ಬೆಂಗಳೂರು : 9ನೇ ತರಗತಿ ಪಠ್ಯಪುಸ್ತಕದಲ್ಲಿ ಮರು ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಮೂಲಕ ಪಠ್ಯ ಪರಿಷ್ಕರಣೆ ಮಾಡಬೇಕೆಂಬ ಒತ್ತಾಯಕ್ಕೆ ರಾಜ್ಯ ಸರ್ಕಾರ ಮಣಿದಿದೆ.
ಪರಿಷ್ಕೃತ ಪಠ್ಯದಲ್ಲಿ ಸಂವಿಧಾನ ಶಿಲ್ಪಿ ಎಂಬ ಪದಕ್ಕೆ ಕಡಿವಾಣ ಹಾಕಿದ್ದು ವಿರೋಧ ವ್ಯಕ್ತವಾಗಿತ್ತು. ಈಗ ಸಂವಿಧಾನ ಶಿಲ್ಪಿ ಪದದ ಸೇರ್ಪಡೆಗೆ ನಿರ್ಧರಿಸಿದ್ದು, 9ನೇ ತರಗತಿ ಪಠ್ಯಪುಸ್ತಕದಲ್ಲಿ ಮರು ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ.
ಏಳನೇ ತರಗತಿ ಪಠ್ಯದಲ್ಲಿದ್ದ ‘ಗೊಂಬೆ ಕಲಿಸುವ ನೀತಿ’ ಪದ್ಯದ ಕೃತಿಕಾರರ ಹೆಸರು ತಿದ್ದುಪಡಿಗೂ ಸರ್ಕಾರ ನಿರ್ಧರಿಸಿದ್ದು, ಡಾ.ಆರ್.ಎನ್ ಜಯಗೋಪಾಲ್ ಬದಲಿಗೆ ಕವಿ ಚಿ.ಉದಯಶಂಕರ್ ಹೆಸರು ಮರು ಸೇರ್ಪಡೆ ಮಾಡಲು ನಿರ್ಧರಿಸಿದೆ.
Previous ArticleIPS ಮೇಜರ್ ಸರ್ಜರಿ..
Next Article ಕಿಚ್ಚನ ವಿಕ್ರಾಂತ್ ರೋಣಗೆ ಶುಭ ಕೋರಿದ ಬಿಗ್ ಬಿ