ತುಮಕೂರು: ರೈಲಿಗೆ ಅಡ್ಡ ಮಲಗಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಸಮೀಪದ ಶಿವನಿ ಗ್ರಾಮದ ಜಗದೀಶ್ ಬಿ.ಎಂ ಎಂಬುವರ ಪುತ್ರ ಹೇಮಂತ್ ಎಂ.ಜೆ ಮೃತ ದುರ್ದೈವಿ. ಈತ ತುಮಕೂರಿನ ಶೇಷಾದ್ರಿ ಪುರಂ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಸಿ.ಎ ಓದುತ್ತಿದ್ದನು.
ಶುಕ್ರವಾರ ರಾತ್ರಿ ತಾನು ವಾಸವಿದ್ದ ರೂಮಿನಿಂದ ಹೊರ ಬಂದಿರುವ ಈತ ಹೊರಗಿನಿಂದ ಚಿಲಕ ಹಾಕಿಕೊಂಡು ತೆರಳಿದ್ದಾನೆ. ಬಳಿಕ ತುಮಕೂರಿನ ಗುಬ್ಬಿ ಬೈಪಾಸ್ ಬಳಿ ರೈಲ್ವೆ ಹಳಿಗೆ ಅಡ್ಡ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಾಥಮಿಕ ತನಿಖೆಯಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಆದರೆ ನಿಜವಾದ ಕಾರಣ ತನಿಖೆ ನಂತರ ತಿಳಿಯಬೇಕಿದೆ. ಶವದ ಬಳಿ ಯಾವುದೇ ಡೆತ್ ನೋಟ್ ಇತ್ಯಾದಿ ಕಂಡು ಬಂದಿಲ್ಲ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ.

