ಬೆಂಗಳೂರು,ಜೂ.17-ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಮನೆಗಳ್ಳರನ್ನು ಬಂಧಿಸುವಲ್ಲಿ ಸಂಪಿಗೆಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಮೃತಹಳ್ಳಿಯ ವರದರಾಜ್ ಲೇಔಟ್ ನ ಇಸೈರಾಜ್ ಅಲಿಯಾಸ್ ಕುಂಟ(26) ಕೊಡಿಗೆಹಳ್ಳಿಯ ಧನಲಕ್ಷ್ಮಿ ಲೇಔಟ್ ನ
ಆನಂದ್ ಕುಮಾರ್ ಅಲಿಯಾಸ್ ಡಿಜೆ(22) ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ 19 ಲಕ್ಷ ಮೌಲ್ಯದ ಚಿನ್ನ ಹಾಗು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ಅನೂಪ್ ಎ.ಶೆಟ್ಟಿ ಅವರು ತಿಳಿಸಿದ್ದಾರೆ.
ಕಳೆದ ಮೇ.25 ರಂದು ಮುಂಜಾನೆ ಪ್ರವೀಣ್ ಅವರು ಕುಟುಂಬ ಸಮೇತ ಅಗ್ರಹಾರದ ಆದೀಸ್ ಅಪಾರ್ಟಮೆಂಟ್‍ನ ಮನೆಗೆ ಬೀಗ ಹಾಕಿಕೊಂಡು ಪ್ರವಾಸಕ್ಕೆ ಹೋಗಿ ಎರಡು ದಿನಗಳ ಬಳಿಕ ಮೇ.27 ರಂದು ರಾತ್ರಿ 11-20 ಕ್ಕೆ ವಾಪಸ್ ಬಂದು ನೋಡಿದಾಗ ಮನೆಯ ಬೆಡ್ ರೂಂ ನ ಲಾಕರ್ ನಲ್ಲಿಟ್ಟಿದ್ದ 355 ಗ್ರಾಂ ತೂಕದ ಚಿನ್ನದ ಒಡವೆಗಳು, 100 ಗ್ರಾಂ ಬೆಳ್ಳಿಯ ಒಡವೆಗಳು, 26 ಸಾವಿರ ನಗದು ಸೇರಿ 18 ಲಕ್ಷ ಮೌಲ್ಯದ ಮಾಲುಗಳನ್ನು ಕಳ್ಳತನ ಮಾಡಲಾಗಿತ್ತು.
ಇದಲ್ಲದೆ ಇದೇ ಅಪಾರ್ಟಮೆಂಟ್‍ನಲ್ಲಿ ಆರತಿ ಸಿಂಧೆ ಅವರ ಮನೆಯಲ್ಲೂ ಸಹ 12 ಗ್ರಾಂ ತೂಕದ ಎರಡು ಚಿನ್ನದ ಮತ್ತು ಡೈಮಂಡ್ ಉಂಗುರ ಕಳವು ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದರು.
ಈ ಸಂಬಂಧಿಸಿದಂತೆ ಪ್ರವೀಣ್ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಸಂಪಿಗೆಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಟಿ.ನಾಗರಾಜು ಅವರು ಸಂಪಿಗೆಹಳ್ಳಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ) ರಂಗಪ್ಪ ಟಿ ರವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ ಆರೋಪಿಗಳ ಜಾಡು ಹಿಡಿದು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಆರೋಪಿಗಳಿಂದ 19 ಲಕ್ಷ ರೂ ಬೆಲೆಯ ಚಿನ್ನ ಬೆಳ್ಳಿಯ ಒಡವೆಗಳನ್ನು ವಶಪಡಿಸಿಕೊಂಡು ಸಂಪಿಗೆಹಳ್ಳಿ 2 ಮನೆಗಳವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.
ಆರೋಪಿ ಇಸೈರಾಜ್ ವಿರುದ್ದ ಈಗಾಗಲೇ ಸಂಪಿಗೆಹಳ್ಳಿ-2 ಯಲಹಂಕ-3, ಸಂಜಯನಗರ-10 ದೇವನಹಳ್ಳಿ-1 ಅಮೃತಹಳ್ಳಿ-2 ಹಾಗೂ ಹೆಚ್,ಎ ಎಲ್-1 ಪುಲಕೇಶಿ ನಗರ-1 ಪೊಲೀಸ್ ಠಾಣೆಗಳ ಸುಮಾರು 21 ಮನೆಗಳವು ಹಾಗು ಕಳವು ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದರು.
Previous Articleಬಿಕಿನಿ ವಿಡಿಯೋ ಹರಿಬಿಟ್ಟ ನಟಿ ಶ್ವೇತಾ!
Next Article ಜನರ ಬದುಕು ನಾಶಪಡಿಸುವ ಸರ್ಕಾರ..