ಬೆಂಗಳೂರು,ಜೂ.6- ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ನೊಂದು ಯವಕನೋರ್ವ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ವಿದ್ಯಾರಣ್ಯಪುರದ ಚಾಮುಂಡೇಶ್ವರಿ ಲೇಔಟ್‍ನಲ್ಲಿ ನಡೆದಿದೆ.
ಚಾಮುಂಡೇಶ್ವರಿ ಲೇಔಟ್‍ನ ಚರಣ್(25) ಆತ್ಮಹತ್ಯೆ ಮಾಡಿಕೊಂಡವರು.ಕಳೆದ ಐದು ವರ್ಷಗಳಿಂದ ಯುವತಿಯೊಬ್ಬಳ್ಳನ್ನು ಚರಣ್ ಪ್ರೀತಿಸುತ್ತಿದ್ದು ಮದುವೆ ಮಾಡಿಕೊಳ್ಳುವ ನಿರ್ಧಾರ ಮಾಡಿ ಈ ಜೋಡಿ ಧರ್ಮಸ್ಥಳಕ್ಕೆ ಹೋಗಿದ್ದರು.
ಆದರೆ ಕೊನೆ ಕ್ಷಣದಲ್ಲಿ ಯುವತಿ ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಮನನೊಂದ ಚರಣ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ.
ಈ ಸಂಬಂಧಿಸಿದಂತೆ ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Previous Articleಬೆಂಗಳೂರಲ್ಲಿದ್ದ ತಾಲಿಬಾನ್ ಉಗ್ರ..!!
Next Article ಹಾವನ್ನೇ ಪತಿಯೆಂದು ನಂಬಿ ಸಂಸಾರ ಸಾಗಿಸಿದ ಮಹಿಳೆ!