ಬೆಂಗಳೂರು, ನ. 7- ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಆದಷ್ಟು ಶೀಘ್ರ ಜಾರಿಗೊಳಿಸಲುಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಒಳಮೀಸಲಾತಿ ಜಾರಿಗೆ ಆಗ್ರಹಿಸಿ ನಿನ್ನೆ ಮಾದಿಗ ಸಮುದಾಯದ ಸಚಿವರು, ಶಾಸಕರು, ಮುಖಂಡರು ಸಭೆ ನಡೆಸಿ ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನದ ಸಮಯದಲ್ಲಿ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.
ನಾವು ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ಎಸ್ಸಿ-ಎಸ್ಟಿ ಸಮಾವೇಶ ಮಾಡಿ ಆ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆಯುವ ಮೊದಲ ಅಧಿವೇಶನದಲ್ಲೇ ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ಸದಾಶಿವ (Justice Sadashiva) ಆಯೋಗದ ವರದಿಯನ್ನು ಜಾರಿ ಮಾಡುತ್ತೇವೆ ಎಂದು ಹೇಳಿದ್ದೇವು.
ಕಾರಣಾಂತರಗಳಿಂದ ಮೊದಲ ಅಧಿವೇಶನದಲ್ಲಿ ಮಾಡಲು ಆಗಲಿಲ್ಲ. ಇದನ್ನು ಸಿಎಂ ಗಮನಕ್ಕ ತಂದಿದ್ದೇವೆ ಎಂದು ಹೇಳಿದರು ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಾನು ಸಚಿವರಾದ ಡಾ.ಹೆಚ್. ಸಿ. ಮಹೇದವಪ್ಪ, ಮುನಿಯಪ್ಪ ಪ್ರಿಯಾಂಕಖರ್ಗೆ ಎಲ್ಲರೂ ಮನವಿ ಮಾಡಿದ್ದೇವೆ ಮುಖ್ಯಮಂತ್ರಿಗಳು ಸಮುದಾಯದ ಮುಖಂಡರ ಜತೆ ಚರ್ಚಿಸಿ ತೀರ್ಮಾನ ಮಾಡುವದಾಗಿ ಹೇಳಿದ್ದಾರೆ ಎಂದರು ಸರ್ಕಾರಕ್ಕೆ ಒಳಮೀಸಲಾತಿ ಮಾಡಬಾರದು ಎಂಬ ಚಿಂತನೆ ಇಲ್ಲ. ಎಲ್ಲರ ಅಭಿಪ್ರಾಯ ತೆಗೆದುಕೊಂಡು ಎಲ್ಲರ ಜತೆ ಮಾತನಾಡಿ ಈ ಕೆಲಸ ಆಗಬೇಕಿದೆ. ಅದನ್ನು ಮಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ ಎಂದರು.


2 ಪ್ರತಿಕ್ರಿಯೆಗಳು
O Betano entrega https://betanogame.org/pt/mobile-app/ a adrenalina definitiva. Novos jogadores ganham 100% até €500 mais rodadas grátis. Gire slots Megaways ou aposte ao vivo nos seus times favoritos. Junte-se agora.
Cassino, slots, roleta e bГґnus de 125% + 250 rodadas? Mostbet – https://mostbetpt.pro/ , Mostbet traz para vocГЄ o cassino com as ofertas mais quentes do momento .