ಬೆಂಗಳೂರು,ಜೂ.6- ಉತ್ತರ ಭಾರತದಿಂದ ಬೆಂಗಳೂರು ನಗರಕ್ಕೆ ಅವ್ಯಾಹತವಾಗಿ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಮನೆಯೊಡತಿ ಸೇರಿ ಮೂವರು ಮಹಿಳೆಯರನ್ನು ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ ಮೂಲದ ಪ್ರೇಮ,ಸುನಿತಾ ಹಾಗೂ ಮನೆಯೊಡತಿ ಮುತ್ಯಾಲಮ್ಮ ಬಂಧಿತ ಆರೋಪಿಗಳಾಗಿದ್ದಾರೆ. ಜೀವನಹಳ್ಳಿಯ ಮುತ್ಯಾಲಮ್ಮ ಮನೆಯಲ್ಲಿ ಪ್ರೇಮ್ ಹಾಗೂ ಸುನಿತಾ ಅವರು ಬಾಡಿಗೆಗಿದ್ದರು.
ಜಾರ್ಖಂಡ್ನ ಗುಡ್ಡಗಾಡು ಪ್ರದೇಶದಲ್ಲಿ ಇವರು ಗಾಂಜಾ ಬೆಳೆಯುತ್ತಿದ್ದರು. ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಗಾಂಜಾ ಇಟ್ಟು ಪುಲಕೇಶಿ ನಗರದ ಸುತ್ತಮುತ್ತಲಿನ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಒಂದು ಗ್ರಾಂಗೆ 500 ರೂವರೆಗೂ ಹಣ ಸಂಪಾದನೆ ಮಾಡುತ್ತಿದ್ದರು.
ಜೀವನಹಳ್ಳಿಯಲ್ಲಿ ವಾಸವಾಗಿರುವ ಮುತ್ಯಾಲಮ್ಮ ಈ ಆರೋಪಿಗಳಿಗೆ ತಮ್ಮ ಮನೆ ಬಾಡಿಗೆ ನೀಡಿದ್ದರು. ಇವರು ಮಾಡುತ್ತಿದ್ದ ಗಾಂಜಾ ದಂಧೆಗೆ ಈಕೆ ಸಾಥ್ ನೀಡಿದ್ದಳು. ಹೀಗಾಗಿ ಬಾಡಿಗೆ ಪಡೆಯದೇ ಮನೆಯನ್ನು ಉಚಿತವಾಗಿ ನೀಡಿದ್ದಳು.
ಬಾಡಿಗೆಗೆ ಬದಲಾಗಿ ಮಾದಕ ವಸ್ತು ಮಾರಾಟದಿಂದ ಬಂದ ಅಕ್ರಮ ಹಣದಲ್ಲಿ ಪಾಲು ಪಡೆಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮುತ್ಯಾಲಮ್ಮ ಈ ದಂಧೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದಳು.
ಈಕೆಯ ಮಗ ಸಹ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದ. ತಾಯಿಯ ಕುಮ್ಮಕ್ಕಿನಿಂದ ಚಿಕ್ಕ ವಯಸ್ಸಿನಲ್ಲೇ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದ. ಹಲವು ಬಾರಿ ಈತನನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಿದ್ದರು. ಅಲ್ಲಿಯೂ ವಾರ್ಡನ್ ಮೇಲೆ ಹಲ್ಲೆ ನಡೆಸಿದ್ದ. ಇತ್ತೀಚೆಗೆ ಎನ್ ಡಿಪಿಎಸ್ ಪ್ರಕರಣದಲ್ಲಿ ದರ್ಶನ್‌ನನ್ನು ಬಂಧಿಸಿದ್ದರು. ಇದೀಗ ಆತನ ತಾಯಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
Previous Articleಅಬ್ಬಾ ಇವರು ನೋಡಿ ಎಂಥಾ ಬ್ರಿಲಿಯಂಟ್ ವಂಚಕರು!
Next Article ಲೋಕಸಭೆಗೆ BJP-JDS ಮೈತ್ರಿ?