ಬೆಂಗಳೂರು,ಜ.10-
ರಾಜ್ಯ ಕಾಂಗ್ರೆಸ್ಸಿನಲ್ಲಿ ವಿದ್ಯಮಾನಗಳು ನಡೆಯುತ್ತಿರುವ ಬೆನ್ನಲ್ಲೇ ತಮಿಳುನಾಡಿಗೆ ತೆರಳಿ ಪ್ರತ್ಯಂಗಿರಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಪೂಜೆಯ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರುನನಗೆ ಯಾರ‍್ಯಾರು ತೊಂದರೆ ಕೊಡುತ್ತಾರೆಯೋ ಅವರಿಂದ ರಕ್ಷಣೆ ಸಿಗಲಿ ಎಂಬುದಾಗಿ ಪ್ರಾರ್ಥನೆ ಮಾಡುತ್ತಿರುತ್ತೇನೆ, ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮಾಧ್ಯಮಗಳು ಕೂಡ ನನಗೆ ತೊಂದರೆ ಕೊಡುತ್ತಿವೆ ಸುಳ್ಳು ಸುದ್ದಿಗಳ ಮೂಲಕ ಅಪಪ್ರಚಾರ ಮಾಡುತ್ತಿವೆ ಇದರಿಂದಲೂ ನನಗೆ ರಕ್ಷಣೆ ಸಿಗಲಿ ಎಂದು ವಿಶೇಷ ಪೂಜೆ ಸಲ್ಲಿಸುವುದಾಗಿ ತಿಳಿಸಿದರು.
ನಾನು ದೇವರ ಮೇಲೆ ನಂಬಿಕೆ ಇಟ್ಟಿರುವ ವ್ಯಕ್ತಿ, ನನಗೆ ಧರ್ಮ, ದೇವರು, ಆಚರಣೆಗಳ ಮೇಲೆ ನಂಬಿಕೆಯಿದೆ, ಪ್ರತಿದಿನ ದೇವರಿಗೆ ನಮಸ್ಕಾರ ಮಾಡದೇ ಮನೆಯಿಂದ ಹೊರಗೆ ಬರುವುದಿಲ್ಲ, ನಾನು ಯಾವ ಶಕ್ತಿಯನ್ನು ನಂಬುತ್ತೇನೆಯೋ ಅದರ ಮೇಲೆ ಭಕ್ತಿ, ಪ್ರೀತಿ ಇದ್ದೇ ಇರುತ್ತದೆ ಎಂದರು.
ನಾನು ಪ್ರತಿದಿನ ಪೂಜೆ ಮಾಡುತ್ತಿರುತ್ತೇನೆ, ಪ್ರತಿದಿನವೂ ದೇವರನ್ನು ನೋಡುತ್ತಿರುತ್ತೇನೆ, ಹೋಮಗಳನ್ನು ಮಾಡಿಸುತ್ತೇನೆ, ನನ್ನ ಮನಸ್ಸಿಗೆ ನೆಮದಿ-ಸಮಾಧಾನಕ್ಕಾಗಿ ಪೂಜೆ ಮಾಡಿಸುತ್ತೇನೆ ಎಂದರು.
ದೇವರ ಮೇಲೆ, ಆಚರಣೆಗಳ ಮೇಲೆ, ಧರ್ಮದ ಮೇಲೆ ನಂಬಿಕೆ ಇದೆ. ದೇವರಿಗೆ ನಮಸ್ಕರಿಸದೆ ನಾನು ನೊಂದಿರುವ ಶಕ್ತಿಗೆ ನಮಿಸದೆ ಮನೆಯಿಂದ ಹೊರಬರುವುದಿಲ್ಲ ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ಅವರು ಶತ್ರುಗಳ ನಾಶಕ್ಕಾಗಿ ವಿಶೇಷ ಪೂಜೆ ಮಾಡಿಸಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಪ್ರತಿದಿನ ಪೂಜೆ ಮಾಡುತ್ತೇನೆ. ನನಗೆ ಒಳ್ಳೆಯದಾಗಲಿ, ನನಗೆ ಯಾರ್ಯಾರು ತೊಂದರೆ ಕೊಡುತ್ತಾರೋ ಅವರಿಂದ ರಕ್ಷಣೆ ಸಿಗಲಿ ಎಂದು ಪೂಜೆ ಮಾಡಿಸುತ್ತೇನೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ ಎಂದರು.
Previous Articleಕೋರ್ಟ್ ನಲ್ಲಿ ಎಂತಹ ಮುಖಾಮುಖಿ ನೋಡಿ
Next Article ಬಿಜೆಪಿಯಲ್ಲಿ ಇವರೇ ಪವರ್ ಫುಲ್