ಬೆಂಗಳೂರು – ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಹಿಂದುಳಿದ ವರ್ಗಗಳ ಆಯೋಗದ ಜಾತಿಗಣತಿ ಎನ್ನಲಾದ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಹಲವಾರು ಮಹತ್ವದ ಶಿಫಾರಸುಗಳನ್ನು ಮಾಡಿದೆ.
ಈ ವರದಿಯಲ್ಲಿನ ಜಾತಿಗಳ ಜನಸಂಖ್ಯೆಯ ವಿವರ ಒಕ್ಕಲಿಗ ವೀರಶೈವ ಸೇರಿದಂತೆ ಹಲವು ಪ್ರಭಾವಿ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಿದೆ ಆದರೆ ಇದರ ನಡುವೆ ಅದು ಹಿಂದುಳಿದ ವರ್ಗಗಳ ಮೀಸಲಾತಿ ವ್ಯವಸ್ಥೆಯ ಮೂಲ ಸಂರಚನೆಯಲ್ಲೇ
ಕೆಲವು ಬದಲಾವಣೆಗಳನ್ನು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಕಳೆದ ಹತ್ತು ವರ್ಷಗಳ ಹಿಂದೆ ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಮೀಕ್ಷೆಯ ದತ್ತಾಂಶಗಳ ವಿವರ ಸಂಗ್ರಹಿಸಿರುವ ಜಯಪ್ರಕಾಶ್ ಹೆಗಡೆ ನೇತೃತ್ವದ ಆಯೋಗ ಒಂದು ರೀತಿಯಲ್ಲಿ ಹಿಂದುಳಿದ ವರ್ಗಗಳಿಗೆ ಒಳ ಮೀಸಲಾತಿ ಜಾರಿಗೆ ತರುವಂತೆ ಸಲಹೆ ಮಾಡಿದೆ.
ಅಷ್ಟೇ ಅಲ್ಲ ಸದ್ಯ ಹಿಂದುಳಿದ ವರ್ಗಗಳಿಗೆ ನೀಡಲಾಗುತ್ತಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕು ಇದಕ್ಕಾಗಿ ಅಗತ್ಯವೆನಿಸಿದರೆ ಸಂವಿಧಾನ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ತನ್ನ ವರದಿಯಲ್ಲಿ ವಿವರಿಸಿದೆ ಎಂದು ಗೊತ್ತಾಗಿದೆ.
ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣ ಪ್ರಸ್ತುತ ಶೇ.32 ರಷ್ಟಿದೆ. ಪ್ರಸ್ತುತ ಹಿಂದುಳಿದ ವರ್ಗಗಳ ಜನಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಅದರ ಅನುಪಾತಕ್ಕೆ ತಕ್ಕಂತೆ ಮೀಸಲಾತಿ ಪ್ರಮಾಣ ಶೇ.32 ರಿಂದ ಶೇ.51ಕ್ಕೆ ಹೆಚ್ಚಿಸುವಂತೆ ವರದಿ ಹೇಳಿದೆ.
ಸದ್ಯ ಪ್ರವರ್ಗ 2 ಎ ಅನ್ವಯ ನೀಡುತ್ತಿರುವ ಮೀಸಲಾತಿಯ ಲಾಭ ಕೆಲವೇ ಸಮುದಾಯದ ಪಾಲಾಗುತ್ತಿದೆ.ಸ್ವಾತಂತ್ರ್ಯ ಲಭಿಸಿ ಇಷ್ಟು ವರ್ಷಗಳು ಕಳೆದರೂ ತಮ್ಮ ಸಮುದಾಯದಿಂದ ಓರ್ವನೂ ಪದವೀಧರನಾಗದ ಸಮುದಾಯಗಳಿವೆ.ಇವುಗಳಿಗೆ ಇಲ್ಲಿಯವರೆಗೆ ಮೀಸಲಾತಿ ಲಾಭವೇ ಸಿಕ್ಕಿಲ್ಲ. ಈ ರೀತಿ ಮೀಸಲಾತಿ ಪ್ರಯೋಜನವನ್ನೇ ಪಡೆಯದ ಅನೇಕ ಸಮುದಾಯಗಳು ಈ ವರ್ಗದಲ್ಲಿವೆ.
ಇಂತಹ ಸಮುದಾಯಗಳಿಗೆ ಮೀಸಲಾತಿಯ ಲಾಭ ಸಿಗದಿರುವುದು ದೊಡ್ಡ ವಂಚನೆಯಾಗಿದೆ ಎಂದು ಹೇಳಿರುವ ಆಯೋಗ ಪ್ರಮುಖವಾಗಿ ಕಾಯಕ ಸಮುದಾಯಗಳೆಂದು ಗುರುತಿಸಲ್ಪಡುವ ಮಡಿವಾಳ,ಸವಿತಾ,ಕಮ್ಮಾರ,ಕುಂಬಾರ,ಬಡಗಿ, ಸಿಂಪಿ ಮೊದಲಾದ ಸಮುದಾಯಗಳನ್ನು ತೀರಾ ಹಿಂದುಳಿದ ಸಮುದಾಯಗಳು ಎಂದು ಗುರುತಿಸಿದೆ.
ಈ ಸಮುದಾಯಗಳಿಗೆ ಮೀಸಲಾತಿಯ ಲಾಭ ಸಿಗಬೇಕು ಇದಕ್ಕಾಗಿ ಸದ್ಯ ಆದಿವಾಸಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ ಇರುವ ಪ್ರವರ್ಗ 1 ಅನ್ನು ವಿಭಜಿಸಿ ಪ್ರವರ್ಗ 1 ಮತ್ತು ಪ್ರವರ್ಗ 1A ಎಂದು ಬದಲಾವಣೆ ಮಾಡುವಂತೆ ಶಿಫಾರಸು ಮಾಡಿದೆ.
ಸದ್ಯ ಪ್ರವರ್ಗ 2 A ನಲ್ಲಿರುವ ಅತಿ ಹಿಂದುಳಿದ ಸಮುದಾಯಗಳಾದ ಮಡಿವಾಳ, ಸವಿತಾ, ಕಮ್ಮಾರ, ಕುಂಬಾರ,ಬಡಗಿ,ಮೊದಲಾದ ಸಮುದಾಯಗಳನ್ನು
ಪ್ರವರ್ಗ 1A ಗೆ ವರ್ಗಾವಣೆ ಮಾಡುವಂತೆ ಸಲಹೆ ಮಾಡಿದೆ.
ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಆಯೋಗ ಪ್ರವರ್ಗ 2 ಸಿ ಮತ್ತು ಡಿ ಹಾಗೂ ಪ್ರವರ್ಗ 3 ಸಿ ಮತ್ತು ಡಿ ಎಂಬ ವಿಭಜನೆ ಮಾಡಲಾಗಿತ್ತು. ಆದರೆ, ಈಗ ಆಯೋಗ ಅಂದು ಮಾಡಲಾಗಿದ್ದ ಸಿ ಮತ್ತು ಡಿ ವಿಭಜನೆಗಳನ್ನು ಕೈ ಬಿಡಲಾಗಿದೆ. ಹಿಂದೆ ಇದ್ದ ಮೀಸಲಾತಿ ಮುಂದುವರಿಸಿ ಪ್ರಮಾಣ ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿದೆ.
ಪಂಚಮಸಾಲಿಗಳು ಪ್ರತ್ಯೇಕ ಮೀಸಲಾತಿಗೆ ಬೇಡಿಕೆಯನ್ನಿಟ್ಟಿದ್ದಾರೆ. ಆದರೆ, ಈಗ ಸಲ್ಲಿಸಿರುವ ವರದಿ ಪ್ರಕಾರ ಹಿಂದೆ ಇದ್ದಂತೆ ಪ್ರವರ್ಗ 3 B ಯಲ್ಲಿಯೇ ವೀರಶೈವ ಹಾಗೂ ಲಿಂಗಾಯತ ಜಾತಿಗಳು ಮುಂದುವರಿಯಲಿವೆ. ಆದರೆ, ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಲಹೆ ನೀಡಲಾಗಿದೆ. ಈಗ ಶೇ.5 ಮೀಸಲಾತಿ ಇದ್ದು ಅದನ್ನು ಶೇ.7 ಕ್ಕೆ ಹೆಚ್ಚಿಸಲು ವರದಿ ಹೇಳಿದೆ. ಒಕ್ಕಲಿಗರು ಪ್ರವರ್ಗ 3 A ನಲ್ಲಿದ್ದು ಈಗ ಮೀಸಲಾತಿ ಶೇ.4 ಇದೆ. ಅದನ್ನು ಶೇ 6ಕ್ಕೆ ಹೆಚ್ಚಿಸಲು ವರದಿ ಹೇಳಿದೆ.
5 Comments
гадать индийский пасьянс гадать индийский пасьянс .
электрокарниз двухрядный цена http://provorota.su .
купить готовые пластиковые окна купить готовые пластиковые окна .
что можно продавать чтобы заработать http://kak-zarabotat-dengi11.ru/ .
снятие ломок http://www.snyatie-lomki-narkolog.ru .