ಬೆಂಗಳೂರು, ಜ.9- ಸಾಮಾಜಿಕ ಜಾಲತಾಣಗಳಾದ ಟೆಲಿಗ್ರಾಂ ಮತ್ತು ವ್ಯಾಟ್ಸ್ ಆಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಅವರಿಗೆ ವಿದೇಶಿ ಮಹಿಳೆಯರನ್ನು ಸರಬರಾಜು ಮಾಡುವ ಹೈಟೆಕ್ ವೇಶ್ಯಾವಾಟಿಕೆ (Prostitution) ಜಾಲ ಭೇದಿಸಿರುವ ಬೆಂಗಳೂರು ಪೊಲೀಸರು ವಿದೇಶಿ ಮಹಿಳೆಯೊಬ್ಬರು ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಟರ್ಕಿ ದೇಶದ ಮಹಿಳೆ ಡಿಯೋನಾಜ್ ರೋಹಿತ್ ಸ್ವಾಮಿಗೌಡ ಎಂದು ಗುರುತಿಸಲಾಗಿದೆ.
ಈಕೆ, ಬೆಂಗಳೂರು,ಮುಂಬೈ,ಗೋವಾ,ಪುಣೆ, ಜೈಪುರ್, ಚೆನೈ, ಮೈಸೂರು, ದೆಹಲಿ, ಉದಯಪುರ್, ಮುಂತಾದ ಕಡೆಗಳಲ್ಲಿ ವೇಶ್ಯಾವಾಟಿಕೆ ಜಾಲದ ಏಜೆಂಟ್‍ಗಳ ಜೊತೆ ಸಂಪರ್ಕದಲ್ಲಿದ್ದುಕೊಂಡು ವಿದೇಶಿ ಮಹಿಳೆಯರನ್ನೂ ಸಹ ವೇಶ್ಯಾವಾಟಿಕೆಗೆ ತೊಡಗಿಸಿರುವ ಬಗ್ಗೆ ವಿಚಾರಣೆಯಿಂದ ತಿಳಿದು ಬಂದಿದ್ದು ಡಿ.19ರಂದು ದೊಮ್ಮಲೂರಿನ ಎಚ್‍ಬಿಸಿಎಸ್ ಲೇಔಟ್‍ನ ದಿ ಲೀಲಾ ಪಾರ್ಕ್ ಹೊಟೇಲ್‍ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಹಲಸೂರು ಠಾಣೆ ಇನ್ಸ್‌ಪೆಕ್ಟರ್ ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದುಕೊಂಡರು ಐದು ಮಂದಿ ವಿದೇಶಿ ಮಹಿಳೆಯರನ್ನು ಸಹ ರಕ್ಷಿಸಿ ಎಫ್‍ಆರ್‍ಆರ್‍ಓ ಅಧಿಕಾರಿಗಳ ಮುಂದೆ ಹಾಜರುಪಡಿಸಿದರು.
ಈಕೆಯ ಜೊತೆ ದಂಧೆಯಲ್ಲಿ ತೊಡಗಿದ್ದ ಟರ್ಕಿಯ ಮೂವರು ಉಜ್ಬೇಕಿಸ್ತಾನ್, ಕಜಕಿಸ್ತಾನ್ ನ ತಲಾ ಇಬ್ಬರು ಸೇರಿ 9ಮಂದಿ ಮಹಿಳೆಯರನ್ನು ರಕ್ಷಿಸಿ ವಿಚಾರಣೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ರೋಹಿತ್ ಸ್ವಾಮಿಗೌಡ ಅವರನ್ನು 15 ವರ್ಷಗಳ ಹಿಂದೆ ವಿವಾಹವಾಗಿ ನಗರಕ್ಕೆ ಬಂದಿದ್ದ ಡಿಯೋನಾಜ್ ಒಂದು ಮಗುವಿದ್ದು,ಪತಿ ಸಾವನ್ನಪ್ಪಿದ್ದಾನೆ.
ಮಗುವನ್ನು ಬೇರೆಡೆ ಮನೆ ಮಾಡಿ ಕೇರ್ ಟೇಕರ್ ನೇಮಿಸಿ ಈಕೆ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದು ತನ್ನ ಸಂಪರ್ಕದಲ್ಲಿನ ವಿದೇಶಿ ಮಹಿಳೆಯರನ್ನು ಟೆಲಿಗ್ರಾಂ, ವ್ಯಾಟ್ಸ್ ಆಫ್ ಮೂಲಕ ಆನ್‍ಲೈನ್‍ನಲ್ಲಿ ನಡೆಸುವ ವೇಶ್ಯಾವಾಟಿಕೆ ದಂಧೆಗೆ ಕಳುಹಿಸುತ್ತಿದ್ದಳು,ಆಕೆಯಿಂದ ರಕ್ಷಿಸಿರುವ ವಿದೇಶಿ ಮಹಿಳೆಯರ ಬಗ್ಗೆ ಎಫ್ ಆರ್ ಆರ್ ಓ ಕಚೇರಿಗೆ ಮಾಹಿತಿಯನ್ನು ನೀಡಲಾಗಿದೆ ಎಂದರು.
ಹಲಸೂರಿನ ಲೀಲಾ ಪಾರ್ಕ್ ಹೊಟೇಲ್ ನಲ್ಲಿ ಅಕ್ರಮವಾಗಿ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಖಚಿತ ಮಾಹಿತಿ ಆಧರಿಸಿ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಈ ಪ್ರಕರಣದ ಮುಂದಿನ ತನಿಖೆಯನ್ನು ಬೈಯಪ್ಪನಹಳ್ಳಿ ಪೊಲೀಸರಿಗೆ
ವಹಿಸಲಾಗಿತ್ತು ತನಿಖೆಯನ್ನು ಮುಂದುವರೆಸಿ ಮತ್ತೋರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಬೆಂಗಳೂರು ಡೇಟಿಂಗ್ ಕ್ಲಬ್ ಎಂಬ ಟೆಲಿಗ್ರಾಂ ಗ್ರೂಪ್ ಮುಖಾಂತರ ಗ್ರಾಹಕರನ್ನು ಸೆಳೆದು ವೇಶ್ಯಾವಾಟಿಗೆ ತೊಡಗಿಸುತ್ತಿರುವುದು ಪತ್ತೆಯಾಯಿತು ಎಂದು ವಿವರಿಸಿದರು.