:ಹಾಸನ
ಇದು ಯಾವುದೇ ಸಿನಿಮಾ ದೃಶ್ಯಕ್ಕೂ ಕಡಿಮೆ ಇಲ್ಲದ ಘಟನೆ. ವರ ತಾನು ಕೈಹಿಡಿಯಬೇಕಾಗಿದ್ದ ವಧುವಿಗೆ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಹಸೆ ಮಣೆಯಿಂದ ಎದ್ದ ವಧು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಹಾಸನ ನಗರದ ಕಲ್ಯಾಣ ಮಂಟಪದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ನೆಂಟರು ಗೆಳೆಯರು ಮತ್ತು ಅತಿಥಿಗಳ ಸಂಭ್ರಮದ ನಡುವೆ ಮಂತ್ರಘೋಷಗಳು, ಗಟ್ಟಿ ಮೇಳ ಮೊಳಗುತ್ತಿದ್ದಂತೆ ವರ ತಾಳಿ ಹಿಡಿದು ಕಟ್ಟಲು ಸಜ್ಜಾಗಿದ್ದರು. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ‘ಯುವತಿಗೆ ದೂರವಾಣಿ ಕರೆ ಬಂದಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಯುವತಿ ಮದುವೆ ಬೇಡ ಎಂದು ನಿರಾಕರಿಸಿದ್ದಾಳೆ. ತಾಳಿ ಕೈಲಿ ಹಿಡಿದಿದ್ದ ಯುವಕ ಪದೇ ಪದೇ ಯುವತಿಗೆ ಮದುವೆ ಇಷ್ಟ ಇದೆಯೋ ಇಲ್ವೋ ಅಂತಾ ಕೇಳಿದ್ದಾನೆ. ಸುತಾರಾಂ ಒಪ್ಪದ ಹುಡುಗಿ ಮದುವೆ ಬೇಡ ಅಂತಲೇ ಹಠ ಹಿಡಿದಿದ್ದಾಳೆ. ಈ ವೇಳೆ ಪೋಷಕರು ಸಹ ಯುವತಿ ಮನವೊಲಿಸಲು ಶತಾಯಗತಾಯ ಪ್ರಯತ್ನಪಟ್ಟರು. ಈ ಮದುವೆ ಬೇಡ’ ಎಂದ ವಧು ಪಟ್ಟು ಹಿಡಿದರು.
ಮದುವೆ ಬೇಡ ಎಂದ ಮಗಳನ್ನು ಅವರ ಪೋಷಕರು ಪರಿಪರಿಯಾಗಿ ಬೇಡಿಕೊಂಡಿರೂ, ಆದರೆ ಮಗಳು ನಿರ್ಧಾರ ಬದಲಿಸಲಿಲ್ಲ. ಮಗಳ ನಿರ್ಧಾರದಿಂದ ಆಘಾತಗೊಂಡ ಪೋಷಕರು ಕಣ್ಣೀರಿಟ್ಟರು.
ಆದರೆ, ಯುವತಿ ಮಾತ್ರ ಯಾವುದಕ್ಕೂ ಕ್ಯಾರೆ ಅಂದಿಲ್ಲ. ಬಳಿಕ ಯುವತಿ ಹಠ ಮಾಡಿದ್ದಕ್ಕೆ ನನಗೂ ಈ ಮದುವೆ ಬೇಡ ಎಂದು ವರ ಹೇಳಿದ್ದಾನೆ.
ಮದುವೆ ಬೇಡ ಎಂದು ಹಸಮಣೆಯಿಂದ ಎದ್ದ ವಧು ನೇರವಾಗಿ ಕಲ್ಯಾಣ ಮಂಟಪದಿಂದ ಕಾರಿನ ಮೂಲಕ ಹೊರಗೆ ತೆರಳಿದ್ದಾರೆ.
ಇನ್ನೊಬ್ಬನ ಜೊತೆ ಪ್ರೀತಿಸುತ್ತಿದ್ದು, ಆತನನ್ನೆ ಮದುವೆ ಮಾಡಿಕೊಳ್ಳುವುದಾಗಿ ಕೊನೆಯ ಕ್ಷಣದಲ್ಲಿ ಮದುಮಗಳು ಹೇಳಿದ್ದು, ವರ ಮತ್ತು ವಧುವಿನ ಪಾಲಕರಿಗೆ ದಿಕ್ಕು ತೋಚದಂತಾಗಿತ್ತು.
ಹಾಸನ ತಾಲೂಕಿನ ಬೂವನಹಳ್ಳಿ ಗ್ರಾಮದ ಯುವತಿ ಹಾಗೂ ಆಲೂರು ತಾಲೂಕಿನ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ವರ ಸರ್ಕಾರಿ ಶಿಕ್ಷಕನಾಗಿದ್ದು, ಯುವತಿ ಸ್ನಾತಕೋತ್ತರ ಪದವಿ ಓದಿದಿದ್ದಾರೆ
ಈಗ ಪ್ರಕರಣ ಪೋಲಿಸ್ ಠಾಣೆಯ ಮೆಟ್ಟಿಲರಿದೆ.
Previous Articleತಮನ್ನಾ ಬೆಂಬಲಕ್ಕೆ ನಿಂತ ಎಂ.ಬಿ.ಪಾಟೀಲ್
Next Article ಮುಂಗಾರು ಮಳೆಗೆ ಮಂತರ್ ಗೌಡ ಪ್ಲಾನ್ ಅಫ್ ಆಕ್ಷನ್
