ಬೆಂಗಳೂರು, ಜ.14: ಲೋಕಸಭಾ ಚುನಾವಣೆ ವೇದಿಕೆ ಸಜ್ಜುಗೊಳ್ಳುತ್ತಿರುವ ಬೆನ್ನಲ್ಲೇ, ರಾಜಕೀಯ ನಾಯಕರ ನಡುವಿನ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಇದರ ನಡುವೆ ಬಿಜೆಪಿ ಹಿರಿಯ ನಾಯಕ ಹಾಗೂ ಸಂಸದ ಜಿ.ಎಂ.ಸಿದ್ದೇಶ್ (GM Siddheshwara) ನನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾರೆ ಕೇಂದ್ರದ ಮಾಜಿ ಸಚಿವರೂ ಆಗಿರುವ ಇವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂದು ಹೇಳುತ್ತಿರುವಾಗ ಇವರ ಈ ಹೇಳಿಕೆ ಸಂಚಲನ ಮೂಡಿಸಿದೆ.
ದಾವಣಗೆರೆಯಲ್ಲಿ ಹೊಂಡದ ಸರ್ಕಲ್ ಚಂದ್ರಮೌಳೇಶ್ವರ ದೇವಾಲಯದಲ್ಲಿ ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದಿಂದ ಸ್ವಚ್ಚತಾ ಕಾರ್ಯ ಕೈಗೊಳ್ಳಾಗಿತ್ತು.ಇದರಲ್ಲಿ ಜಿ.ಎಂ.ಸಿದ್ದೇಶ್ ಪಾಲ್ಗೊಂಡಿದ್ದರು.
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಜಿಲ್ಲಾ ಮುಖಂಡರು ಪಾಲ್ಗೊಂಡಿದ್ದರು. ಜೈ ಶ್ರೀರಾಮ್ ಘೋಷಣೆಯೊಂದಿಗೆ ಸತತ ಒಂದು ಗಂಟೆಗಳ ಕಾಲ ಸಂಸದರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು ನನ್ನನ್ನು ತೆಗೆಯಬೇಕು ಎಂದು ಕೆಲವರು ಕಾಯುತ್ತಿದ್ದಾರೆ.
ಕಾಲು ತೆಗೆಯಬೇಕು ಎಂದು ಹೊಂಚು ಹಾಕಿದ್ದಾರೆಮವಿಷಹಾಕಿ ಸಾಯಿಸಲು ಸಂಚು ರೂಪಿಸಿದ್ದಾರೆ. ಹಾಗಾಗಿ ಎಲ್ಲೇ ಹೋದ್ರೂ ಎಚ್ಚರದಿಂದ ಇರುತ್ತೇನೆ. ನನಗೆ ಯಾರು ಏನೇ ಕೊಟ್ಟರೂ ನಾನು ತಿನ್ನುವುದಿಲ್ಲ ಎಂದು ಹೇಳಿದರು
ದಾವಣಗೆರೆಯಿಂದ ತೆಗೆಯಲು ಹೊಂಚು ಹಾಕಿದ್ದಾರೆ. ನನ್ನ ಸ್ನೇಹ ಬಳಗದಲ್ಲೇ ಈ ರೀತಿಯಾಗಿ ಹೊಂಚು ಹಾಕುತ್ತಿದ್ದಾರೆ. ನನಗೆ ಜೀವ ಬೆದರಿಕೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.


1 Comment
Pharmacie moderne et humaine au service de votre quotidien – https://acceslibre.beta.gouv.fr/app/58-magny-cours/a/pharmacie/erp/pharmacie-du-circuit/ , La pharmacie oГ№ le bien-ГЄtre rime avec accessibilitГ© et qualitГ© .