ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಪಾಲ್ಗೊಂಡು ನೃತ್ಯ ಮಾಡಿದ್ದ ವಿಡಿಯೊ ಬಹಿರಂಗವಾಗಿ ಸುದ್ದಿಯಾಗಿದ್ದ ಫಿನ್ಲೆಂಡ್ ಪ್ರಧಾನಿ ಸನ್ನಾ ಮಾರಿನ್, ಇದೀಗ ಯಾವುದೇ ಮಾದಕ ವಸ್ತು ಸೇವನೆ ಮಾಡಿರಲಿಲ್ಲ ಎಂದು ಸಾಬೀತಾಗಿದೆ.
ಸನ್ನಾ ಮಾರಿಸನ್ ಪಾರ್ಟಿಯಲ್ಲಿ ವಿಡಿಯೋ ಜಾಕಿ ಜೊತೆ ಕುಣಿದು ಕುಪ್ಪಳಿಸುತ್ತಿದ್ದ ವಿಡಿಯೋ ಬಹಿರಂಗಗೊಂಡ ಬೆನ್ನಲ್ಲೇ ಆಕೆ ಡ್ರಗ್ಸ್ ಸೇವಿಸಿ ನೃತ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಡ್ರಗ್ಸ್ ಪರೀಕ್ಷೆಗೆ ಒಳಪಟ್ಟಿದ್ದರು. ಇದೀಗ ಈ ಸಂಬಂಧ ಪ್ರಯೋಗಾಲಯದ ವರದಿ ಬಂದಿದ್ದು ಇದರಲ್ಲಿ ಅವರ ಡ್ರಗ್ಸ ಸೇವನೆ ಕುರಿತು ನೆಗೆಟಿವ್ ವರದಿ ಬಂದಿದೆ.
ಅವರ ರಕ್ತ ಮತ್ತು ಮೂತ್ರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ, ಕೊಕೇನ್, ಗಾಂಜಾ ಸಹಿತ ಯಾವುದಾದರೂ ಮಾದಕ ದ್ರವ್ಯ ಸೇವಿಸಿದ್ದರೆಯೇ ಎಂದು ಪರಿಶೀಲಿಸಲಾಗಿತ್ತು.
ಆದರೆ, ಪ್ರಧಾನಿ ಮಾರಿನ್ ಅವರು ಯಾವುದೇ ಡ್ರಗ್ಸ್ ಸೇವಿಸಿಲ್ಲ. ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಅವರ ವಿಶೇಷ ಸಲಹೆಗಾರರು ಹೇಳಿದ್ದಾರೆ.
Previous Articleಸಾತ್ವಿಕ ಆಹಾರ ಸೇವಿಸೋರು ಮಾಡುವುದೇನು..?
Next Article ಸ್ನೇಕ್ ಲೋಕೇಶ್ ಗೆ ಹಾವು ಕಡಿತ