ಮುಂಬೈ.
ಪಂಜಾಬ್ ನ ಖ್ಯಾತ ಪಾಪ್ ಗಾಯಕ ಸಿಧು ಮೂಸೇವಾಲಾ ಹತ್ಯೆ ನಂತರ ದೇಶದಲ್ಲೆಡೆ ಚರ್ಚೆಯಾಗಿದ್ದು ಲಾರೆನ್ಸ್ ಬಿಷ್ಣೋಯ್ ಬಗ್ಗೆ ಇದಾದ ನಂತರ ಆಗಿಂದಾಗ್ಗೆ ಈ ಹೆಸರು ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಲ್ಲಿ ಬರುತ್ತಿತ್ತು ಲಾರೆನ್ಸ್ ಬಿಷ್ಣೋಯ್ ತಂಡದಿಂದ ಅವರಿಗೆ ಬೆದರಿಕೆ ಇವರಿಗೆ ಎಚ್ಚರಿಕೆ ಎಂಬ ಸುದ್ದಿಗಳು ಒಂದಲ್ಲಾ ಒಂದು ಮಾಧ್ಯಮದಲ್ಲಿ ಬರುತ್ತಿದ್ದವು.
ಇದೀಗ ಮಹಾರಾಷ್ಟ್ರದ ಎನ್ ಸಿ ಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ನಂತರ ದೊಡ್ಡ ಪ್ರಮಾಣದಲ್ಲಿ ಸುದ್ದಿ ಮಾಡುತ್ತಿದ್ದಾನೆ.ಈ ಹತ್ಯೆಗೆ ಪ್ರಮುಖ ಕಾರಣ
ಬಾಲಿವುಡ್ ನಟ ಸಲ್ಮಾನ್ ಖಾನ್ .
ಅಂದಹಾಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕಳೆದ ಕೆಲವು ವರ್ಷಗಳಿಂದ ನಟ ಸಲ್ಮಾನ್ ಖಾನ್ ಹಿಂದೆ ಬಿದ್ದಿದೆ. ಲಾರೆನ್ಸ್ ಗ್ಯಾಂಗ್‌ನ ಶೂಟರ್‌ಗಳು ಸಲ್ಮಾನ್ ಖಾನ್ ಮೇಲೆ ಎರಡು ಬಾರಿ ದಾಳಿ ಮಾಡಿದ್ದರು. ಮೊದಲ ಬಾರಿಗೆ ರೆಡಿ ಚಿತ್ರದ ಶೂಟಿಂಗ್ ವೇಳೆ, ಎರಡನೇ ಬಾರಿಗೆ ಪನ್ವೇಲ್‌ನಲ್ಲಿರುವ ಸಲ್ಮಾನ್ ಅವರ ತೋಟದ ಮನೆಯ ದಾಳಿ ಆಗಿತ್ತು. ಇದಾದ ನಂತರ ಲಾರೆನ್ಸ್ ಬಿಷ್ಣೋಯ್, ಸಲ್ಮಾನ್ ಖಾನ್ ಅವರ ಮುಂಬೈ ಮನೆಯಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಮೇಲೆ ಮತ್ತೆ ಗುಂಡಿನ ದಾಳಿ ನಡೆಸಿದ್ದರು.
ಇದಕ್ಕೆ ಪ್ರಮುಖ ಕಾರಣ ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಕೊಂದಿದ್ದು. ಲಾರೆನ್ಸ್ ಬಿಷ್ಣೋಯ್ ಸಮುದಾಯದ ಜನತೆ ಕೃಷ್ಣಮೃಗವನ್ನು ಭಕ್ತಿಯಿಂದ ಆರಾಧಿಸಿ ಪೂಜಿಸುತ್ತಾರೆ. ತಾವು ಪೂಜಿಸುವ ದೈವವನ್ನು ಸಲ್ಮಾನ್ ಖಾನ್ ಹೊಂದಿದ್ದಾರೆ ಎಂದು ಕೋಪಗೊಂಡಿರುವ ಲಾರೆನ್ಸ್ ಬಿಷ್ಣೋಯ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಹೇಳುತ್ತಿದ್ದಾರೆ.
ಇದೀಗ ಈ ಗ್ಯಾಂಗ್ ನಿಂದ ಹತ್ಯೆಯಾಗಿರುವ ಎಂಸಿಬಿ ನಾಯಕ ಬಾಬಾ ಸಿದ್ದಿಕಿ ನಟ ಸಲ್ಮಾನ್ ಖಾನ್ ಅವರಿಗೆ ಅತ್ಯಂತ ಆಪ್ತ ಇದೊಂದೇ ಕಾರಣಕ್ಕಾಗಿ ಈ ಗ್ಯಾಂಗ್ ಅವರನ್ನು ಹತ್ಯೆ ಮಾಡಿದೆ.
ಇಂಥ ಕಾರಣಗಳಿಗೆಲ್ಲ ಸುದ್ದಿ ಮಾಡುತ್ತಿರುವ ಲಾರೆನ್ಸ್
ಬಿಷ್ಣೋಯ್ ಯಾರು ಅಂತೀರಾ.
ಫೆಬ್ರವರಿ 1993ರಲ್ಲಿ ಪಂಜಾಬ್ ರಾಜ್ಯದ ಫಿರೋಜಪುರದ ಅತ್ಯಂತ ಸ್ಥಿತಿವಂತ ಕುಟುಂಬದಲ್ಲಿ ಜನಿಸಿದ ಬಿಷ್ಣೋಯ್ ಅವರು ಮೊದಲ ಹೆಸರು ಬಾಲ್ಕರನ್ ಬ್ರಾರ್. ಇವರ ತಂದೆ ಮೊದಲು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.
ಸ್ಥಿತಿವಂತ ಕುಟುಂಬದ ಈತ ಓದಿನಲ್ಲಿ ಸಾಕಷ್ಟು ಮುಂದಿದ್ದ.ಜೊತೆಗೆ ನಾಯಕತ್ವದ ಗುಣಗಳನ್ನು ಹೊಂದಿದ್ದ.
ಲಾರೆನ್ಸ್ ಬಿಷ್ಣೋಯ್ ಅಲಿಯಾಸ್ ಬಾಲ್ಕರನ್ ಬ್ರಾರ್ ಶಾಲೆಯಲ್ಲಿದ್ದಾಗಲೇ ಪ್ರೀತಿಯ ಬಲೆಯಲ್ಲಿದ್ದ. ತನ್ನ ಗೆಳತಿಯ ಮುಂದೆ ಸದಾ ಹೀರೋನಂತೆ ವಿಜೃಂಭಿಸಬೇಕೆಂದು ಬಯಸುತ್ತಿದ್ದ ಈತ ವಿಧ್ಯಾರ್ಥಿ ಸಂಘಟನೆಯೊಂದನ್ನು ಹುಟ್ಟು ಹಾಕಿದ್ದ.ಈ ಅವಧಿಯಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘದ Election ನಡೆಯುತ್ತದೆ.ಇದರಲ್ಲಿ ಗೆದ್ದು ತನ್ನ ಗೆಳತಿಯ ಮುಂದೆ ಸಂಭ್ರಮಿಸಬೇಕೆಂದು ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ.ಆದರೆ ದುರದೃಷ್ಟವಶಾತ್ ಈ ವೇಳೆ ಎರಡು ತಂಡಗಳ ನಡುವೆ ಜಿದ್ದಾಜಿದ್ದಿನ ಹಣಹಣಿ ನಡೆದು ಲಾರೆನ್ಸ್ ಬಿಷ್ಣೋಯ್ ಸೋಲುತ್ತಾನೆ ಇದರಿಂದ ಆಕ್ರೋಶಗೊಂಡ ಆತ ಎದುರಾಳಿ ತಂಡದ ಗೆದ್ದ ಅಭ್ಯರ್ಥಿಯನ್ನು ಕೊಚ್ಚಿಕೊಲ್ಲುತ್ತಾನೆ.
ಇದಕ್ಕೆ ಪ್ರತಿಕಾರವಾಗಿ ಆತನ ಎದುರಾಳಿ ತಂಡ
ಅವನ ಗೆಳತಿಯನ್ನು ಜೀವಂತವಾಗಿ ಸುಟ್ಟುಹಾಕುತ್ತಾರೆ. ಇದರ ಸೇಡಿಗಾಗಿ ಮತ್ತಷ್ಟು ಹಲ್ಲೆಗಳು ನಡೆಯುತ್ತದೆ.
ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳಿಸುತ್ತಾರೆ ಅಲ್ಲಿ ಈತನಿಗೆ ಗೋಲ್ಡಿ ಬ್ರಾರ್ ಎನ್ನುವ ವ್ಯಕ್ತಿಯ ಪರಿಚಯವಾಗುತ್ತದೆ. ಗ್ಯಾಂಗ್ ಸ್ಟರ್ ಆಗಿದ್ದ ಬ್ರಾರ್ ಜೊತೆಗಿನ ಸಹವಾಸ ದೋಷದಿಂದಾಗಿ, ಲಾರೆನ್ಸ್ ಬಿಷ್ಣೋಯ್ ಅಪರಾಧ ಲೋಕಕ್ಕೆ ಕಾಲಿಡುತ್ತಾನೆ.
ಇಲ್ಲಿಂದ ಈತನ ಅಪರಾಧ ಜಗತ್ತಿನ ಕಥಾನಕ ಆರಂಭವಾಗುತ್ತದೆ.
ಈತ ರೌಡಿಸಂಗೆ ಸೀಮಿತವಲ್ಲದೇ, ಮದ್ಯ ಸಾಗಾಣಿಕೆ, ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆ ಸೇರಿದಂತೆ ಆದಾಯವಿರುವ ಎಲ್ಲಾ ದಂಧೆಯಲ್ಲಿ ಗೀತಾ ವ್ಯವಸ್ಥೆತವಾಗಿ ತೊಡಗಿಕೊಂಡಿದ್ದಾನೆ ದೇಶಾದ್ಯಂತ ಇತರ ಗ್ಯಾಂಗ್ ವಿಸ್ತರಿಸುತ್ತಾ ಹೋಗುತ್ತಿದೆ
2012ರಿಂದ ಜೈಲಿನಲ್ಲೇ ಇರುವ ಬಿಷ್ಣೋಯ್, ಸುಮಾರು 700 ಜನರ ಬಲಾಢ್ಯ ತಂಡವನ್ನು ಕಟ್ಟಿಕೊಂಡಿದ್ದಾನೆ. ತನ್ನ ತಂಡದ ಸದಸ್ಯರ ಪೈಕಿ ಒಬ್ಬರಿಗೆ ಏನಾದರೂ ಆದರೂ, ಹಗೆ ಸಾಧಿಸುವುದು ಈತನ ವಿಶೇಷ
ಭದ್ರತಾ ದೃಷ್ಟಿಯಿಂದ ಈತನನ್ನು ಮೂರು ಬಾರಿ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಭರತಪುರ್ ಜೈಲು, ತಿಹಾರ್ ಜೈಲಿನ ನಂತರ ಈಗ ಬಿಷ್ಣೋಯ್ ಅನ್ನು ಸಬರಮತಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಅತ್ಯಾಧುನಿಕ VoIP ಟೆಕ್ನಾಲಜಿ ಮೂಲಕ, ತಮ್ಮ ಸಹಚರರನ್ನು ಸಂಪರ್ಕಿಸುವ ಈತ
ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ,ನಾನು ರಂಗೋಲಿಯೊಳಗೆ ನುಗ್ಗುತ್ತೇನೆ ಎನ್ನುವ ಗಾದೆ ಮಾತಿನಂತೆ, ಚಾಣಕ್ಯ ತಂತ್ರ ರೂಪಿಸುತ್ತಾನೆ
ಈತನನ್ನು ಹೆಡೆಮುರಿ ಕಟ್ಟಲು, ಎಷ್ಟೇ ಪ್ರಯತ್ನ ಮಾಡಿದರೂ ಈತನ ಆಟ ಹೆಚ್ಚುತ್ತಲೇ ಇದೆ, ಇವನ ಗ್ಯಾಂಗ್ ಬೆಳೆಯುತ್ತಲೇ ಇದೆ.
Previous Articleರಾಬಿ ಬೆಳೆಗಳಿಗೆ ಹೊಸ ಕನಿಷ್ಠ ಬೆಂಬಲ ಬೆಲೆ – (ಎಂಎಸ್‌ಪಿ) ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅನುಮೋದನೆ.
Next Article ತೀರ್ಥ ಸ್ವರೂಪಿಣಿಯಾಗಿ ಹರಿದ ಕಾವೇರಿ.