ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಿಡುಗಡೆಗೆ ಒತ್ತಾಯಿಸಿ ಈ ವಾರ ಪಾಕಿಸ್ತಾನದ ರಾಜಧಾನಿಯಲ್ಲಿ ಅವರ ಸಾವಿರಾರು ಮಂದಿ ಬೆಂಬಲಿಗರು ದಾಂಧಲೆ ಮಾಡಿದ ಮೇಲೆ ಪಾಕಿಸ್ತಾನದ ಅಧಿಕಾರಿಗಳು ಅವರ ಸುಮಾರು 1,000 ಬೆಂಬಲಿಗರನ್ನು ಬಂಧಿಸಿದ್ದಾರೆ ಎಂದು ನಗರದ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಸೆಂಟ್ರಲ್ ಇಸ್ಲಾಮಾಬಾದ್‌ನಲ್ಲಿ ರಾತ್ರಿಯಿಡೀ ಎಲ್ಲವೂ ಅಸ್ತವ್ಯಸ್ತವಾಗಿರುವ ದೃಶ್ಯಗಳು ಕಂಡುಬಂದಿವೆ. ನೂರಾರು ಜನರು ಗುಂಡಿನ ಗಾಯಗಳಾಗಿವೆ ಎಂದು ಖಾನ್ ಅವರ ಬೆಂಬಲಿಗರು ಹೇಳಿದ್ದಾರೆ. ಇಮ್ರಾನ್ ಅವರ ಪತ್ನಿಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಪೊಲೀಸರ ಭದ್ರತಾ ಬ್ಯಾರಿಕೇಡ್‌ಗಳನ್ನು ಬೇಧಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದರು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಈ ಎಲ್ಲ ಮಾಹಿತಿಗಳಿಗೆ ಪುರಾವೆ ಇನ್ನೂ ಸಿಕ್ಕಿಲ್ಲವಾದರೂ ಸಾವಿರಾರು ಮಂದಿ ಬಂಧನವಾಗಿದ್ದು ನಿಜ ಎಂದು ಅಧಿಕೃತವಾಗಿ ಧೃಡಪಟ್ಟಿದೆ.
ಪ್ರತಿಭಟನಾಕಾರರ ವಿರುಧ್ದಹ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅರೆಸೇನಾ ಪಡೆಗಳನ್ನು ಬಳಸಲಾಗಿದ್ದು ಪ್ರತಿಭಟನಾಕಾರರನ್ನು ಚದುರಿಸಲು ಮದ್ದುಗುಂಡುಗಳನ್ನು ಬಳಸಲಾಗಿದೆ ಎಂಬ ಆರೋಪವನ್ನು ಇಸ್ಲಾಮಾಬಾದ್‌ನ ಪೊಲೀಸ್ ಮುಖ್ಯಸ್ಥ ಅಲಿ ರಿಜ್ವಿ ನಿರಾಕರಿಸಿದ್ದಾರೆ. ಮಂಗಳವಾರದ ಕಾರ್ಯಾಚರಣೆಯಲ್ಲಿ 600 ಪ್ರತಿಭಟನಾಕಾರರನ್ನು ಮಾತ್ರ ಬಂಧಿಸಲಾಗಿದೆ ಎಂದು ರಿಜ್ವಿ ಹೇಳಿದ್ದಾರೆ ಮತ್ತು ಕಳೆದ ಮೂರು ದಿನಗಳಲ್ಲಿ ಒಟ್ಟು ಬಂಧನಗಳ ಸಂಖ್ಯೆ 954 ಕ್ಕೆ ತಲುಪಿದೆ ಎಂದೂ ವರದಿಯಾಗಿದೆ. ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿದ ಪ್ರತಿಭಟನಾ ಸ್ಥಳದಲ್ಲಿ ಸರ್ಕಾರದ ವಿರುದ್ಧ ಬಳಸಲು ತಂದಿದ್ದ ಸ್ವಯಂಚಾಲಿತ ರೈಫಲ್‌ಗಳು ಅಶ್ರುವಾಯು ಮತ್ತು ಬಂದೂಕುಗಳು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ. ಪ್ರತಿಭಟನೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಸ್ಥಳವನ್ನು ತೆರವುಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.