ಬೀದರ್,ಜ.16-
ಗಡಿ ಜಿಲ್ಲೆ ಬೀದರ್ ನ ಹೃದಯ ಭಾಗ ಶಿವಾಜಿ ಚೌಕ್ ನಲ್ಲಿ ಹಾಡ ಹಗಲೇ ಎಟಿಎಂ ಗೆ ಹಣ ತುಂಬಲು ಬಂದ ವಾಹನದ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ವ್ಯಕ್ತಿ ಒಬ್ಬರನ್ನು ಹತ್ಯೆಗೈದು ಹಣ ದೊಂದಿಗೆ ಪರಾರಿಯಾಗಿದ್ದಾರೆ.
ಶಿವಾಜಿ ಚೌಕದಲ್ಲಿರುವ ಎಸ್ ಬಿ ಐ ಕಚೇರಿ ಮುಂದಿನ ಎಟಿಎಂ ಗೆ ಹಣ ತುಂಬಲು ವಾಹನದಲ್ಲಿ
ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ ಆಗಮಿಸಿದ್ದರು.ಈ ವೇಳೆ ಹೋಂಚು ಹಾಕಿ ಕಾದು ಕುಳಿತಿದ್ದ ದುಷ್ಕರ್ಮಿಗಳು ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿ 93 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದಾರೆ.
ಗುಂಡಿನ ದಾಳಿಯಲ್ಲಿ ಎಟಿಎಂಗೆ ಹಣ ತುಂಬಲು ಬಂದಿದ್ದ ಒಬ್ಬರು ಸ್ಥಳದಲ್ಲೇ ಮೃತ ಪಟ್ಟರೆ ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ
ಎಟಿಎಂ ಗೆ ಹಣ ತುಂಬಲು ವಾಹನ ಬರುವುದನ್ನು ಖಚಿತಪಡಿಸಿಕೊಂಡು ಕಾದು ಕುಳಿತಿದ್ದ ದುಷ್ಕರ್ಮಿಗಳು ವಾಹನ ಬರುತ್ತಿದ್ದಂತೆ ಮೊದಲಿಗೆ
ಬ್ಯಾಂಕ್ ಹಾಗೂ ಎಟಿಎಂಗೆ ಹಣ ಹಾಕುವ ಪಿಎಸ್‌ಸಿ ವಾಹನದ ಮೇಲೆ ದಾಳಿ ಮಾಡಿ, ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಈ ವೇಳೆ ತಮ್ಮನ್ನು ಹಿಡಿಯಲು ಬಂದ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಹಣದ ಪೆಟ್ಟಿಗೆಯನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳ ದಾಳಿಗೆ ಬಲಿಯಾದ ವ್ಯಕ್ತಿಯನ್ನು ಗಿರಿ ವೆಂಕಟೇಶ್ (ಎಟಿಎಂಗಳಿಗೆ ಹಣ ಹಾಕುವ ಸಿಎಂಎಸ್ ಏಜೆನ್ಸಿಯ ಸಿಬ್ಬಂದಿ) ಎಂದು ಗುರುತಿಸಲಾಗಿದೆ.
ಬೀದರ್ ನ ಅತ್ಯಂತ ಜನನಿಬಿಡ ಪ್ರದೇಶ ಎಂದು ಗುರುತಿಸಲಾಗುವ ಶಿವಾಜಿ ಚೌಕ್ ನಲ್ಲಿ ಈ ಘಟನೆ ನಡೆದಿದ್ದು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ ಎಟಿಎಂ ವಾಹನದ ಮೇಲೆ ಕಾರದಪುಡಿ ಮತ್ತು ಬಂದೂಕಿನಿಂದ ದಾಳಿ ಮಾಡಿದ ದುಷ್ಕರ್ಮಿಗಳು
ಆ ವಾಹನದಲ್ಲಿದ್ದ ಹಣದ ಬಾಕ್ಸ್ ಅನ್ನು ಬೈಕ್‌ನಲ್ಲಿ ಇಟ್ಟುಕೊಂಡು ದುಷ್ಕರ್ಮಿಗಳು ಪರಾರಿಯಾಗುತ್ತಿರುವುದನ್ನು ಕಂಡ ಸ್ಥಳೀಯರು ಕಲ್ಲು ತೂರಿ, ದುರ್ಷರ್ಮಿಗಳನ್ನು ತಡೆಯಲು ಯತ್ನಿಸಿದರಾದರೂ ಪ್ರಯೋಜನವಾಗಿಲ್ಲ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಬೈಕ್ ಪತ್ತೆಗೆ ಶೋಧ:
ಘಟನೆಯಲ್ಲಿ ಗಾಯಗೊಂಡಿದ್ದ ಶಿವಕುಮಾರ್ (26) ಅವರನ್ನು ಚಿಕಿತ್ಸೆಗಾಗಿ ಬೀದರ್ನ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಸಹ ಅಸುನೀಗಿದ್ದಾರೆ.
ಆರೋಪಿಗಳಿಗಾಗಿ ಬೀದರ್ ಪೊಲೀಸರು ಬಲೆ ಬಿಸಿದ್ದಾರೆ. ಬೈಕ್ ನಂಬರ್ ಕಲೆ ಹಾಕುತ್ತಿದ್ದಾರೆ.
ಇಬ್ಬರು ಮುಸುಕುಧಾರಿಗಳು ಸಿಬ್ಬಂದಿಗಳ ಮೇಲೆ ಐದು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Previous Articleಪಾದಚಾರಿಗಳಿಗೆ ಅಪ್ಪಳಿಸಿದ ಶಾಸಕರ ಕಾರು
Next Article ಶಿವಕುಮಾರ್ ವಿರುದ್ಧ ಎಲ್ಲರೂ ಒಟ್ಟಾಗುತ್ತಿದ್ದಾರಾ..?