ರಾಕ್‌ಲೈನ್ ವೆಂಕಟೇಶ್ ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಮತ್ತು ನಟ/ ನಿರ್ದೇಶಕ ಪ್ರಭುದೇವ ಅವರ ಕಾಂಬಿನೇಷನ್‌ನಲ್ಲಿ ಒಂದು ಹೊಸ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ, ಅದ್ದೂರಿಯಾಗಿ ಸಿದ್ಧಗೊಳ್ಳಲಿದೆ.
ಶಿವರಾಜ್‌ಕುಮಾರ್ ಮತ್ತು ಪ್ರಭುದೇವ ಕಾಂಬಿನೇಷನ್‌ನ ಈ ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡಲಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಆದರೆ ನಿರ್ಮಾಪಕರು ಯಾರು ಅನ್ನೋದು ಮಾತ್ರ ಬಹಿರಂಗಗೊಂಡಿರಲಿಲ್ಲ. ಇದೀಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದೆ. ರಾಕ್‌ಲೈನ್ ಎಂಟರ್‌ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ ಈ ಸಿನಿಮಾವು ಮೇ ತಿಂಗಳಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.
ಶಿವಣ್ಣ-ಪ್ರಭುದೇವ ಜೊತೆಯಾಗಿ ನಟಿಸಲಿರುವ ಈ ಸಿನಿಮಾಗೆ ‘ಕುಲದಲ್ಲಿ ಕೀಳ್ಯಾವುದು..’ ಅಂತ ಸದ್ಯಕ್ಕೆ ಟೈಟಲ್ ಇಡಲಾಗಿದೆ. ಇದೇ ಶೀರ್ಷಿಕೆ ಅಧಿಕೃತವಾಗಿ ಇರಲಿದೆಯೇ ಎಂಬುದು ಇನ್ನೂ ಗೊತ್ತಾಗಿಲ್ಲ.
ಇನ್ನು ರಾಕ್‌ಲೈನ್ ವೆಂಕಟೇಶ್ ಅವರು ಅದ್ದೂರಿ ಸಿನಿಮಾಗಳನ್ನು ನಿರ್ಮಾಣ ಮಾಡುವುದರಲ್ಲಿ ಹೆಸರಾದವರು. ಈಗಾಗಲೇ ‘ಲಿಂಗಾ’, ‘ಬಜರಂಗಿ ಭಾಯಿಜಾನ್’, ‘ಸೂಪರ್’, ‘ಪವರ್’ ಥರದ ಅನೇಕ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ ಇದೀಗ ಶಿವಣ್ಣ ಹಾಗು ಪ್ರಭುದೇವ ಕಾಂಬಿನೇಷನ್ ಚಿತ್ರ ಹೇಗಿರಲಿದೆ ಕಾದು ನೋಡಬೇಕು.
ಶಿವರಾಜ್‌ಕುಮಾರ್ ಮತ್ತು ಪ್ರಭುದೇವ ಕಾಂಬಿನೇಷನ್‌ನ ‘ಕುಲದಲ್ಲಿ ಕೀಳ್ಯಾವುದು..’
Previous Articleಬಾಡಿಗೆಗಿದ್ದ ಯುವತಿ ಮೇಲೆ ಮನೆ ಮಾಲೀಕನಿಂದಲೇ ಅತ್ಯಾಚಾರ
Next Article ರೋಹಿತ್ ಚಕ್ರವರ್ತಿ ಕಿಡಿಗೇಡಿ !!