ಜಗತ್ತಿನಲ್ಲಿದ್ದ ಶೀತಲ ಸಮರವನ್ನು ರಕ್ತಪಾತವಿಲ್ಲದೆ ಕೊನೆಗೊಳಿಸಿದ ಮಿಖಾಯಿಲ್ ಗೋರ್ಬಚೋವ್ ಅವರು ಸೋವಿಯತ್ ಒಕ್ಕೂಟದ ಪತನವನ್ನು ತಡೆಯುವಲ್ಲಿ ವಿಫಲರಾಗಿದ್ದರು. ಸೊವಿಯಟ್ ರಷ್ಯಾದ ಪ್ರಾಬಲ್ಯವನ್ನು ಕೊನೆಗೊಳಿಸಿ ಜಗತ್ತಿನ ಅನೇಕ ರಾಷ್ಟ್ರಗಳು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಕಣ್ಣುವಂತೆ ನೋಡಿಕೊಂಡ ಗೋರ್ಬಚೋವ್ ಅವರು ಇದೇ ಮಂಗಳವಾರ ಎಂದರೆ ಆಗಸ್ಟ್ ರಂದು ತಮ್ಮ 91 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಮಾಸ್ಕೋದ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಸೋವಿಯತ್ ಒಕ್ಕೂಟದ ಕೊನೆಯ ಅಧ್ಯಕ್ಷರಾಗಿದ್ದ ಗೋರ್ಬಚೇವ್ ಅವರು ಯುನೈಟೆಡ್ ಸ್ಟೇಟ್ಸ್ ಮತ್ತು ಪಾಶ್ಚಿಮಾತ್ಯ ಶಕ್ತಿಗಳೊಂದಿಗೆ ಶಸ್ತ್ರಾಸ್ತ್ರ ಕಡಿತದ ಒಪ್ಪಂದಗಳನ್ನು ಮಾಡಿಕೊಂಡರು ಮತ್ತು ಎರಡನೆಯ ಮಹಾಯುದ್ಧದ ನಂತರ ಯುರೋಪ್ ಅನ್ನು ವಿಭಜಿಸಿದ್ದ ಕಬ್ಬಿಣದ ಪರದೆಯನ್ನು ತೆಗೆದುಹಾಕಲು ಮತ್ತು ಜರ್ಮನಿಯ ಪುನರೇಕೀಕರಣಕ್ಕೆ ಕಾರಣರಾದರು.