ಕಲಬುರ್ಗಿ, ಏ.1: ಸುಡು ಬಿಸಿಲ ನಾಡು ಕಲಬುರ್ಗಿಯಲ್ಲಿ ವಿದ್ಯಾರ್ಥಿಗಳ, ಶಿಷ್ಯ ವೇತನಕ್ಕೆ ಕಾಲೇಜು ಪ್ರಿನ್ಸಿಪಾಲ್ ಸೇರಿದಂತೆ ಹಲವರು ಕನ್ನ ಹಾಕಿ ಬರೋಬ್ಬರಿ 81 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಲಬುರ್ಗಿಯಲ್ಲಿ ಎಂ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಕಾಲೇಜು ಎಂದು ಹೆಸರು ಮಾಡಿದೆ ಈ ಕಾಲೇಜಿನಲ್ಲಿ ಪ್ರಸಕ್ತ ವರ್ಷ ಪಿಜಿ ವಿದ್ಯಾರ್ಥಿಗಳು ತಮಗೆ ಶಿಷ್ಯ ವೇತನ ನೀಡಿಲ್ಲ ಎಂದು ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದಾರೆ ಆದರೆ ಆಡಳಿತ ಮಂಡಳಿಯಿಂದ ಯಾವುದೇ ರೀತಿಯ ಸೂಕ್ತ ಪ್ರತಿಕ್ರಿಯೆ ದೊರಕಿಲ್ಲ ಸರ್ಕಾರ ನೀಡಿರುವ ಶಿಷ್ಯ ವೇತನ ಬಾರದೆ ಕಂಗಾಲಾದ ವಿದ್ಯಾರ್ಥಿಗಳು ಪ್ರತಿಭಟನೆ ಕೂಡ ನಡೆಸಿದರು.
ಶಿಷ್ಯ ವೇತನಕ್ಕಾಗಿ ವೈದ್ಯಕೀಯ ಪಿಜಿ ವಿದ್ಯಾರ್ಥಿಗಳು ಬೀದಿಗಿಳಿದಿರುವುದನ್ನು ಕಂಡ ಜಿಲ್ಲೆಯ ನ್ಯಾಯವಾದಿ
ವಿನೋದ್ ಕುಮಾರ್ ಜೆನವೇರಿ ಎಂಬುವರು ಇದರಲ್ಲೇನೋ ಗೋಲ್ಮಾಲ್ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದರು.
ವಕೀಲರು ನೀಡಿದ ದೂರು ಆದರಿಸಿ ತನಿಖೆ ನಡೆಸಿದ ಕಲಬುರ್ಗಿಯ ಸೆನ್ ಠಾಣೆಯ ಪೊಲೀಸರು ಇದೀಗ ವಿದ್ಯಾರ್ಥಿಗಳ ಶಿಷ್ಯ ವೇತನದಲ್ಲಿ ಅಕ್ರಮ ನಡೆದಿರುವುದನ್ನು ಪತ್ತೆ ಹಚ್ಚಿದ್ದಾರೆ ಈ ಸಂಬಂಧ ಎಚ್ ಕೆ ಇ ಸಂಸ್ಥೆಯ ಮಾಜಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಕಾಲೇಜು ಪ್ರಿನ್ಸಿಪಾಲ್ ಡಾ.ಎಸ್.ಎಂ.ಪಾಟೀಲ್, ಅಕೌಂಟೆಂಟ್ ಸುಭಾಷ್ ಜಗನ್ನಾಥ, ಕೆನರಾ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.