ಬೆಂಗಳೂರು.
ಮಹಾನಗರ ಬೆಂಗಳೂರಿಗೂ ಇದೀಗ ನೈತಿಕ ಪೊಲೀಸ್ ಗಿರಿ ಕಾಲಿಟ್ಟಿದೆ.ಇತ್ತೀಚಿಗೆ
ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯ ಪಾರ್ಕ್ ವೊಂದರಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ ಐವರನ್ನು ಪೊಲೀಸರು ಬಂಧಿಸಿದ್ದರು.
ಇದೀಗ ಅಂತಹ ಘಟನೆಯನ್ನು ಹೋಲುವ ಮತ್ತೊಂದು ಪ್ರಕರಣ ವರದಿಯಾಗಿದೆ. ಪಾರ್ಕ್ ವೊಂದರಲ್ಲಿ ಮುಸ್ಲಿಂ ಯುವತಿ, ಹಿಂದೂ ಯುವಕ ಕುಳಿತಿದ್ದಾಗ ಅವರ ಬಳಿಗೆ ಬಂದ ಯುವಕರ ತಂಡವೊಂದು ತಗಾದೆ ತೆಗೆದಿದೆ.
ಯುವತಿಯನ್ನು ಕುರಿತು ‘ಬುರ್ಖಾ ತೆಗೆ, ನಿನ್ನ ಹೆಸರೇನು ಹೇಳು’ ಎನ್ನುತ್ತ ವಿಡಿಯೋ ರೆಕಾರ್ಡ್ ಮಾಡಲು ಶುರು ಮಾಡಿದೆ. ದಯವಿಟ್ಟು ಗಲಾಟೆ ಮಾಡಬೇಡಿ ಎಂದು ಯುವತಿ ಬೇಡಿಕೊಂಡಿದ್ದರೂ ಬಿಡದೆ, ‘ಕಮಿಟಿಯವರು ಬರ್ತಾರೆ ಇರು’ ಎಂದು ಹೇಳಿ ವಿಡಿಯೋ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಸದ್ಯ ನೈತಿಕ ಪೊಲೀಸ್ಗಿರಿಯ ವಿಡಿಯೋವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಎಲ್ಲಿ, ಯಾವಾಗ ನಡೆದಿದೆ ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ದೊರೆಯಬೇಕಿದೆ. ಸದ್ಯ, ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
Previous Articleಜಾತಿ ಗಣತಿ ಅಲ್ಲ, ಸಿದ್ದ ಷಡ್ಯಂತ್ರ ಎಂದ ಕುಮಾರಸ್ವಾಮಿ.
Next Article You tube ನೋಡಿ ಸರಗಳ್ಳತನ