ನವದೆಹಲಿ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಂದಿನ ವರ್ಷ ವಿಧಾನಸಭೆಗೆ Election ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳು ಕುತೂಹಲ ಮೂಡಿಸಿದೆ.
ಅಬಕಾರಿ ಹಗರಣದಲ್ಲಿ ಕಾನೂನಿನ ಕುಣಿಕೆಯೊಳಗೆ ಸಿಲುಕಿಕೊಂಡಿರುವ ಆಮ್ ಆದ್ಮಿ ನಾಯಕ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಆ ಸ್ಥಾನಕ್ಕೆ ತಮ್ಮ ಆಪ್ತ ನಾಯಕಿ ಅತಿಶಿ ಅವರನ್ನು ನೇಮಕ ಮಾಡಿದ್ದಾರೆ ಈ ಮೂಲಕ ತಮ್ಮ ತಮ್ಮ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಅನುಕಂಪದ ಅಲೆಯನ್ನಾಗಿ ಪರಿವರ್ತಿಸುವ ಜೊತೆಗೆ ಮಹಿಳಾ ಮತದಾರರ ಒಲವು ಗಿಟ್ಟಿಸಲು ಪ್ರಯತ್ನ ನಡೆಸಿದ್ದಾರೆ.
ಇದಕ್ಕೆ ಪ್ರತಿಯಾಗಿ ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲೇ ಬೇಕೆಂದು ಪಣ ತೊಟ್ಟಿರುವ ಬಿಜೆಪಿ ಈಗ ತನ್ನ ಮಹಿಳಾ ನಾಯಕಿ ಸ್ಮೃತಿ ಇರಾನಿ ಅವರನ್ನು ಮುಖ್ಯಮಂತ್ರಿ ಅತಿಶಿ ವಿರುದ್ಧವಾಗಿ ಬಿಂಬಿಸಲು ಮುಂದಾಗಿದೆ.
ಸ್ಮೃತಿ ಇರಾನಿ ತಮ್ಮ ಬಾಲ್ಯ ಸೇರಿದಂತೆ ಬಹುತೇಕ ಎಲ್ಲ ಜೀವನವನ್ನು ದೆಹಲಿಯಲ್ಲಿಯೇ ಕಳೆದಿದ್ದಾರೆ ಅವರಿಗೆ ದೆಹಲಿಯ ಪ್ರತಿಯೊಂದು ಪ್ರದೇಶ ಮತ್ತು ಅಲ್ಲಿನ ಜನರ ನಾಡಿಮಿಡಿತ ಗೊತ್ತಿದೆ ಹೀಗಾಗಿಯೇ ದೆಹಲಿ ಬಿಜೆಪಿಯ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಅವರ ನೇತೃತ್ವದಲ್ಲಿ ಚುನಾವಣೆ ನಡೆಸಲು ಸಿದ್ಧತೆ ನಡೆಸಿದೆ.
ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ ನಂತರ ಸ್ಮೃತಿ ಇರಾನಿ ರಾಜಕೀಯವಾಗಿ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಈಗ ಅವರನ್ನು ಮತ್ತೆ ಸಕ್ರಿಯ ರಾಜಕಾರಣಕ್ಕೆ ಕರೆತಂದು ದೆಹಲಿಯ ಉಸ್ತುವಾರಿಯನ್ನಾಗಿ ಮಾಡಲು ಬಿಜೆಪಿ ಉನ್ನತ ನಾಯಕತ್ವ ತೀರ್ಮಾನಿಸಿದೆ ಈ ಮೂಲಕ ದೆಹಲಿಯಲ್ಲಿ ಅತಿಶಿ ವರ್ಸಸ್ ಸ್ಮೃತಿ ಇರಾನಿ ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದಂತೂ ಸತ್ಯ