ಬೆಂಗಳೂರು: ಅ,5 – ರಾಜ್ಯ ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ಅಕ್ಟೋಬರ್ 3ರಿಂದ 10ರವರೆಗೆ ದಸರಾ ರಜೆ ಇರಲಿದ್ದು, ಅಕ್ಟೋಬರ್ 14ರಂದು ಮತ್ತೆ ನ್ಯಾಯಾಲಯದ ಕಲಾಪಗಳು ಪುನರಾರಂಭವಾಗಲಿವೆ.
ನ್ಯಾಯಾಲಯಗಳಿಗೆ ಅಕ್ಟೋಬರ್ 10 ರ ವರೆಗೂ ದಸರಾ ರಜೆ ನೀಡಲಾಗಿದ್ದು 11 ರಂದು ವಿಜಯದಶಮಿ 12 ರಂದು 2ನೇ ಶನಿವಾರ ಮತ್ತು 13 ರಂದು ಭಾನುವಾರದ ರಜೆ ಇರುವ ಕಾರಣ ಕೋರ್ಟ್ ಕಾರ್ಯ ಕಲಾಪಗಳು 14 ರಿಂದ ನಡೆಯಲಿವೆ. ಎಂದು ನ್ಯಾಯಾಲಯ ತನ್ನ ವೇಳಾಪಟ್ಟಿಯಲ್ಲಿ ತಿಳಿಸಿದೆ.
ಈ ವೇಳೆಯಲ್ಲಿ ತಡೆಯಾಜ್ಞೆ, ಮಧ್ಯಂತರ ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಮಾತ್ರ ರಜಾಕಾಲೀನ ಪೀಠಗಳು ವಿಚಾರಣೆ ನಡೆಸಲಿವೆ ಎಂದು ನ್ಯಾಯಾಂಗ ರಿಜಿಸ್ಟ್ರಾರ್ ಇ.ರಾಜೀವ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2024 ಕೊನೆಯ ತಿಂಗಳು ಡಿಸಂಬರ್ ಅಲ್ಲಿಯೂ ಕೋರ್ಟ್ ಗೆ 11 ದಿನಗಳ ರಜೆ
21 ರಿಂದ ಕ್ರಿಸ್ಮಸ್ ರಜೆ ಇದ್ದು 31 ರ ವರಗೆ ಕೋರ್ಟ್ ಕಲಾಪಗಳು ನಡೆಯುವುದಿಲ್ಲ, ಕೋರ್ಟ್ ವ್ಯವಹಾರಗಳಿಗೆ ತೆರಳುವವರು ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು.