ ಕೃತಕ ಬುದ್ಧಿಮತ್ತೆ ಬಳಸಬಹುದಾಗಿದೆ ಎಂದು ಹೇಳಿದ್ದಾರೆ.
42 ಸಾವಿರ ಮಂದಿ ಕೆಲಸ ಕಳೆದುಕೊಂಡ ಪರಿಣಾಮವಾಗಿ ಅವರನ್ನು ಅವಲಂಬಿಸಿರುವ ಸುಮಾರು ಒಂದುವರೆ ಲಕ್ಷ ಜನ ಇದೀಗ ಮುಂದೇನು ಗತಿ ಎಂದು ಯೋಚಿಸುವಂತಾಗಿದೆ ಕೆಲಸದಿಂದ ತೆಗೆದವರ ಪೈಕಿ ಕೆಲವರು ಇನ್ನೂ ಯುವಕರಾಗಿದ್ದು ಬೇರೆ ಕಡೆ ಕೆಲಸ ಹುಡುಕುವ ಪ್ರಯತ್ನ ನಡೆಸಿದ್ದಾರೆ ಆದರೆ ಹೆಚ್ಚಿನ ಪ್ರಮಾಣದಲ್ಲಿ ನಿವೃತ್ತಿಯ ಅಂಚನ್ನು ತಲುಪಿದವರನ್ನು ಕೆಲಸದಿಂದ ತೆಗೆಯಲಾಗಿದೆ ಹೀಗಾಗಿ ಅವರಿಗೆ ಹೊರಗಡೆ ಕೆಲಸ ಸಿಗುವ ಸಾಧ್ಯತೆ ತುಂಬಾ ಕಡಿಮೆ ಇಂತಹ ಕುಟುಂಬಗಳ ಸದಸ್ಯರು ಮುಖೇಶ್ ಅಂಬಾನಿ ನಿರ್ಧಾರದಿಂದ ಅಂಧಕಾರದಲ್ಲಿ ಬಿಡುವಂತಾಗಿದೆ.
ರಿಲಯನ್ಸ್ ಸಂಸ್ಥೆ ಇತ್ತೀಚೆಗಷ್ಟೇ ತನ್ನ ವಾರ್ಷಿಕ ವರದಿಯನ್ನು ಪ್ರಕಟಿಸಿದ್ದು ಅದರಲ್ಲಿ ತಾವು ಕೆಲಸದಿಂದ ತೆಗೆದವರ ವಿವರಗಳನ್ನು ಬಹಿರಂಗಪಡಿಸಿದೆ
ಆರ್ಥಿಕ ವರ್ಷ 2023ರ ವೇಳೆ ಕಂಪನಿಯಲ್ಲಿ 3,89,000 ಉದ್ಯೋಗಿಗಳಿದ್ದರು. 2024ರಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ.11ರಷ್ಟು ಕಡಿತಗೊಂಡಿದ್ದು, ಸದ್ಯ 3,47,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ 42 ಸಾವಿರ ಉದ್ಯೋಗಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಕಡಿತಗೊಳಿಸಿದೆ.
ತಮ್ಮ ಪುತ್ರನ ಮದುವೆಯನ್ನು ಅದ್ದೂರಿಯಿಂದ ನೆರವೇರಿಸಿ 5000 ಕೋಟಿ ವೆಚ್ಚ ಮಾಡಿದ ಕೆಲವು ಸಾವಿರ ನೌಕರರನ್ನು ಇನ್ನು ಕೆಲವು ದಿನಗಳ ಕಾಲ ಕೆಲಸದಲ್ಲಿ ಮುಂದುವರಿಸಬಹುದಾಗಿತ್ತು. 42,000 ನೌಕರರು ತಮ್ಮ ಕಂಪನಿಗೆ ದೊಡ್ಡ ಹೊರೆ ಎಂದು ಹೇಳುತ್ತಿರುವ ಅಂಬಾನಿ ತನ್ನ ಪುತ್ರನ ಮದುವೆಗೆ ಮಾಡಿದ ಭಾರಿ ಪ್ರಮಾಣದ ವೆಚ್ಚದ ಬಗ್ಗೆ ಚಕಾರ ಎತ್ತುತ್ತಿಲ್ಲ.
ಅದ್ದೂರಿಯ ವಿವಾಹದಲ್ಲಿ ಪಾಲ್ಗೊಂಡ ಗಣ್ಯಾತಿ ಗಣ್ಯರಿಗೆ ಭೂರಿ ಭೋಜನ ಸವಿಯುವಂತೆ ಮಾಡಿ ದುಬಾರಿ ಉಡುಗೊರೆ ನೀಡಿದ ಅಂಬಾನಿ ಎಷ್ಟು ನೌಕರರನ್ನು ಇನ್ನಷ್ಟು ದಿನ ಕೆಲಸದಲ್ಲಿ ಮುಂದುವರಿಸಬಹುದಾಗಿತ್ತಲ್ಲವೇ..
Previous Articleಮುಖ್ಯಮಂತ್ರಿ ಬದಲಾವಣೆ ವಿಷಯ ಅಪ್ರಸ್ತುತ.
Next Article ಬಿಜೆಪಿಯಲ್ಲಿ ಧಗಧಗಿಸುತ್ತಿರುವ ಭಿನ್ನಮತ.