ಬೆಂಗಳೂರು.
ಕನ್ನಡದ ಸುದ್ದಿ ವಾಹಿನಿಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆಯೇ.. ಅಥವಾ ಜನತೆ ಈ ಸುದ್ದಿ ವಾಹಿನಿಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ನೋಡಲು ಬಯಸುತ್ತಿಲ್ಲವೇ. ರಾಜಕೀಯ ಸಿನಿಮಾ ಅಪರಾಧ ಕ್ರೀಡೆ ಸೇರಿದಂತೆ ಕನ್ನಡ ಸುದ್ದಿ ವಾಹಿನಿಗಳು ನಡೆದಿರುವ ಯಾವುದೇ ಸುದ್ದಿ ಜನಸಾಮಾನ್ಯರಿಗೆ ರುಚಿಸುತ್ತಿಲ್ಲ ಎಂಬುದು ಗೊತ್ತಾಗುತ್ತಿದೆ.
ಪ್ರತಿವಾರ ಸ್ವತಂತ್ರ ಸಂಸ್ಥೆಯೊಂದು ಟಿ ವಿ ವಾಹಿನಿಗಳ ವೀಕ್ಷಣೆಯ ಅಂಕ ಟಿ.ಆರ್.ಪಿ. ಬಿಡುಗಡೆ ಮಾಡುತ್ತದೆ. ಈ ರೀತಿ ಬಿಡುಗಡೆ ಮಾಡಿರುವ ಪಟ್ಟಿಯನ್ನು ವೀಕ್ಷಣೆ ಮಾಡಿದಾಗ ಸುದ್ದಿ ವಾಹಿನಿಗಳು ವೀಕ್ಷಕರನ್ನು ದೊಡ್ಡ ಪ್ರಮಾಣದಲ್ಲಿ ಕಳೆದುಕೊಳ್ಳುತ್ತಿವೆ ಎಂಬುದು ಮನದಟ್ಟಾಗಿದೆ.
ಕನ್ನಡದ ಎಲ್ಲಾ ಸುದ್ದಿ ವಾಹಿನಿಗಳ ಕಳೆದ ವಾರದ ಒಟ್ಟು ಟಿ ಆರ್ ಪಿ 241. ಇದು ಮನರಂಜನ ವಾಹಿನಿಗಳ ಬಗ್ಗೆ ಐದನೇ ಸ್ಥಾನದಲ್ಲಿರುವ ಮನರಂಜನ ಟಿವಿಯ ಟಿ ಆರ್ ಪಿ ಆಗಿದೆ. ಕನ್ನಡದ 10 ಪ್ರಮುಖ ಸುದ್ದಿವಾಹಿನಿಗಳು ಪಡೆದಿರುವ ಒಟ್ಟಾರೆ ಟಿ ಆರ್ ಪಿ ಕೇವಲ 241 ಮಾತ್ರ.
ಈ ಸುದ್ದಿ ವಾಹಿನಿಗಳ ಪೈಕಿ ಟಿವಿ9 ಒಟ್ಟು 70 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರೆದಿದೆ ಇದೇ ಮೊದಲ ಬಾರಿಗೆ ಪಬ್ಲಿಕ್ ಟಿವಿ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ
ಕುಸಿಯಲ್ಪಟ್ಟಿದೆ ಕಳೆದ ಹಲವಾರು ವರ್ಷಗಳಿಂದ ಕನ್ನಡದ ಸುದ್ದಿ ವಾಹಿನಿಗಳ ಪೈಕಿ ಪಬ್ಲಿಕ್ ಸದಾ ಎರಡನೇ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿತ್ತು ಆದರೆ ಇದೆ ಮೊದಲ ಬಾರಿಗೆ ಈ ಸ್ಥಾನವನ್ನು ಟಿ ವಿ 18 ಅಲಂಕರಿಸಿದೆ.
ಸದಾ ಮೂರನೇ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿದ್ದ ಏಷ್ಯಾ ನೆಟ್ ಸುವರ್ಣ ನ್ಯೂಸ್ ಕಳೆದ ನಾಲ್ಕು ವಾರಗಳಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು ಚೇತರಿಸಿಕೊಳ್ಳಲು ಮಾಡುತ್ತಿರುವ ಯಾವುದೇ ಪ್ರಯೋಗಗಳು ನಿರೀಕ್ಷಿತ ಫಲಿತಾಂಶ ನೀಡಿಲ್ಲ ಒಟ್ಟಾರೆ ಅಂಕಗಳಲ್ಲಿ ಈ ಬಾರಿ ಅದು ಮತ್ತು ಕೆಳಗೆ ಹೋಗಿದೆ. ನ್ಯೂಸ್ ಫಸ್ಟ್ ವಾಹಿನಿ ಟಿ ಆರ್ ಪಿ ಸುಧಾರಣೆ ಮಾಡಿಕೊಳ್ಳುವ ಮೂಲಕ ನಾಲ್ಕನೇ ಸ್ಥಾನಕ್ಕೆ ಸನಿಹದಲ್ಲಿದೆ.