ಚಾಮರಾಜನಗರ: ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಸಿಇಎನ್ ಹಾಗು ಹನೂರು ಪೊಲೀಸರು ಬಂಧಿಸಿರುವ ಘಟನೆ ಹನೂರು ತಾಲೂಕಿನ ಗುಂಡಿಮಾಳ ಗ್ರಾಮದಲ್ಲಿ ನಡೆದಿದೆ. ಶಶಿಕಲಾ ಎಂಬಾಕೆ ಬಂಧಿತ ಆರೋಪಿ. ಅಕ್ರಮವಾಗಿ ಈಕೆ ಮನೆಯಲ್ಲಿ ಒಣ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಇಎನ್ ಪೊಲೀಸರು ಮತ್ತು ಹನೂರು ಠಾಣೆ ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಒಣಗಾಂಜಾ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಲವ್ ಲವ್ ಎನ್ನುತ್ತಿದ್ದವನಿಗೆ ಚಾಕು ಇರಿತ: ಲವ್ ಲವ್ ಎಂದು ಹುಡುಗಿ ಹಿಂದೆ ಹೋಗುತ್ತಿದ್ದ ಯುವಕನಿಗೆ ಬಾಲಕಿ ಸೋದರ ಸಂಬಂಧಿಗಳು ಚಾಕು ಇರಿದಿರುವ ಘಟನೆ ಹನೂರು ತಾಲೂಕಿನ ಪುಷ್ಪಾಪುರ ಗ್ರಾಮದಲ್ಲಿ ನಡೆದಿದೆ. ಮಂಚಾಪುರ ಗ್ರಾಮದ ನವೀನ್(24) ಎಂಬಾತ ಚಾಕು ಇರಿತಕ್ಕೊಳಗಾದ ಯುವಕ. ಅಪ್ರಾಪ್ತೆಯನ್ನು ಲವ್ ಲವ್ ಎಂದು ನವೀನ್ ಪೀಡಿಸುತ್ತಿದ್ದನಂತೆ ಎಷ್ಟೇ ಬುದ್ಧಿವಾದ ಹೇಳಿದರೂ ಕೇಳದಿದ್ದರಿಂದ ಬಾಲಕಿ ಸಹೋದರ ಸಂಬಂಧಿಗಳಾದ
ಆಕಾಶ್, ಶಿವಪ್ಪ ಹಾಗೂ ಗಣೇಶ್ ಎಂಬವರು ನವೀನ್ ಗೆ ಚಾಕು ಇರಿದಿದ್ದಾರೆ. ನವೀನ್ ಸದ್ಯ ತೀವ್ರವಾಗಿ ಗಾಯಗೊಂಡು ಹತ್ತಿರದ ಆಸ್ಪತ್ರೆದೆ ದಾಖಲಾಗಿದ್ದು ಪೊಲೀಸರು ಗಣೇಶ್ ಎಂಬಾತನನ್ನು ಬಂಧಿಸಿದ್ದಾರೆ. ಆಕಾಶ್ ಮತ್ತು ಶಿವಪ್ಪ ಪರಾರಿಯಾಗಿದ್ದಾರೆ. ಹನೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.