ಬೆಂಗಳೂರು,ಫೆ.25-
ರಸ್ತೆಯಲ್ಲಿ ಬೈಕ್ ಚಲಾಯಿಸಿಕೊಂಡು ತಲ್ವಾರ್ ಝಳಪಿಸಿದ್ದ ಅಪಾಯಕಾರಿ ವ್ಹೀಲಿ ಮಾಡಿ ಆತಂಕ ಸೃಷ್ಟಿಸಿದ್ದ ಒಟ್ಟು 14 ಮಂದಿ ಪುಂಡರನ್ನು Bengaluru ಪೊಲೀಸರು ರೌಡಿ ಪಟ್ಟಿಗೆ ಸೇರಿಸಿದ್ದಾರೆ.
ಅಷ್ಟೇ ಅಲ್ಲ ಅವರ ಪೋಷಕರನ್ನು ಠಾಣೆಗೆ ಕರೆಸಿರುವ ಪೊಲೀಸರು ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿ ಕಳಿಸಿದ್ದಾರೆ. ಪುಂಡರು ರಸ್ತೆಯಲ್ಲಿ ನಡೆಸಿದ್ದ ಪುಂಡಾಟಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕರು ವ್ಯಕ್ತಪಡಿಸಿದ ಆಕ್ರೋಶಕ್ಕೆ ಬೆಚ್ಚಿದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನಡೆಯುವ ಶಬ್-ಇ-ಬಾರಾತ್ ಸಂಭ್ರಮದಲ್ಲಿ ಕಳೆದ ಫೆಬ್ರುವರಿ 13 ರಂದು ಮಧ್ಯರಾತ್ರಿ ಲಾಂಗ್ ಹಿಡಿದು ಅಪಾಯಕಾರಿ ವ್ಹೀಲಿ ನಡೆಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದನ್ನು ಗಂಭೀರವಾಗಿ ಪರಿಗಣಿಸಿ ರೌಡಿ ಪಟ್ಟಿಗೆ 14 ಮಂದಿಯನ್ನು ಸೇರಿಸಲಾಗಿದೆ.
ಡಿಜೆ ಹಳ್ಳಿಯಿಂದ ಹೊಸಕೋಟೆವರೆಗೆ
ಶಬ್-ಎ-ಬಾರತ್ ಧಾರ್ಮಿಕ ಹಬ್ಬದ ದಿನ ಕೆಲ ಪುಂಡರು ಡಿಜೆ ಹಳ್ಳಿಯಿಂದ ಹೊಸಕೋಟೆ ವರೆಗೆ ಹೋಗಿ, ಮತ್ತೆ ವಾಪಸ್ ಡಿಜೆ ಹಳ್ಳಿವರೆಗೆ ಮಾರಕಾಸ್ತ್ರ ಹಿಡಿದು ಪುಂಡಾಟಿಕೆ ಮೆರೆದಿದ್ದರು.
ಏಳು ಬೈಕ್‌ಗಳಲ್ಲಿ ಮಾರಕಾಸ್ತ್ರ ಹಿಡಿದು ವ್ಹೀಲಿಂಗ್ ಮಾಡುತ್ತಾ ಪುಂಡಾಟ ಮೆರೆದಿದ್ದ ನಯೀಮ್ ಪಾಷಾ, ಅರಫತ್, ಸಾಹೀಲ್, ಅದ್ನಾನ್, ನಂಜಾಮ್ಮದ್, ಆಸೀಫ್, ಸಮೀರ್, ಜುಬೇರ್, ರಿಹಾನ್, ಹುಸೇನ್, ಜುನೇದ್, ಅಯಾನ್, ಆಫ್ತಾಪ್ ಸೇರಿ 14 ಮಂದಿಯ ವಿರುದ್ಧ ರೌಡಿಶೀಟ್ ತೆಗೆಯಲಾಗಿದೆ.
Previous Articleಗೃಹ ಜ್ಯೋತಿ ಬಗ್ಗೆ ಮಂತ್ರಿ ಕ ಕೆ.ಜೆ.ಜಾರ್ಜ್ ಕೊಟ್ಟ ಸ್ಪಷ್ಟನೆ
Next Article ಕಾಂಗ್ರೆಸ್ ನಲ್ಲಿ ಯಾರಿಗೆ ಅವಕಾಶ ಗೊತ್ತಾ