ಬೆಂಗಳೂರು,ಮಾ.5-
ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳಿಂದ ವಾಮಮಾರ್ಗದಲ್ಲಿ ಚಿನ್ನ ಸಾಗಾಣೆ ಮಾಡಿ ಸಿಕ್ಕಿಬಿದ್ದಿರುವ ನಟಿ, ಪೊಲೀಸ್ ಮಹಾ ನಿರ್ದೇಶಕ ರಾಮಚಂದ್ರರಾವ್ ಪುತ್ರಿ ರನ್ಯಾರಾವ್ ಅಕ್ರಮದ ದೊಡ್ಡ ಜಾಲ ಬೆಳಕಿಗೆ ಬಂದಿದೆ.
Bengaluru ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳ ಸಾಗಾಣಿಕೆ ಆರೋಪದಲ್ಲಿ ರನ್ಯಾ ರಾವ್ ಅವರನ್ನು ಬಂಧಿಸಿಧ ಕಂದಾಯ ಗುಪ್ತಚರ ದಳದ (ಡಿಆರ್‌ಐ) ಅಧಿಕಾರಿಗಳು ಆಕೆಯ ಪ್ಲಾಟ್ ಮೇಲೆ ದಾಳಿ ನಡೆಸಿದ್ದಾರೆ.
ಡಿಆರ್‌ಐ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಕೋಟ್ಯಾಂತರ ಮೌಲ್ಯದ ಚಿನ್ನ ಆಕೆಯ ಪ್ಲಾಟ್ ನಲ್ಲಿ ಸಿಕ್ಕಿ ದೆ ಇದನ್ನು ಜಪ್ತಿ ಮಾಡಿದ್ದು ,ನ್ಯಾಯಾಂಗ ಬಂಧನದಲ್ಲಿರುವ ನಟಿ ರನ್ಯಾ ರಾವ್ ರನ್ನು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಈ ವೇಳೆ ಆಕೆ ದುಬೈ ನಿಂದ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿರುವ ಈ ಜಾಲದಲ್ಲಿ ತಮಗೆ ಕೆಲವು ಹಿರಿಯ ಅಧಿಕಾರಿಗಳು ಸೇರಿದಂತೆ ಹಲವಾರು ಮಂದಿ ಪ್ರಭಾವಿಗಳು ನೆರವು ನೀಡುತ್ತಿದ್ದರು ಎಂಬ ಅಂಶವನ್ನು ವಿವರಿಸಿದ್ದಾರೆ.
ಕಳೆದ ಹದಿನೈದು ದಿನಗಳಲ್ಲಿ ದುಬೈಗೆ ನಾಲ್ಕು ಬಾರಿ ಹೋಗಿ ಬಂದಿದ್ದ ಅವರು ನಿಯಮಿತವಾಗಿ ದುಬೈಗೆ ತೆರಳಿ ವಾಪಸ್ ಬರುವಾಗ ತಮ್ಮೊಂದಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ತರುತ್ತಿದ್ದರು.ಇದಕ್ಕೆ ಪೊಲೀಸರು ಹಾಗೂ ಉದ್ಯಮಿಗಳು ಸಹಕಾರ ನೀಡಿರುವ ಬಗ್ಗೆ ರನ್ಯಾ ರಾವ್ ಮಾಹಿತಿ ನೀಡಿದ್ದು ಅದನ್ನು ಆಧರಿಸಿ ತನಿಖೆ ಆರಂಭಗೊಂಡಿದೆ.
ನಟಿ ರನ್ಯಾ ರಾವ್ ಅವರ ಬಂಧನದ ನಂತರ ಲ್ಯಾವೆಲ್ಲೇ ರಸ್ತೆಯಲ್ಲಿರುವ ಅವರ ಫ್ಲಾಟ್ ಮೇಲೆ ಡಿ ಆರ್ ಐ ಅಧಿಕಾರಿಗಳು ದಾಳಿ ನಡೆಸಿ ರನ್ಯಾ ಅವರಿಂದ ಒಟ್ಟು 12.56 ಕೋಟಿ ಮೌಲ್ಯದ 14.2 ಕೆ.ಜಿ ವಿದೇಶಿ ಮೂಲದ ಚಿನ್ನ ಮತ್ತು 4.73 ಕೋಟಿ ಮೌಲ್ಯದ ಇತರ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ ತಿಳಿಸಿದೆ.
ಪ್ರಕರಣದಲ್ಲಿ ಚಿನ್ನ, ನಗದು ಸೇರಿದಂತೆ ಒಟ್ಟು 17.29 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಅತಿದೊಡ್ಡ ಪ್ರಮಾಣದ ಚಿನ್ನದಲ್ಲಿ ಇದಾಗಿದೆ ಎಂದು ಡಿಆರ್‌ಐ ಮಾಹಿತಿ ನೀಡಿದೆ.
ಲ್ಯಾವೆಲ್ಲಿ ರಸ್ತೆಯ ನಂದವಾಣಿ ಮ್ಯಾನ್ಸನ್‌ನ ಫ್ಲಾಟ್ ನಲ್ಲಿ ನಟಿ ವಾಸವಿದ್ದ ನಟಿ ರನ್ಯಾ ರಾವ್ ತಿಂಗಳಿಗೆ 4.5 ಲಕ್ಷ ಬಾಡಿಗೆ ಕಟ್ಟುತ್ತಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದ್ದು,ಅಲ್ಲಿದ್ದ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಜಪ್ತಿ ಮಾಡಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ.
Previous Articleರಾಜ್ಯ ಬಿಜೆಪಿ ಬಗ್ಗೆ ಬಿಜೆಪಿ ಸಂಸದನಿಗೆ ಅತೀವ ಬೇಸರ
Next Article ಭಯ ಬೇಡ ಕೋಳಿ ತಿನ್ನಿ