Facebook Twitter Instagram
    Vartha Chakra
    • ಸುದ್ದಿ
    • ಬೆಂಗಳೂರು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ರಾಜಕೀಯ
      • ಚುನಾವಣೆ 2023
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • ಅಪರಾಧ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಹಾರ್ದಿಕ್ ಸರ್ವಾಂಗೀಣ ಆಟ: ಚೊಚ್ಚಲ ಪ್ರಯತ್ನದಲ್ಲೇ ಐಪಿಎಲ್ ಟ್ರೋಫಿ ಗೆದ್ದ ಗುಜರಾತ್‌ ಟೈಟಾನ್ಸ್
    ಸುದ್ದಿ

    ಹಾರ್ದಿಕ್ ಸರ್ವಾಂಗೀಣ ಆಟ: ಚೊಚ್ಚಲ ಪ್ರಯತ್ನದಲ್ಲೇ ಐಪಿಎಲ್ ಟ್ರೋಫಿ ಗೆದ್ದ ಗುಜರಾತ್‌ ಟೈಟಾನ್ಸ್

    vartha chakraBy vartha chakraಮೇ 30, 2022Updated:ಮೇ 30, 2022ಯಾವುದೇ ಟಿಪ್ಪಣಿಗಳಿಲ್ಲ1 Min Read
    Facebook Twitter Pinterest LinkedIn Tumblr Email
    Gujarat Titans are crowned IPL champions during the final of the TATA Indian Premier League 2022 (IPL season 15) between the Gujarat Titans and the Rajasthan Royals held at the Narendra Modi Stadium, Ahmedabad on the 29th May 2022Photo by Ron Gaunt / Sportzpics for IPL
    Share
    Facebook Twitter LinkedIn Pinterest Email


    ಅಹ್ಮದಾಬಾದ್: ಗುಜರಾತ್ ಟೈಟಾನ್ಸ್ ತಂಡದ ಬಿಗು ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಕುಸಿತ ಕಂಡು ಎರಡನೇ ಬಾರಿ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಅವಕಾಶವನ್ನು ಕೈಚೆಲ್ಲಿದೆ. ಪ್ರಥಮ ಪ್ರವೇಶದಲ್ಲೇ ಟೂರ್ನಿಯುದ್ದಕ್ಕೂ ಅದ್ಭುತವಾಗಿ ಆಡಿದ ಗುಜರಾತ್ ಟೈಟಾನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
    ಟಾಸ್ ಗೆದ್ದ ರಾಜಸ್ಥಾನ್ ಅಚ್ಚರಿ ಎಂಬಂತೆ ಬ್ಯಾಟಿಂಗ್ ಆಯ್ದುಕೊಂಡಿತು. ಜೋಸ್ ಬಟ್ಲರ್ ಮತ್ತೊಮ್ಮೆ ಅಬ್ಬರಿಸುವ ಸೂಚನೆ ನೀಡಿದರೂ 35 ರನ್‌ಗಳಿಗೆ ಅವರ ಇನ್ನಿಂಗ್ ಸಮಾಪ್ತಿಯಾಯಿತು. ಆದರೆ. ಅವರೇ ತಂಡದ ಪರ ಗರಿಷ್ಠ ಸ್ಕೋರರ್ ಆದರೆಂಬುದು ಉಲ್ಲೇಖನೀಯ. ಯಶಸ್ವಿ ಜೈಸ್ವಾಲ್ 22 ರನ್ ಗಳಿಸಿದರು. ಮಿಕ್ಕ ಯಾರೂ ನೆಲಕಚ್ಚಿ ಆಡದ ಕಾರಣ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 130 ರನ್ ಗಳಿಸಲು ಶಕ್ತವಾಯಿತು. ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯಾ 17 ರನ್ ನೀಡಿ 3 ವಿಕೆಟ್ ಕಿತ್ತರೆ, ಸಾಯಿ ಕಿಶೋರ್ 2 ವಿಕೆಟ್ ಪಡೆದರು.
    ಗುಜರಾತ್ ಆರಂಭವೂ ಉತ್ತಮವಾಗಿರಲಿಲ್ಲ. ಎರಡು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡರೂ ಆರಂಭಕಾರ ಶುಭಮಾನ್ ಗಿಲ್ ತಾಳ್ಮೆಯಿಂದ ಆಡಿದರು. 43 ಎಸೆತಗಳಿಂದ 45 ರನ್ ಗಳಿಸಿ ಅವರು ಅಜೇಯರಾಗಿ ಉಳಿದರು. ನಾಯಕ್ ಹಾರ್ದಿಕ್ ಪಾಂಡ್ಯಾ 30 ಎಸೆತಗಳಲ್ಲಿ 34 ರನ್ ಗಳಿಸಿದರು. ಬಳಿಕ ಬಂದ ಡೇವಿಡ್ ಮಿಲ್ಲರ್ ಎಂದಿನಂತೆ ಅಬ್ಬರಿಸಿ, 19 ಎಸೆತಗಳಿಂದ ಅಜೇಯ 31 ರನ್ ಕಲೆ ಹಾಕಿ ತಂಡದ ಗೆಲುವನ್ನು ಸುಲಭಗೊಳಿಸಿದರು.
    ಜೋಸ್ ಬಟ್ಲರ್ ಟೂರ್ನಿಯಲ್ಲಿ 17 ಪಂದ್ಯಗಳಿಂದ 4 ಶತಕ, 4 ಅರ್ಧಶತಕಗಳೊಂದಿಗೆ 863 ರನ್ ಕಲೆಹಾಕಿ, ಆರೆಂಜ್ ಕ್ಯಾಪ್ ಗೆದ್ದರು. ಟೂರ್ನಿಯಲ್ಲಿ ಅವರು 45 ಸಿಕ್ಸರ್ ಹಾಗು 83 ಬೌಂಡರಿ ಗಳಿಸಿದ ದಾಖಲೆಯನ್ನೂ ಹೊಂದಿದ್ದಾರೆ. 15 ಪಂದ್ಯಗಳಿಂದ 2 ಶತಕ, 4 ಅರ್ಧ ಶತಕಗಳ ಸಹಿತ 616 ರನ್ ಸಂಪಾದಿಸಿದ ಕೆ.ಎಲ್. ರಾಹುಲ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಕ್ವಿಂಟನ್ ಡಿಕಾಕ್ ಕೂಡ 500ರ ಗಡಿ ದಾಟಿದ್ದಾರೆ (508 ರನ್).
    ಯಜುವೇಂದ್ರ ಚಹಲ್ 17 ಪಂದ್ಯಗಳಿಂದ 19.51 ಸರಾಸರಿಯಲ್ಲಿ 27 ವಿಕೆಟ್ ಗಳಿಸಿ, ಪರ್ಪಲ್ ಕ್ಯಾಪ್‌ ಧರಿಸಿದರು. ವನಿಂದು ಹಸರಂಗ 16 ಪಂದ್ಯಗಳಿಂದ 26 ವಿಕೆಟ್ ಕಿತ್ತು ಗಮನ ಸೆಳೆದರು.

    #IPL ipl 2022
    Share. Facebook Twitter Pinterest LinkedIn Tumblr Email
    Previous Articleಐಪಿಎಲ್ ಫೈನಲ್ ಪಂದ್ಯದಲ್ಲಿ ಹೀಗೊಂದು ಗಿನ್ನಿಸ್ ದಾಖಲೆ!
    Next Article ಚಿನ್ನಾಭರಣ ವಶ..
    vartha chakra
    • Website

    Related Posts

    ಸೋಲುವ ಭೀತಿ-ಇವರಿಗಿಲ್ಲ BJP ಟಿಕೆಟ್! #bjp #karnataka #rss

    ಮಾರ್ಚ್ 27, 2023

    ಅಖಾಡದಲ್ಲಿ ಝಣ ಝಣ ಕಾಂಚಾಣ! #karnatakaelections2023 #bangalore

    ಮಾರ್ಚ್ 23, 2023

    Electionಗೆ ಮುನ್ನವೇ DK ವ್ಯೂಹ ಛಿದ್ರ

    ಮಾರ್ಚ್ 21, 2023

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕ್ರೀಡೆ
    • ಚುನಾವಣೆ
    • ಚುನಾವಣೆ 2023
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬೆಂಗಳೂರು
    • ಮನರಂಜನೆ
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಮಾಜ
    • ಸಮೂಹ ಶಕ್ತಿ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    Siddaramaiahಗಾಗಿ Rules change!

    BJP ಯ‌ ಮತ್ತೊಂದು ವಿಕೆಟ್ ಪತನ

    Scotlandನ ಪ್ರಥಮ ಮಂತ್ರಿಯಾಗಿ ಹಂಝ ಯೂಸಫ್ (Hamza Yousaf)

    ಸೋಲುವ ಭೀತಿ-ಇವರಿಗಿಲ್ಲ BJP ಟಿಕೆಟ್! #bjp #karnataka #rss

    About
    About

    We're social, connect with us:

    Facebook Twitter YouTube
    Software Training
    Recent Posts
    • Siddaramaiahಗಾಗಿ Rules change! ಮಾರ್ಚ್ 28, 2023
    • BJP ಯ‌ ಮತ್ತೊಂದು ವಿಕೆಟ್ ಪತನ ಮಾರ್ಚ್ 28, 2023
    • Scotlandನ ಪ್ರಥಮ ಮಂತ್ರಿಯಾಗಿ ಹಂಝ ಯೂಸಫ್ (Hamza Yousaf) ಮಾರ್ಚ್ 27, 2023
    • ಸೋಲುವ ಭೀತಿ-ಇವರಿಗಿಲ್ಲ BJP ಟಿಕೆಟ್! #bjp #karnataka #rss ಮಾರ್ಚ್ 27, 2023
    • ಅದಾನಿ ಸಮೂಹ ಕಂಪನಿಗಳಲ್ಲಿ ಹೂಡಿಕೆ ಮುಂದುವರೆಸಿದ ಮಾರ್ಚ್ 27, 2023
    • ಗುಟುರು ಹಾಕಿದ Ramesh Jarkiholi – ಬೆಚ್ಚಿದ Bommai #amitshah #bjp #karnataka #belgaum ಮಾರ್ಚ್ 27, 2023
    • Kabza ಸಿನೆಮ ನಿಜವಾದ Collection ಎಷ್ಟು ಗೊತ್ತಾ? #kabza #shriyasaran #kiccha ಮಾರ್ಚ್ 26, 2023
    • Ultraviolet ಕಿರಣಗಳಿವೆ ಎಚ್ಚರ! #bangalore #skincancer ಮಾರ್ಚ್ 25, 2023
    • ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ! ಮಾರ್ಚ್ 24, 2023
    • ರಾಹುಲ್ ಗಾಂಧಿ Disqualified ಮಾರ್ಚ್ 24, 2023
    Popular Posts

    Siddaramaiahಗಾಗಿ Rules change!

    ಮಾರ್ಚ್ 28, 2023

    BJP ಯ‌ ಮತ್ತೊಂದು ವಿಕೆಟ್ ಪತನ

    ಮಾರ್ಚ್ 28, 2023

    Scotlandನ ಪ್ರಥಮ ಮಂತ್ರಿಯಾಗಿ ಹಂಝ ಯೂಸಫ್ (Hamza Yousaf)

    ಮಾರ್ಚ್ 27, 2023
    Copyright © 2023 Vartha Chakra
    • ಸುದ್ದಿ
    • ಬೆಂಗಳೂರು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ರಾಜಕೀಯ
      • ಚುನಾವಣೆ 2023
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • ಅಪರಾಧ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    Siddaramaiahಗಾಗಿ Rules change #mysore #mysuru #kolar #live #dk #kannadanews #karnatakaelections2023
    Subscribe