ಬೆಂಗಳೂರು, ಮೇ.19-ಫ್ಯಾಟ್ ಸರ್ಜರಿಗೆ ಒಳಗಾಗಿ ಮೃತಪಟ್ಟ ನಟಿ ಚೇತನಾ ರಾಜ್. ತನ್ನ ಮೈ ಮೇಲಿದ್ದ ಚಿನ್ನವನ್ನು ಅಡವಿಟ್ಟು ಫ್ಯಾಟ್ ಸರ್ಜರಿಗೆ ದಾಖಲಾಗಿದ್ದ ಸಂಗತಿ ಬಯಲಾಗಿದೆ.
ಚೇತನಾ ರಾಜ್ ಫ್ಯಾಟ್ ಸರ್ಜರಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರಿಂದ ಕೇಳಿದರೆ ಹಣ ಕೊಡುವುದಿಲ್ಲ ಎಂಬುದು ಆಕೆಗೆ ಗೊತ್ತಿತ್ತು. ಇದರಿಂದಾಗಿ ಮನೆಯವರಿಗೆ ಹೇಳದೆ ತನ್ನ ಬಳಿಯಿದ್ದ ಚಿನ್ನವನ್ನು ಅಡವಿಟ್ಟು 80 ಸಾವಿರ ರೂ ಹಣ ಪಡೆದು ಅದನ್ನು ಡಾ. ಶೆಟ್ಟಿ ಕಾಸ್ಮೆಟಿಕ್ಸ್ನಲ್ಲಿ ಕಟ್ಟಿ ಫ್ಯಾಟ್ ಸರ್ಜರಿಗೆ ಒಳಗಾಗಿದ್ದಳು .
ಇದಲ್ಲದೆ ಚೇತನಾ ರಾಜ್, ಫ್ಯಾಟ್ ಸರ್ಜರಿಗೆ ಒಳಗಾಗಲು ಜಿಮ್ ಟ್ರೈನರ್ ಒಬ್ಬರಿಂದ ಸಲಹೆ ಪಡೆದುಕೊಂಡಿದ್ದಳು ಎಂಬ ಮಾಹಿತಿ ಪೊಲೀಸರಿಗೆ ದೊರಕಿದೆ. ಈ ಬಗ್ಗೆ ಚೇತನಾ ಸ್ನೇಹಿತರಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಟ್ರೈನರ್ ಸಲಹೆಯಂತೆ ಚೇತನಾ ಫ್ಯಾಟ್ ಸರ್ಜರಿ ಮಾಡಿಸಿಕೊಂಡಿದ್ದಳು. ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿರುವ ಸುಬ್ರಮಣ್ಯನಗರ ಪೊಲೀಸರು, ಮರಣೋತ್ತರ ಪರೀಕ್ಷೆ ಬಂದ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸಲಿದ್ದಾರೆ.
Previous ArticleSSLC ಫಲಿತಾಂಶ ಪ್ರಕಟ: ಶೇ.85.63 ವಿದ್ಯಾರ್ಥಿಗಳು ಉತ್ತೀರ್ಣ
Next Article FOOTPATH ಮೇಲೆ ಮಲಗಿ ಮೃತಪಟ್ಟರು…