ಬೆಂಗಳೂರು.
ಅಪಹರಣ ಅತ್ಯಾಚಾರ ಆರೋಪ ಪ್ರಕರಣಗಳಲ್ಲಿ ಸಿಲುಕಿರುವ ಮಾಜಿ ಸಂಸದ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ನ್ಯಾಯಾಧೀಶರ ಮುಂದೆ ಗಳನೆ ಗಳನೆ ಅತ್ತಿದ್ದಾರೆ.
ಅತ್ಯಾಚಾರ ಹಾಗೂ ಅಪಹರಣ ಆರೋಪ ಪ್ರಕರಣದಲ್ಲಿ ಸಿಲುಕಿ ವಿಚಾರಣಾಧೀನ ಖೈದಿಯಾಗಿ ಜೈಲಿನಲ್ಲಿ ಕಾಲ ಕಳೆಯುತ್ತಿರುವ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧ ಕೆ ಆರ್ ನಗರದ ಮಹಿಳೆ ಸಲ್ಲಿಸಿರುವ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಮನವಿ ಸಲ್ಲಿಸಿದ್ದಾರೆ.
ಈ ಮನವಿಯ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು ನ್ಯಾಯಾಧೀಶರು ಪ್ರಜ್ವಲ್ ರೇವಣ್ಣ ವಿರುದ್ಧ ಮಾಡಿರುವ ಆರೋಪಗಳನ್ನು ಓದಿ ಹೇಳುವಾಗ ಕೈ ಮುಗಿದು ನಿಂತಿದ್ದ ಅವರು ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿದರು.
ಆದರೆ ನ್ಯಾಯಾಧೀಶರು ಇವರ ವಿರುದ್ಧದ ಎಲ್ಲಾ ಆರೋಪಗಳನ್ನು ಓದಿ ನೀವು ಸಲ್ಲಿಸಿರುವ ಅರ್ಜಿಯನ್ನು ವಜಾ ಗೊಳಿಸಲಾಗಿದೆ ಎಂದು ಪ್ರಕಟಿಸಿದರು.
ನ್ಯಾಯಾಧೀಶರಿಂದ ಈ ಆದೇಶ ಪ್ರಕಟವಾಗುತ್ತಿದ್ದಂತೆ ಬಿಕ್ಕಿಬಿಕ್ಕಿ ಅತ್ತ ಪ್ರಜ್ವಲ್ ರೇವಣ್ಣ ಕೈಮುಗಿದುಕೊಂಡೆ ನಿಂತಿದ್ದರು
ಇದೆ ವೇಳೆ,ಕೆ.ಆರ್ ನಗರದ ಮಹಿಳೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಚಾರ್ಜ್ ಫ್ರೇಮ್ (ಆರೋಪ ನಿಗದಿ) ಮಾಡಿದ ಕೋರ್ಟ್ ಟ್ರಯಲ್ ಪ್ರಾರಂಭಿಸಲು ಸಮಯ ನಿಗದಿಪಡಿಸಿತು. ಅದರಂತೆ ಏಪ್ರಿಲ್ 9ರಿಂದ ದೋಷಾರೋಪ ಪಟ್ಟಿಯ ಮೇಲೆ ವಿಚಾರಣೆ ಆರಂಭವಾಗಲಿದೆ.