Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಹನಿಟ್ರ್ಯಾಪ್, ಆನೆಗಳ ಖೆಡ್ಡಾಕ್ಕೂ ಬೀಳದ ಚಾಲಾಕಿ ಚಿರತೆ
    ಸುದ್ದಿ

    ಹನಿಟ್ರ್ಯಾಪ್, ಆನೆಗಳ ಖೆಡ್ಡಾಕ್ಕೂ ಬೀಳದ ಚಾಲಾಕಿ ಚಿರತೆ

    vartha chakraBy vartha chakraAugust 29, 2022Updated:August 29, 2022No Comments2 Mins Read
    Facebook Twitter WhatsApp Pinterest LinkedIn Tumblr Email
    ಸೆರೆ ಹಿಡಿಯಲಾಗದ ಚಿರತೆ
    Share
    Facebook Twitter LinkedIn Pinterest Email WhatsApp
    Verbattle
    Verbattle

    ಕಳೆದ 25 ದಿನಗಳಿಂದ ನಗರದ ಜನತೆಯ ನಿದ್ದೆಗೆಡಿಸುತ್ತಿರುವ ಚಾಲಾಕಿ ಚಿರತೆಯನ್ನು ಸೆರೆ ಹಿಡಿಯಲು ಹಲವು ರೀತಿಯ ಸರ್ಕಸ್​ ಮಾಡಿದರೂ  ಸಾಧ್ಯವಾಗುತ್ತಿಲ್ಲ.
    ಹನಿಟ್ರ್ಯಾಪ್, ಆನೆಗಳ ಖೆಡ್ಡಾ,ಹಂದಿಬಲೆಗೂ ಸಿಗದ
    ಚಾಲಾಕಿ ಚಿರತೆ ಕಣ್ಣಾಮುಚ್ಚಾಲೇ ಆಟವಾಡುತ್ತಿದೆ.
    ಚಿರತೆ ಭೀತಿಯಿಂದ ಕಳೆದ 20ಕ್ಕೂ ದಿನಗಳಿಂದ ಶಾಲೆಗಳಿಗೆ ರಜೆಯನ್ನೂ ಘೋಷಿಸಲಾಗಿದೆ.
    ಇತ್ತ ಚಿರತೆ ಸಿಗುತ್ತಿಲ್ಲ, ಅತ್ತ ಮಕ್ಕಳಿಗೆ ಪಾಠ ಆಗುತ್ತಿಲ್ಲ ಎನ್ನುವ ಸ್ಥಿತಿ ಬೆಳಗಾವಿ ಮಂದಿಯದ್ದಾಗಿದೆ, ಜತೆಗೆ ಆಗಾಗ್ಗೆ ಕಾಣಿಸಿಕೊಳ್ಳುವ ಚಿರತೆಯಿಂದಾಗಿ ಓಡಾಡುವುದೂ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
    ಇದಾಗಲೇ ಅರಣ್ಯ ಇಲಾಖೆ ಸಾಧ್ಯವಾದಷ್ಟು ರೀತಿಯ ಯೋಜನೆ ರೂಪಿಸಿದರೂ ಅದು ಫಲಪ್ರದವಾಗಲಿಲ್ಲ.
    ಈ ಹಿನ್ನೆಲೆಯಲ್ಲಿ ಚಾಲಾಕಿ ಚಿರತೆ ಶೋಧಕ್ಕಾಗಿ ಅರಣ್ಯ ಇಲಾಖೆ ಯೋಜನೆ ಬದಲಾವಣೆ ಮಾಡಿದೆ. ಎರಡು ದಿನ ಕೇವಲ ಆಪರೇಷನ್ ಗಜಪಡೆ ನಡೆಸಲು ನಿರ್ಧಾರ ಮಾಡಿದೆ.
    ಚಿರತೆಗೆ ಡಿಸ್ಟರ್ಬ್ ಮಾಡದೇ ಸೆರೆಹಿಡಿಯಲು ಯೋಜನೆ ರೂಪಿಸಲಾಗಿದೆ.
    ಇಷ್ಟು ದಿನ ಅಳವಡಿಸಿದ್ದ ಸ್ಥಳ ಬಿಟ್ಟು ಬೋನು, ಟ್ರ್ಯಾಪ್ ಕ್ಯಾಮೆರಾ ಬೇರೆ ಸ್ಥಳದಲ್ಲಿ ಅಳವಡಿಕೆ ಮಾಡಲು ಸಿದ್ಧತೆ ನಡೆಸಲಾಗಿದೆ. 8 ಸಾಮಾನ್ಯ ಬೋನು,1 ದೊಡ್ಡದಾದ ಬೋನು, 23 ಟ್ರ್ಯಾಪ್ ಕ್ಯಾಮೆರಾಗಳ ಅಳವಡಿಕೆ ಮಾಡಲಾಗುತ್ತಿದೆ.
    ಕೋಂಬಿಂಗ್ ವೇಳೆ ಚಿರತೆಯ ಹೆಜ್ಜೆ ಗುರುತು ಪತ್ತೆಯಾದ ಹಿನ್ನೆಲೆಯಲ್ಲಿ ಆ ಜಾಗದಸುತ್ತಮುತ್ತ ಟ್ರ್ಯಾಪ್ ಕ್ಯಾಮೆರಾ, ಬೋನುಗಳ ಅಳವಡಿಕೆ ಮಾಡುವ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿದೆ.
    ಟ್ರ್ಯಾಪ್ ಕ್ಯಾಮೆರಾ ಬೋನುಗಳನ್ನು ಶಿಫ್ಟ್ ಮಾಡುತ್ತೇವೆ. ಆದಷ್ಟು ಚಿರತೆಯನ್ನು ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಿದ್ದೇವೆ. ನಿನ್ನೆ ಹೆಜ್ಜೆ ಗುರುತುಗಳು ಪತ್ತೆಯಾಗಿದೆ ಎಂದು ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ ಹೇಳಿದ್ದಾರೆ.
    250 ಎಕರೆ ಪ್ರದೇಶದಲ್ಲಿಯೇ ಚಿರತೆ ಇರುವ ಶಂಕೆ ವ್ಯಕ್ತವಾಗಿದೆ. ಈ ನಡುವೆಯೇ ಶಾಲೆ ಇನ್ನೂ ಆರಂಭ ಮಾಡಲಿಲ್ಲ. ಗಾಲ್ಫ್ ಮೈದಾನ ಸುತ್ತ ಬಿಗಿ ಭದ್ರತೆ ಒದಗಿಸಿ ಶಾಲೆ ಆರಂಭಿಸುವ ವಿಚಾರದ ಕುರಿತು ಜಿಲ್ಲಾಧಿಕಾರಿಗಳು ತಗೆದುಕೊಳ್ಳಬೇಕು ಎಂದು ಡಿಎಫ್ಒ ಆ್ಯಂಥೋನಿ ಮರಿಯಪ್ಪ ಹೇಳಿಕೆ ನೀಡಿದ್ದಾರೆ.
    ಮೂತ್ರ ಸಿಂಪಡಣೆ:
    ಇಂದು ಎಂಬತ್ತು ಜನ ಸಿಬ್ಬಂದಿ, ಜೆಸಿಬಿ, ಆನೆಗಳಿಂದ ಚಿರತೆ ಸೆರೆಗೆ ಪ್ಲ್ಯಾನ್ ಮಾಡಲಾಗಿದೆ. ಪ್ರತಿದಿನ 250 ಎಕರೆ ಪ್ರದೇಶದಲ್ಲಿರುವ ಗಾಲ್ಫ್ ಮೈದಾನವನ್ನು ಸಿಬ್ಬಂದಿ ಶೋಧ ಮಾಡುತ್ತಿದ್ದಾರೆ. ಚಿರತೆ ಸೆರೆಯಾಗದ ಹಿನ್ನೆಲೆ ಎರಡು ದಿನಗಳಿಂದ ಹನಿಟ್ರ್ಯಾಪ್ ಅಸ್ತ್ರ ಪ್ರಯೋಗ ಮಾಡಲಾಗುತ್ತಿದೆ. ಚಿರತೆ ಸೆರೆಗೆ ಇಟ್ಟಿರುವ ಬೋನ್ ನಲ್ಲಿ ಹೆಣ್ಣು ಚಿರತೆ ಮೂತ್ರ ಸಿಂಪಡಣೆ ಮಾಡಲಾಗಿದೆ.
    ಈ ಮೂಲಕ ಚಿರತೆ‌ಯನ್ನ ಲೈಂಗಿಕವಾಗಿ ಆಕರ್ಷಣೆ ಮಾಡಿ ಖೆಡ್ಡಾಗಿ ಬೀಳಿಸುವ ಪ್ಲ್ಯಾನ್ ಮಾಡಲಾಗಿದೆ. ಆದರು ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸಿ ಚಾಲಾಕಿ ಚಿರತೆ ಓಡಾಡುತ್ತಿದೆ.
    ಸೆರೆಯಾಗದ ಚಿರತೆಯಿಂದಾಗಿ ನಗರದ ಜನರಲ್ಲಿ ಆತಂಕ ದೂರವಾಗುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಸೆರೆಹಿಡಿಯುವ ನಿರತಂತರ ಪ್ರಯತ್ನದಲ್ಲಿ ತೊಡಗಿದ್ದಾರೆ.

    Verbattle
    Verbattle
    Verbattle
    ಶಾಲೆ
    Share. Facebook Twitter Pinterest LinkedIn Tumblr Email WhatsApp
    Previous Articleಮುಳುಗುತ್ತಿದ್ದ ಬಸ್ ನಿಂದ ಪ್ರಯಾಣಿಕರು ಪಾರು
    Next Article ಇಂದೂ ಬರಲಿಲ್ಲ ಹಿಜಾಬ್ ತೀರ್ಪು..
    vartha chakra
    • Website

    Related Posts

    ಮಸೀದಿಯಾದ ದೇವಸ್ಥಾನ

    February 25, 2026

    ಅತ್ತೆಯ ಸಾವಿಗೆ ದೇವರ ಮೊರೆ ಹೋದ ಸೊಸೆ! ಹುಂಡಿಯಲ್ಲಿ ಸಿಕ್ಕ ಪತ್ರ ವೈರಲ್!!

    February 24, 2026

    ನಾಯಿ ಕಚ್ಚಿದ್ದಕ್ಕೆ ಹೀಗಾ ಮಾಡಿಕೊಳ್ಳೋದು..?!

    February 24, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸರ್ಕಾರಿ ನೌಕರನ ಮನೆಯಲ್ಲಿ ನೋಟುಗಳ ರಾಶಿ

    ಗದ್ದುಗೆ ಗುದ್ದಾಟಕ್ಕೆ ಪರಮೇಶ್ವರ್ ಎಂಟ್ರಿ!

    ಮಸೀದಿಯಾದ ದೇವಸ್ಥಾನ

    ಕೇರಳದಿಂದ ‘ಕೇರಳಂ’ವರೆಗೆ: ರಾಜ್ಯದ ಹೆಸರು ಬದಲಾವಣೆಯ ಸಾಂವಿಧಾನಿಕ ಹಾದಿ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • MichaelRem on ಮತ್ತೊಂದು ಆರೋಪದಲ್ಲಿ ಸಿಲುಕಿದ ಶರಣರು
    • Bxxyun on ಪೊಲೀಸ್ ಇನ್ಸ್ ಪೆಕ್ಟರ್ ಸಸ್ಪೆಂಡ್.
    • Cgtqdz on ಪ್ರಧಾನಿಗೆ ಪತ್ರ ಬರೆದ ಯತ್ನಾಳ್.
    Latest Kannada News

    ಸರ್ಕಾರಿ ನೌಕರನ ಮನೆಯಲ್ಲಿ ನೋಟುಗಳ ರಾಶಿ

    February 25, 2026

    ಗದ್ದುಗೆ ಗುದ್ದಾಟಕ್ಕೆ ಪರಮೇಶ್ವರ್ ಎಂಟ್ರಿ!

    February 25, 2026

    ಮಸೀದಿಯಾದ ದೇವಸ್ಥಾನ

    February 25, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.