ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನಾ ಶಿಬಿರ ದೇಶದಾದ್ಯಂತ ಪಕ್ಷ ಸಂಘಟನೆ ಹಾಗೂ ನಾಯಕತ್ವದ ದೃಷ್ಟಿಯಿಂದ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ.
ಅದರಂತೆ ಕರ್ನಾಟಕದ ದೃಷ್ಟಿಯಿಂದಲೂ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪಕ್ಷದ ಅಧಿನಾಯಕಿ ಸೋನಿಯಾ ಕಿವಿಮಾತೊಂದನ್ನು ಹೇಳಿದ್ದಾರೆ.
ಚಿಂತನಾ ಶಿಬಿರದ ವೇಳೆ ಸೋನಿಯಾ ಅವರು ಡಿ.ಕೆ.ಶಿವಕುಮಾರ್ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.
ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಭರವಸೆ ಮೂಡಿಸಿದೆ ಈ ಭರವಸೆ ಈಡೇರಲೇಬೇಕು ಈ ಮೂಲಕ ಸೋಲಿನ ಸರಪಳಿ ಕಳಚಬೇಕು ಎಂದು ಸೋನಿಯಾ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ಶಿವಕುಮಾರ್ ಅವರನ್ನು ಕುರಿತು ಸೋನಿಯಾ
ತಾವು ಪಕ್ಷವನ್ನು ಅಧಿಕಾರಕ್ಕೆ ತರುತ್ತೀರ ನಿಮ್ಮ ಬಗ್ಗೆ ನನಗೆ ನಂಬಿಕೆಯಿದೆ.ನಿಮ್ಮ ಸಾಮರ್ಥ್ಯವೂ ತಿಳಿದಿದೆ ನನ್ನ ವಿಶ್ವಾಸ ಮತ್ತಷ್ಟು ಗಟ್ಟಿಗೊಳ್ಳುವ ರೀತಿಯಲ್ಲಿ ಕೆಲಸ ಮಾಡುವಂತೆ ಹೇಳಿದರೆನ್ನಲಾಗಿದೆ.
ಸೋನಿಯಾ ಅವರ ವಿಶ್ವಾಸಭರಿತ ಮಾತುಗಳನ್ನು ಕೇಳಿದ ಡಿ.ಕೆ.ಶಿವಕುಮಾರ್ ಖಂಡಿತವಾಗಿಯೂ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಅಸ್ತಿತ್ವಕ್ಕೆ ತರುತ್ತೇನೆ ಈ ಗುರುತರ ಜವಾಬ್ದಾರಿಯನ್ನು ಎಲ್ಲರ ಸಹಕಾರದೊಂದಿಗೆ ನಿಭಾಯಿಸುತ್ತೇನೆ.ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಪಕ್ಷದ ಅಧಿನಾಯಕಿಯ ಸೂಚನೆಯೊಂದಿಗೆ ಮತ್ತಷ್ಟು ಕಾರ್ಯಪ್ರವೃತ್ತರಾಗಲು ತೀರ್ಮಾನಿಸಿರುವ ಶಿವಕುಮಾರ್ ಮುಂದಿನ ವಾರದಿಂದ ಸಂಘಟನಾತ್ಮಕವಾಗಿ ಹಲವಾರು ತೀರ್ಮಾನ ಕೈಗೊಳ್ಳುತ್ತಿದ್ದು, ರಾಜ್ಯಸಭೆ ಮತ್ತು ಪರಿಷತ್ ಚುನಾವಣೆಯ ನಂತರ ಇವುಗಳು ಜಾರಿಗೆ ಬರಲಿವೆ ಎಂದು ಗೊತ್ತಾಗಿ
Previous Articleಮುಖ್ಯ ಪೇದೆ ಮನೆಯಲ್ಲಿ 1.5ಕೋಟಿ ಹಣ ಪತ್ತೆ
Next Article ಗುಲಾಬಿ ಗ್ಯಾಂಗ್ ಹೋರಾಟ