ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾದ ಕತೆ ಇದು ಸರ್ಕಾರದ ಅಬಕಾರಿ ನೀತಿ ವಿರುದ್ದ ಮದ್ಯ ಮಾರಾಟಗಾರರು ಸಮರ ಸಾರಿದ್ದಾರೆ. ಇದರಿಂದ ಮದ್ಯ ಪ್ರಿಯರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮದ್ಯ ಮಾರಾಟಗಾರರು ಪಾನೀಯ ನಿಗಮದಿಂದ ಮದ್ಯ ಖರೀದಿಸದೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ಇಂದಿನಿಂದ ರಾಜ್ಯದಲ್ಲಿ ಮದ್ಯ ಮಾರಾಟದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
ಸರಕಾರ ಹೊಸದಾಗಿ ಆರಂಭ ಮಾಡಿರುವ ಈ ಇಂಡೆಂಟ್ ವ್ಯವಸ್ಥೆ ಬಳಕೆದಾರ ಸ್ನೇಹಿಯಾಗಿಲ್ಲ ಸರ್ವರ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಹೀಗಾಗಿ ಆನ್‌ಲೈನ್ ಮೂಲಕ ಮದ್ಯ ಖರೀದಿಯ ವ್ಯವಸ್ಥೆಯ ಬದಲಾಗಿ ಈ ಮೊದಲಿದ್ದ ಮದ್ಯ ಸರಬರಾಜು ವ್ಯವಸ್ಥೆಯನ್ನು ಮುಂದುವರೆಸುವಂತೆ ಅಗ್ರಹಿಸಿದ್ದಾರೆ.
ಹೊಸ ವ್ಯವಸ್ಥೆಯಲ್ಲಿ ಮಾರಾಟಗಾರರು ವೆಬ್ ಸೈಟಿಗೆ ಹೋಗಿ ಬೇಕಾದ ಮದ್ಯಗಳ ವಿವರವನ್ನು ಅಪ್ಲೋಡ್ ಮಾಡಬೇಕು ಅದರಲ್ಲೂ ರಾತ್ರಿ 9 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ಮಾತ್ರ ಅಪ್ಲೋಡ್ ಮಾಡಲು ಅವಕಾಶವಿದೆ. ಇದೇ ಸಂದರ್ಭದಲ್ಲಿ ಸರ್ವರ್ ಕೈಕೊಟ್ಟರೆ ಸಮಸ್ಯೆ ಈ ವ್ಯವಸ್ಥೆಯಿಂದ ಗ್ರಾಹಕರ ಬೇಡಿಕೆಯ ಮದ್ಯಗಳನ್ನು ಪಡೆಯಲು ಸನ್ನದುದಾರರಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಸದ್ಯ ಏಪ್ರಿಲ್-ಮೇ ತಿಂಗಳಲ್ಲಿ ಮದ್ಯಕ್ಕೆ ವಿಪರೀತ ಬೇಡಿಕೆ ಅನೇಕ ಶುಭಕಾರ್ಯಗಳು, ಪಾರ್ಟಿಗಳು, ಸಂಭ್ರಮಾಚರಣೆಗಳು ನಡೆಯುವುದರಿಂದ ಗ್ರಾಹಕರ ಬೇಡಿಕೆ ಹೆಚ್ಚಿದೆ.
ಹೊಸ ವ್ಯವಸ್ಥೆಯಿಂದ ಗ್ರಾಹಕರ ಬೇಡಿಕೆಗೆ ಸರಬರಾಜು ಆಗುವ ಮದ್ಯಕ್ಕೂ ತಾಳೆಯಾಗುವುದಿಲ್ಲ. ಜನರ ಬೇಡಿಕೆಯ ಮದ್ಯ ನೂತನ ವ್ಯವಸ್ಥೆಯಲ್ಲಿ ಸುಲಭವಾಗಿ ಸಿಗುತ್ತಿಲ್ಲ ರಾತ್ರಿಯಿಡೀ ಕಾದು ಕುಳಿತು ಹೊಸ ಇಂಡೆಂಟ್ ಹಾಕುವ ಸ್ಥಿತಿ ಇದೆ ಎಂದು ಆರೋಪಿಸಿರುವ ಮಾರಾಟಗಾರರು ಹಳೆ ವ್ಯವಸ್ಥೆ ಮುಂದುವರೆಸುವಂತೆ ಆಗ್ರಹಿಸಿ ಪ್ರತಿಭಟನೆ ಕುಡಾ ಮಾಡಿದ್ದರು.
ಸರ್ಕಾರ ಇದಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಮದ್ಯ ಖರೀದಿ ನಿಲ್ಲಿಸುವ ಹೋರಾಟ ಆರಂಭಿಸುವ ಬೆದರಿಕೆ ಹಾಕಿದ್ದು ಇಂದಿನಿಂದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಮೇ 10ರಿಂದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ ಬಾಗಲಕೋಟೆ, ಬೆಳಗಾವಿ ,ಬಿಜಾಪುರ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮದ್ಯ ಖರೀದಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ.
ಮೇ 12ರಂದು,ಮೈಸೂರು, ಚಿಕ್ಕಮಗಳೂರು, ಹಾಸನ, ಮಂಡ್ಯ ಮತ್ತು ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮದ್ಯ ಸ್ಥಗಿತವಾಗಲಿದೆ.
ಮೇ 17ರಂದು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ಮೇ 19ರಂದು ಬೆಂಗಳೂರು ನಗರ ವಿಭಾಗದ ಪಾನೀಯ ನಿಗಮದ ಡಿಪೋಗಳಲ್ಲಿ ಮದ್ಯ ಖರೀದಿಸದಿರಲು ತೀರ್ಮಾನಿಸಿದ್ದಾರೆ. .
Previous Articleದಾಖಲೆ ಕೊಡಿ ಸ್ವಾಮಿ…
Next Article ಅಭಿವೃದ್ದಿಗೆ ನಮ್ಮ ಜೊತೆ ಕೈ ಜೋಡಿಸಿ -ನಾರಾಯಣಗೌಡ