ಹಾಸನ – ಮಾಜಿ ಪ್ರಧಾನಿ ದೇವೇಗೌಡ ಅವರ ನಂತರ ಸತತವಾಗಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗುತ್ತಿರುವ ಜೆಡಿಎಸ್ ನ ಎಚ್ ಡಿ ರೇವಣ್ಣ (H D Revanna) 1999 ರಲ್ಲಿ ಒಮ್ಮೆ ಮಾತ್ರ ಸೋಲು ಕಂಡಿದ್ದರು.
ಆನಂತರದಲ್ಲಿ ನಡೆದ ಎಲ್ಲಾ ಚುನಾವಣೆಗಳಲ್ಲೂ ಎಚ್ ಡಿ ರೇವಣ್ಣ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. ಈ ಚುನಾವಣೆಯಲ್ಲಿ ರೇವಣ್ಣ (H D Revanna) ಅವರನ್ನು ಸೋಲಿಸಬೇಕೆಂದು ಕಾಂಗ್ರೆಸ್ ದೇವೇಗೌಡರ ರಾಜಕೀಯ ಎದುರಾಳಿ ಜಿ ಪುಟ್ಟಸ್ವಾಮಿ ಗೌಡ ಅವರ ಮೊಮ್ಮಗ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೇಯಸ್ ಪಟೇಲ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿಯಿಂದ ಜಿ ದೇವರಾಜೇಗೌಡ ಕಣಕೆಳಿದಿದ್ದು ಹಿಂದುತ್ವದ ಮತಗಳ ನಿರೀಕ್ಷೆಯಲ್ಲಿದ್ದಾರೆ.
ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇರುವಂತೆ ಕಂಡುಬಂದರೂ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.
ಒಕ್ಕಲಿಗ ಸಮುದಾಯದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ರೇವಣ್ಣ (H D Revanna) ದೊಡ್ಡ ಪ್ರಮಾಣದ ಹಿಂಬಾಲಕರನ್ನು ಹೊಂದಿದ್ದಾರೆ. ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ ಪಟ್ಟು ಬಿಡದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವ ರೇವಣ್ಣ ಅವರ ಕಾರ್ಯ ಶೈಲಿಯಿಂದಾಗಿ, ಹಾಸನದಲ್ಲಿ ಈ ಕ್ಷೇತ್ರ ವಿಭಿನ್ನವಾಗಿ ಗಮನ ಸೆಳೆಯುತ್ತದೆ. ಅಭಿವೃದ್ಧಿ ಯೋಜನೆಗಳ ಜೊತೆ ಎಲ್ಲರೊಂದಿಗೆ ಬೆರೆಯುವ ರೇವಣ್ಣ ಅವರ ಕಾರ್ಯವೈಖರಿ ಸತತವಾಗಿ ಅವರನ್ನು ಆಯ್ಕೆ ಮಾಡುವಂತೆ ಮಾಡಿದ್ದು ಈ ಬಾರಿಯೂ ಗೆಲುವಿನ ನೀರಿಕ್ಷೆಯಲ್ಲಿದ್ದಾರೆ.
Also read.