ಬೆಂಗಳೂರು,ಜು.19- ಮಹಾನಗರಿ ಬೆಂಗಳೂರಿನಲ್ಲಿ ನಡೆಯಬಹುದಾಗಿದ್ದ ಭಾರಿ ವಿಧ್ವಂಸಕ ಕೃತ್ಯವೊಂದನ್ನು ತಡೆಯುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ.
ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಐವರು ಶಂಕಿತ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನಕನಗರದ ಸುಲ್ತಾನ ಪಾಳ್ಯ ಮಸೀದಿ ಬಳಿ ಐವರು ಶಂಕಿತರು ಇದ್ದಾರೆ ಎಂಬ ಮಾಹಿತಿ ಆಧರಿಸಿ ರಹಸ್ಯ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಪೊಲೀಸರು ಭಯೋತ್ಪಾದಕರನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರ ಕುರಿತಂತೆ ವಿವರಣೆ ನೀಡಿದ ಅವರು, ಸುಹೈಲ್, ಉಮರ್,ತಬ್ರೆಜ್, ಮುದಾಸಿರ್ ಹಾಗೂ ಫೈಜಲ್ ರಬ್ಬಾನಿ ಸೇರಿ ಐವರು ಶಂಕಿತ ಭಯೋತ್ಪಾದಕರಾಗಿದ್ದು ಅವರನ್ನು ಮಡಿವಾಳ ಟೆಕ್ನಿಕಲ್ ಸೆಲ್ನಲ್ಲಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಾಗುತ್ತಿದೆ ಈ ಎಲ್ಲರೂ ರೌಡಿಗಳಾಗಿದ್ದು, 2017ರಲ್ಲಿ ಆರ್.ಟಿ ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಅದರಲ್ಲಿ ಬಂಧಿತ ಐವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಉಗ್ರರ ಸಂಪರ್ಕ ಬೆಳೆಸಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು.
ಸ್ಪೋಟಕ ಪತ್ತೆ:
ಶಂಕಿತ ಉಗ್ರರ ಬಳಿ ಸ್ಪೋಟಕ ವಸ್ತುಗಳು, 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡು, 2 ಡ್ರ್ಯಾಗರ್, 2 ಸೆಟಲೈಟ್ ಫೋನ್ ಹಾಗೂ 4 ಗ್ರೆನೈಡ್ ಗಳನ್ನು ಜಪ್ತಿ ಮಾಡಲಾಗಿದೆ.
ಇದಲ್ಲದೆ ಶಂಕಿತರ ಬಳಿ ದೊರೆತ ಮೊಬೈಲ್ ಕರೆ ವಿವರಗಳು ವಾಟ್ಸ್ ಆಫ್ ಸಂದೇಶಗಳು, ಲ್ಯಾಪ್‌ಟಾಪ್ ಗಳಲ್ಲಿರುವ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ಹೇಳಿದರು.
ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಜುನೈದ್ ತಲೆಮರಿಸಿಕೊಂಡಿದ್ದು ಆತನಿಗಾಗಿ ಬಂಧಿತ ಶಂಕಿತ ಭಯೋತ್ಪಾದಕರು ನೀಡುವ ಮಾಹಿತಿ ಇನ್ನಿತರ ಮೂಲಗಳನ್ನು ಆಧರಿಸಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದರು.
ಇದಲ್ಲದೆ ಶಂಕಿತ ಭಯೋತ್ಪಾದಕರ ಜೊತೆಗೆ ಇನ್ನಿಬ್ಬರು ಲಿಂಕ್ನಲ್ಲಿರುವ ಮಾಹಿತಿ ಇದೆ. ಆ ಇಬ್ಬರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಅವರಿಗಾಗಿ ಮತ್ತೊಂದು ಪೊಲೀಸ್ ತಂಡದಿಂದ ತೀವ್ರ ಹುಡುಕಾಟ ನಡೆಯುತ್ತಿದೆ .
ವಿಧ್ವಂಸಕ ಕೃತ್ಯಕ್ಕೆ ಸಂಚು:
ತನಿಖಾ ತಂಡಗಳು ಶಂಕಿತ ಉಗ್ರರನ್ನು ಬಂಧಿಸುವ ಮೂಲಕ ಅವರು ರೂಪಿಸಿದ ಪ್ರಮುಖ ದುಷ್ಕೃತ್ಯಕ್ಕೆ ಬ್ರೇಕ್ ಹಾಕಿದ್ದಾರೆ. ಶಂಕಿತರು ದೊಡ್ಡ ಮಟ್ಟದ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಪಿಸ್ತೂಲ್ ಸೇರಿದಂತೆ ಬಾಂಬ್ ಕಚ್ಚಾ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡಿದ್ದರು.
ಸುಮಾರು 10ಕ್ಕೂ ಹೆಚ್ಚು ಮಂದಿಯಿಂದ ನಗರ ಸೇರಿ ಇನ್ನಿತರ ಬೃಹತ್ ಸ್ಫೋಟಕ ಮಾಡುವ ಯೋಜನೆ ನಡೆದಿದ್ದ ಬಗ್ಗೆ ಗುಪ್ತಚರ ಇಲಾಖೆಗೆ ನಿಖರ ಮಾಹಿತಿ ಸಿಕ್ಕಿತ್ತು. ಕೂಡಲೇ ಬೆಂಗಳೂರು ಸಿಸಿಬಿ ತಂಡಕ್ಕೆ ಮಾಹಿತಿ ರವಾನಿಸಲಾಗಿದೆ. ತಕ್ಷಣ ಅಲರ್ಟ್ ಆದ ಸಿಸಿಬಿ ಪೊಲೀಸರು ಶಂಕಿತರ ಲೊಕೇಶನ್ ಟ್ರೇಸ್ ಮಾಡಿ ಬಂಧಿಸಿದ್ದಾರೆ. ಗುಪ್ತಚರ ಇಲಾಖೆ, ಎನ್ಐಎ ಹಾಗೂ ಸಿಸಿಬಿ ತಂಡಗಳಿಂದ ಜಂಟಿ ಕಾರ್ಯಾಚರಣೆ ನಡೆದಿದೆ.
ನಾಲ್ವರು ರೌಡಿಶೀಟರ್ಗಳು:
ಸಿಸಿಬಿ ವಶದಲ್ಲಿರುವ ಶಂಕಿತರಲ್ಲಿ ನಾಲ್ವರು ಆರ್ಟಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ಗಳಾಗಿದ್ದಾರೆ. ಕೊರೊನಾ ಸಮಯದಲ್ಲಿ ಓರ್ವನನ್ನೂ ಅಪಹರಿಸಿ ಕೊಲೆ ಮಾಡಿದ್ದ ಆರೋಪಿಗಳಾಗಿದ್ದಾರೆ. ಜೈಲಿನಲ್ಲಿಯೇ ಈ ನಾಲ್ವರಿಗೂ ಶಂಕಿತ ಉಗ್ರರ ಪರಿಚಯ ಆಗಿತ್ತು. ಬಳಿಕ ಶಂಕಿತರ ಜೊತೆ ಸಂಪರ್ಕ ಮುಂದುವರೆಸಿಕೊಂಡು ದುಷ್ಕೃತ್ಯ ಎಸಗಲು ತರಬೇತಿ ಪಡೆದಿದ್ದಾರೆ.
ಜೈಲಿನಿಂದ ಹೊರ ಬಂದ ಬಳಿಕ ವಿಧ್ವಂಸಕ ಕೃತ್ಯಕ್ಕೆ ಸಂಚು ಮಾಡಿದ್ದರು. ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನೆಲ್ಲ ಸಿದ್ಧಪಡಿಸಿದ್ದರು.
ಜೈಲಲ್ಲೇ ತರಬೇತಿ:
ಇವರ ಜೊತೆಗೆ ಇನ್ನೂ ಹಲವರು ಸೇರಿ ಕೃತ್ಯಕ್ಕೆ ಯೋಜನೆ ರೂಪಿಸಿದ್ದ ಮಾಹಿತಿ ಇದೆ. ಇವರಿಗೆ ಲಿಂಕ್ ಇರುವ ಮತ್ತಷ್ಟು ಮಂದಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಸಿಸಿಬಿ ಮೂಲಗಳಿಂದ ತಿಳಿದುಬಂದಿದೆ.
ಕಳೆದ 2017 ಅಕ್ಟೋಬರ್ ನಲ್ಲಿ 21 ವರ್ಷದ ನೂರ್ ಅಹಮದ್ ಎಂಬ ಯುವಕನನ್ನು ಅಪಹರಿಸಿ ಕೊಲೆ ಮಾಡಿ ಜೈಲು ಸೇರಿದ್ದ ಜುನೈದ್ ಗ್ಯಾಂಗ್, ಶಂಕಿತ ಉಗ್ರರಾಗಿ ಹೊರ ಬಂದಿದ್ದಾರೆ.ಸಾಮಾನ್ಯ ರೌಡಿಗಳಾಗಿ ಕೊಲೆ ಕೇಸ್ ನಲ್ಲಿ ಜೈಲಿಗೆ ಹೋಗಿ ಜೈಲಲ್ಲೆ ಉಗ್ರ ತರಬೇತಿ ಪಡೆದುಕೊಂಡಿದ್ದರು ಎಂದು ಹೇಳಿದ
4 Comments
индийский пасьянс гадание индийский пасьянс гадание .
как заработать деньги онлайн как заработать деньги онлайн .
вывод из запоя выезд бригады специалистов http://vyvod-iz-zapoya-v-sankt-peterburge.ru/ .
идеи для маленького бизнеса http://biznes-idei13.ru/ .