Bengaluru
ರಾಜ್ಯಕ್ಕೆ ಕರ್ನಾಟಕ ಎಂದು ನಾಮಾಕರಣಗೊಳಿಸಿ 50 ವರ್ಷಗಳು ಪೂರೈಸಿದೆ. ಇಂತಹ ಸಂದರ್ಭದಲ್ಲಿ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅಭಿಯಾನದಡಿಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ನೌಕರರು ಕೆಂಪು ಹಾಗೂ ಹಳದಿ ಬಣ್ಣದ ಟ್ಯಾಗ್ ಹೊಂದಿದ ಗುರುತಿನ ಚೀಟಿಯನ್ನು ಧರಿಸಬೇಕು ಎಂದು ತಿಳಿಸಲಾಗಿದೆ.
ಸರ್ಕಾರಿ ನೌಕರರು ಈ ಹಿಂದೆ ನೀಲಿ ಬಣ್ಣದ ಐಡಿ ಟ್ಯಾಗ್ ಹಾಕುತ್ತಿದ್ದರು. ಆದರೆ ಇದೀಗ ಸರ್ಕಾರ ಹೊಸ ಆದೇಶ ಹೊರಡಿಸಿದೆ.ಇದರಲ್ಲಿ ಕೆಂಪು ಹಾಗೂ ಹಳದಿ ಬಣ್ಣದ ಟ್ಯಾಗ್ ಹಾಕುವುದನ್ನು ಕಡ್ಡಾಯಗೊಳಿಸಿದೆ.
ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು, ನಿಗಮ ಮಂಡಳಿ, ನಿರ್ದೇಶನಾಯಲ, ಆಯುಕ್ತಾಲಯ ಹಾಗೂ ಸರ್ಕಾರಿ ಸ್ವಾಮ್ಯದ ಎಲ್ಲ ಕಚೇರಿಗಳಲ್ಲಿ ಎಲ್ಲ ಅಧಿಕಾರಿಗಳು/ ಸಿಬ್ಬಂದಿಗಳಿಗೆ ಕೆಂಪು ಹಳದಿ ಬಣ್ಣದ ಟ್ಯಾಗ್ ಒದಗಿಸಿಕೊಡಬೇಕು ಎಂದು ಸೂಚಿಸಲಾಗಿದೆ
Previous Articleಮಗುವಿನ ರಕ್ಷಣೆಗೆ ಬಂದವರು ಹೈರಾಣ.
Next Article ಜೈಲಿಗಾದರೂ ಹಾಕಿ, ಹೆಂಡತಿ ಮಾತ್ರ ಬೇಡ.