ಮುಂಬಯಿ: ರಾಜಸ್ಥಾನ ರಾಯಲ್ಸ್ ಒಡ್ಡಿದ ಸಾಧಾರಣ ಗುರಿಯನ್ನು ಸಲೀಸಾಗಿ ತಲುಪಿದ ಕೋಲ್ಕತ್ತಾ ನೈಟ್ ರೈಡರ್ಸ್ ಸೋಮವಾರ ಇಲ್ಲಿ ನಡೆದ ಟಾಟಾ ಐಪಿಎಲ್ನ 47ನೇ ಪಂದ್ಯವನ್ನು ಏಳು ವಿಕೆಟ್ಗಳಿಂದ ಗೆದ್ದುಕೊಂಡಿದೆ.
ಟಾಸ್ ಗೆದ್ದ ಕೋಲ್ಕತ್ತಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬಿಗುವಾದ ಬೌಲಿಂಗ್ ದಾಳಿ ಮತ್ತು ಚುರುಕಿನ ಕ್ಷೇತ್ರ ರಕ್ಷಣೆಯ ಮೂಲಕ ಎದುರಾಳಿ ತಂಡವನ್ನು ಕಟ್ಟಿಹಾಕಿ 5 ವಿಕೆಟ್ ನಷ್ಟಕ್ಕೆ 152 ರನ್ ಗಳಿಸುವಷ್ಟರಲ್ಲಿ ಸುಸ್ತು ಹೊಡೆಸಿತು. ನಾಯಕ ಸಂಜು ಸ್ಯಾಮ್ಸನ್ (54), ಶಿಮ್ರನ್ ಹೇಟ್ಮರ್ (27) ಮಾತ್ರ ಕೊಂಚ ಪ್ರತಿರೋಧ ತೋರಿದರು.
ಕೋಲ್ಕತ್ತಾ ತಂಡದ ಆರಂಭಿಕ ಫಿಂಚ್ (4), ಬಾಬಾ ಇಂದ್ರಜಿತ್ (15) ಬೇಗನೆ ನಿರ್ಗಮಿಸಿದರೂ ನಾಯಕ ಶ್ರೇಯಸ್ ಅಯ್ಯರ್ (34) ತಂಡವನ್ನು ಆಧರಿಸಿದರು. ಬಳಿಕ ಕ್ರೀಸ್ ಆಕ್ರಮಿಸಿಕೊಂಡ ನಿತಿಶ್ ರಾಣಾ (48, 37 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ರಿಂಕು ಸಿಂಗ್ (42 ರನ್, 23 ಎಸೆತ, 6 ಬೌಂಡರಿ, 1 ಸಿಕ್ಸರ್) ಮುರಿಯದ 4ನೇ ವಿಕೆಟ್ಗೆ ಕೇವಲ 6.2 ಓವರ್ಗಳಲ್ಲಿ 66 ರನ್ ಕಲೆಹಾಕಿ, ಇನ್ನೂ ಐದು ಎಸೆತಗಳು ಇರುವಂತೆಯೇ ಪಂದ್ಯವನ್ನು ಗೆಲ್ಲಿಸಿದರು.
ಮಂಗಳವಾರ ಗುಜರಾತ್ ಟೈಟಾನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗಲಿವೆ.
Previous Articleಪುಟಿನ್ ಗೆ ಕ್ಯಾನ್ಸರ್ ಸರ್ಜರಿಯಂತೆ!
Next Article ಮಾಜಿಯಾಗುತ್ತಾರಾ ಬೊಮ್ಮಾಯಿ..!