ಲಖನೌ:
ಇದೊಂದು ಅಪರೂಪದ ಘಟನೆ.ಇಡೀ ವೃತ್ತಾಂತವನ್ನು ಕೇಳಿದಾಗ ಹೀಗೂ ಉಂಟೆ ಎಂದು ಅಚ್ಚರಿಪಡುವಂತಹ ವಿದ್ಯಮಾನ ಇದಾಗಿದೆ. ಗಂಡನೊಬ್ಬ ತಮ್ಮ ಪತ್ನಿ ಪರಪುರುಷನೊಂದಿಗೆ ಸಲುಗೆಯಿಂದ ಇದ್ದಾಳೆ ಎಂದು ತಿಳಿದರೆ ಕೆಂಡಮಂಡಲಾಗುತ್ತಾನೆ. ಈ ವಿದ್ಯಮಾನ ವಿಚ್ಚೇದನ ಇಲ್ಲವೇ ಕೊಲೆಯಂತಹ ಸಂಗತಿಗಳಿಗೂ ಕಾರಣವಾಗುವ ಅನೇಕ ಘಟನೆಗಳನ್ನು ಕೇಳಿ, ನೋಡಿ, ಓದಿ ತಿಳಿದಿದ್ದೇವೆ.
ಆದರೆ ಇದೊಂದು ಅಪರೂಪದ ಘಟನೆ ತಾನು ಮೆಚ್ಚಿ ಮದುವೆಯಾದ ಮಡದಿ ಪರ ಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ತಿಳಿದು ಆಕೆಯನ್ನು ಆತನಿಗೆ ಮದುವೆ ಮಾಡಿ ಕಳುಹಿಸಿಕೊಟ್ಟಿದ್ದಾನೆ ಆನಂತರ ಆಕೆಯನ್ನು ಬಿಟ್ಟಿರಲಾಗದೆ ಕಾಡಿಬೇಡಿ ಮತ್ತೆ ವಾಪಸ್ ಕರೆತಂದು ಸಂಸಾರ ಮಾಡುತ್ತಿದ್ದಾನೆ ಈ ಘಟನೆ ನಡೆದಿರುವುದು ಉತ್ತರ ಪ್ರದೇಶ ರಾಜ್ಯದ ಸಂತ ಕಬೀರ ನಗರಜಿಲ್ಲೆಯಲ್ಲಿ.
ಈ ಜಿಲ್ಲೆಯ ಗ್ರಾಮವೊಂದರ ನಿವಾಸಿ ಬಬ್ಲೂ ಎಂಬಾತನಿಗೆ ಕಳೆದ 2017ರಲ್ಲಿ ರಾಧಿಕಾ ಎಂಬ ಯುವತಿಯ ಜೊತೆಗೆ ಮದುವೆಯಾಗಿತ್ತು, ಕುಟುಂಬಸ್ಥರು ನೋಡಿ ಮಾಡಿದ ಮದುವೆ ಇದಾಗಿತ್ತು ಪತಿ, ಪತ್ನಿ ಅತ್ಯಂತ ಅನ್ಯೋನ್ಯದಿಂದ ಇದ್ದರು. ಇವರಿಗೆ 9 ವರ್ಷದ ಒಬ್ಬ ಮಗ ಹಾಗೂ ಏಳು ವರ್ಷದ ಮಗಳಿದ್ದಾಳೆ.
ಬಬ್ಲೂ ತನ್ನ ಕುಟುಂಬದ ಜೀವನ ನಿರ್ವಹಣೆಗಾಗಿ ಹೊರಗಡೆ ದುಡಿಯಲು ಹೋಗುತ್ತಿದ್ದ. ಕೇವಲ ತನ್ನ ಗ್ರಾಮ ಮಾತ್ರವಲ್ಲ ರಾಜ್ಯದ ಹಲವು ಭಾಗಗಳಿಗೆ ಕೆಲಸ ಅರಸಿ ಹೋಗುತ್ತಿದ್ದ ಹೀಗಾಗಿ ಅಪರೂಪಕೊಮ್ಮೆ ಈತ ತನ್ನ ಊರಿಗೆ ಮರಳುತ್ತಿದ್ದ ಹೀಗಿರುವಲ್ಲಿ ರಾಧಿಕಾ ತನ್ನ ನೆರೆ ಮನೆಯ ಯುವಕ ವಿಶಾಲ್ ಕುಮಾರ್ ಎಂಬ ಯುವಕನೊಂದಿಗೆ ಸ್ನೇಹ ಬಳಸಿಕೊಂಡಿದ್ದಾಳೆ ಆನಂತರ ಇದು ದೈಹಿಕ ಸಂಬಂಧಕ್ಕೆ ತಿರುಗಿದೆ
ವಿಷಯ ತಿಳಿದ ರಾಧಿಕಾ ಅವರ ಪತಿಯ ಮನೆಯವರು ದೊಡ್ಡ ಗಲಾಟೆ ಮಾಡಿ ಬಬ್ಲುವನ್ನು ಊರಿಗೆ ಕರೆಸಿಕೊಂಡಿದ್ದಾರೆ ಊರಿಗೆ ಬಂದ ಬಬ್ಲೂ ತನ್ನ ಪತ್ನಿ ಜೊತೆಗೆ ಮಾತನಾಡಿದ್ದಾನೆ ಈ ವಿಚಾರವಾಗಿ ಯಾರೂ ಗಲಾಟೆ ಮಾಡಬಾರದು ಎಂದು ತನ್ನ ಕುಟುಂಬ ಸದಸ್ಯರಲ್ಲಿ ವಿನಂತಿಸಿದ್ದಾನೆ ಆ ಬಳಿಕ ಕುಟುಂಬ ಸದಸ್ಯರ ಮನವೊಲಿಸಿ, ಊರಿನ ಹಿರಿಯರ ಮನವೊಲಿಸಿ ತನ್ನ ಪತ್ನಿ ರಾಧಿಕಾ ಮತ್ತು ಆಕೆಯ ಗೆಳೆಯ ವಿಶಾಲ್ ಕುಮಾರ್ ಗೆ
ದೇವಸ್ಥಾನದಲ್ಲಿ ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಸಿ ಕಳುಹಿಸಿಕೊಟ್ಟಿದ್ದ. ಪತಿ ಪತ್ನಿಯರಾದ ನೀವಿಬ್ಬರೂ ಖುಷಿಯಿಂದ ಇರಿ ಇಬ್ಬರು ಮಕ್ಕಳನ್ನು ನಾನು ಸಾಕಿಕೊಳ್ಳುತ್ತೇನೆ ಸಧ್ಯದಲ್ಲಿಯೇ ಕಾನೂನು ಪ್ರಕಾರ ನಿನಗೆ ವಿಚ್ಛೇದನ ನೀಡುತ್ತೇನೆ ಎಂದು ರಾಧಿಕಾಗಿ ಹೇಳಿ ಕಳುಹಿಸಿದ್ದ ಈ ವಿಚಾರ ಭಾರೀ ಸುದ್ದಿಯಾಗಿತ್ತು.
ಇದೀಗ ಈ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿದೆ.ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜತೆ ಮದುವೆ ಮಾಡಿ ಕೊಟ್ಟು ಕಳುಹಿಸಿದ ಕೆಲವೇ ದಿನಗಳಲ್ಲಿ,ಬಬ್ಲೂ ತನ್ನ ಪತ್ನಿಯ ಬಳಿ ಹೋಗಿದ್ದಾನೆ. ಏಳು ಮತ್ತು ಎರಡು ವರ್ಷದ ತಮ್ಮ ಇಬ್ಬರು ಮಕ್ಕಳನ್ನು ಒಬ್ಬಂಟಿಯಾಗಿ ನೋಡಿಕೊಳ್ಳಲು ಕಷ್ಟಪಡುತ್ತಿರುವುದಾಗಿ ಹೇಳಿ ವಾಪಸ್ ಬರುವಂತೆ ಕೋರಿದ್ದಾನೆ.
ಇದಕ್ಕೆ ಸಮ್ಮತಿಸಿದ ಆಕೆ ನನ್ನ ಈಗಿನ ಪತಿ ವಿಕಾಸ್ ಮತ್ತು ಅವರ ಕುಟುಂಬ ಸದಸ್ಯರು ಒಪ್ಪಿದರೆ ಬರುವುದಾಗಿ ತಿಳಿಸಿದ್ದಾರೆ ಇದಾದ ಬಳಿಕ ಬಬ್ಲು ನೇರವಾಗಿ ವಿಕಾಸ್ ಮನೆಗೆ ಹೋಗಿ ರಾಧಿಕಾಳನ್ನು ವಾಪಸ್ ಕರೆದುಕೊಂಡು ಹೋಗುವುದಾಗಿ ವಿನಂತಿಸಿಕೊಂಡಿದ್ದಾನೆ. ತನ್ನ ಮಕ್ಕಳನ್ನು ಸಾಕಲು ಆಗುತ್ತಿರುವ ಕಷ್ಟದ ಬಗ್ಗೆ ಬಬ್ಲೂ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ನಂತರ ವಿಕಾಸ್ ಮತ್ತು ಅವರ ಕುಟುಂಬವು ರಾಧಿಕಾಗೆ ಬಬ್ಲೂ ಜೊತೆ ಮರಳಲು ಅವಕಾಶ ಮಾಡಿಕೊಟ್ಟಿದೆ.
ಇದೀಗ ರಾಧಿಕಾಳನ್ನು ತನ್ನೊಂದಿಗೆ ಕರೆತಂದಿರುವ ಬಬ್ಲೂ ಅವಳಿಗೆ ಬಲವಂತವಾಗಿ ಮದುವೆಯಾಗಲಾಗಿತ್ತು, ಮದುವೆಯಾಗಿ ಕೆಲವು ದಿನಗಳ ನಂತರ ಅವಳು ನಿಷ್ಕಳಂಕಳು ಎಂದು ನನಗೆ ತಿಳಿಯಿತು. ನಾನು ಅವಳನ್ನು ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದಾನೆ.