ಬೆಂಗಳೂರು, ಡಿ.4- ರಾಜ್ಯದಲ್ಲಿ ಸಂಚಲನ ಮೂಡಿಸಿ ಆತಂಕಕ್ಕೆ ಎಡೆಮಾಡಿಕೊಟ್ಟಿರುವ ಬೆಂಗಳೂರು ಸೇರಿ ಮೂರು ಜಿಲ್ಲೆಗಳಲ್ಲಿ ನಡೆದಿದ್ದ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ (Female Foeticide) ಪ್ರಕರಣದ ಸಂಬಂಧ ಮತ್ತೊಬ್ಬ ಖತರ್ನಾಕ್ ನರ್ಸ್ ನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ ಉಷಾರಾಣಿ ಬಂಧಿತ ಆರೋಪಿಯಾಗಿದ್ದಾರೆ.ಈಕೆಯ ಬಂಧನದೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಆರೋಪಿ ಉಷಾರಾಣಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಡಾ.ಚಂದನ್ ಬಲ್ಲಾಳ್ನ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದು, ಪ್ರಕರಣ ಬೆಳಕಿಗೆ ಬಂದ ಬಳಿಕ ಉಷಾರಾಣಿ ಕೆಲಸ ಬಿಟ್ಟು ಮೈಸೂರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕೆಲಸಕ್ಕೆ ಸೇರಿದ್ದರು.
ನರ್ಸ್ ಉಷಾರಾಣಿ ಪ್ರಕರಣದ ಮತ್ತೊಬ್ಬ ಆರೋಪಿ ಬ್ರೋಕರ್ ಪುಟ್ಟರಾಜು ಸಂಬಂಧಿ ಕೂಡಾ ಆಗಿದ್ದು ಮೂರು ದಿನಗಳ ಹಿಂದೆ ಬಂಧಿತ ನರ್ಸ್ ನೀಡಿದ್ದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಉಷಾರಾಣಿಯನ್ನು ಬಂಧಿಸಲಾಗಿದೆ.
ಬ್ರೋಕರ್ ಪುಟ್ಟರಾಜು ಅಣತಿ ಮೇರೆಗೆ ಆರೋಪಿ ಉಷಾರಾಣಿ ಗರ್ಭಪಾತ ಮಾಡುತ್ತಿದ್ದರು. ಗರ್ಭಪಾತಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಬೈಯ್ಯಪ್ಪಹಳ್ಳಿ ಪೊಲೀಸರು ಬ್ರೋಕರ್ ಪುಟ್ಟರಾಜು ಅನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಎಲ್ಲ ವಿಚಾರಗಳು ಬಯಲಾಗಿವೆ. ಸದ್ಯ ಬ್ರೋಕರ್ ಪುಟ್ಟರಾಜು ಜಾಮೀನು ಪಡೆದಿದ್ದು, ಸಂಬಂಧಿ ಉಷಾರಾಣಿಯನ್ನು ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ.
ಇನ್ನು ಉಷಾರಾಣಿ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆ ಲಿಂಗ ಪತ್ತೆ ಮಾಡದೇ ಆರೋಗ್ಯ ಇಲಾಖೆ ನಿಯಮಾವಳಿ ಪ್ರಕಾರ ಗರ್ಭಪಾತ ಮಾಡುತಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆ ಮಾಲೀಕರನ್ನು ಬೈಯಪ್ಪನಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಗರ್ಭಪಾತ ಕಾಯ್ದೆ: ಗರ್ಭಪಾತ ಕಾಯ್ದೆಯ ಪ್ರಕಾರ ಲಿಂಗ ಪತ್ತೆ ಮಾಡದೇ, ಪತಿ-ಪತ್ನಿ ಒಪ್ಪಿಗೆ ಬಳಿಕ ಮತ್ತು ಗರ್ಭಿಣಿಗೆ ತೀವ್ರ ಆರೋಗ್ಯ ಸಮಸ್ಯೆ ಇದ್ದಲ್ಲಿ ಮಾತ್ರ ಸ್ಕ್ಯಾನಿಂಗ್ ಹಾಗೂ ವೈದ್ಯಕೀಯ ವರದಿ ಸಹಿತ ಗರ್ಭಪಾತ ಮಾಡಬೇಕು. ಇವೆಲ್ಲವೂ ಗರ್ಭಧರಿಸಿದ 24 ವಾರದ ಒಳಗಾಗಿ ಆಗಬೇಕು. ಬಳಿಕ ಸಂಬಂಧ ಪಟ್ಟ ಇಲಾಖೆಗೆ ಈ ಎಲ್ಲ ಮಾಹಿತಿ ನೀಡಬೇಕು. ಜೊತೆಗೆ ನಡೆದ ಎಲ್ಲಾ ದಾಖಲೆಗಳನ್ನು ಎರಡು ವರ್ಷದವರೆಗೆ ಆಸ್ಪತ್ರೆಯಲ್ಲಿ ಇಟ್ಟುಕೊಂಡಿರಬೇಕು.
ಉಷಾರಾಣಿ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆ ಈ ನಿಯಮಗಳನ್ನು ಹೊಂದಿದೆ. ಇದನ್ನು ತಿಳಿದ ಉಷಾರಾಣಿ ಆಸ್ಪತ್ರೆಯ ಮಾಲೀಕ ಮತ್ತು ವೈದ್ಯರ ಗಮನಕ್ಕೂ ಬಾರದ ರೀತಿ, ನಕಲಿ ದಾಖಲೆ ಸೃಷ್ಟಿಸಿ ಗರ್ಭಪಾತ ಮಾಡುತ್ತಿದ್ದರು. ಬಳಿಕ ವೈದ್ಯರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದರು ಎನ್ನಲಾಗಿದೆ
ಈ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ ಪೊಲೀಸರು ಉಷಾರಾಣಿಯನ್ನು ಬಂಧಿಸಿದ್ದಾರೆ ಉಷಾರಾಣಿಗೆ ಈ ಜಾಲದ ನಂಟು ಸಿಕ್ಕಿದ್ದು ಹೇಗೆ..? ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಉಷಾರಾಣಿ ನಕಲಿ ದಾಖಲೆ ಸೃಷ್ಟಿಸಿದ್ದು ಹೇಗೆ..? ಎಂಬ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


1 ಟಿಪ್ಪಣಿ
?Celebremos a cada creador del destino!
Jugar en casino sin registro permite acceder a una experiencia rГЎpida y privada sin procesos complicados. Muchos jugadores optan por estas opciones debido a la libertad que ofrecen plataformas como Casino Retiro Sin VerificaciГіn. Gracias a esta flexibilidad, cada sesiГіn se vuelve mГЎs cГіmoda al usar servicios como Casino sin KYC.
Jugar en crypto casino no kyc permite acceder a una experiencia rГЎpida y privada sin procesos complicados. Muchos jugadores optan por estas opciones debido a la libertad que ofrecen plataformas como casinoretirosinverificacion.com. Gracias a esta flexibilidad, cada sesiГіn se vuelve mГЎs cГіmoda al usar servicios como casinos sin verificacion.
Casino sin registro, gana sin trГЎmites – п»їhttps://casinoretirosinverificacion.com/
?Que la suerte te beneficie con que goces de extraordinarios botes destacados!