ಬೆಂಗಳೂರು
ಪ್ರಭಾವಿ ರಾಜಕಾರಣಿಗಳು ಸಿನಿಮಾ ನಟರು ಉದ್ಯಮಿಗಳು ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹನಿ ಟ್ರಾಪ್ ಹೆಸರಿನಲ್ಲಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ಕುಖ್ಯಾತರನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಖ್ಯ ಆತರ ವಂಚನೆಯ ಜಾಗದ ಕುರಿತು ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ನೀಡಿದ ದೂರನ್ನು ಆದರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕುಖ್ಯಾತ ತಂಡವನ್ನು ಬಲೆಗೆ ಕೆಡವಿದ್ದಾರೆ
ಬಂಧಿತರನ್ನು ಸಂತೋಷ್ ಮತ್ತು ಆತನ ಸ್ನೇಹಿತ ಪುಟ್ಟರಾಜು ಎಂದು ಗುರುತಿಸಲಾಗಿದೆ ನಾಪತ್ತೆಯಾಗಿರುವ ಮತ್ತೊಬ್ಬನಿಗಾಗಿ ಹುಡುಕಾಟ ನಡೆದಿದೆ. ಬಂದಿತರಲ್ಲಿ ಒಬ್ಬ ಯೂಟ್ಯೂಬರ್ ಆಗಿದ್ದು ಮತ್ತೊಬ್ಬ ವೇಶ್ಯಾವಾಟಿಕೆ ಜಾಲದಲ್ಲಿ ನಿರತನಾಗಿದ್ದಾನೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವೇಶ್ಯಾವಾಟಿಕೆ ಜಾಲದಲ್ಲಿ ನಿರತನಾಗಿರುವ ವ್ಯಕ್ತಿ ಎರಡು ಮೊಬೈಲ್ ಫೋನುಗಳನ್ನು ಹೊಂದಿದ್ದು ಅವುಗಳ ಮೂಲಕ ಪ್ರತಿಷ್ಠಿತರನ್ನು ಸಂಪರ್ಕಿಸಿ ಯುವತಿಯರ ಜೊತೆ ಸ್ನೇಹ ಬೆಳೆಸುವ ಇಲ್ಲವೇ ಸಲುಗೆಯಿಂದ ಇರುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದ. ಈತನೊಂದಿಗೆ ಸಂಪರ್ಕದಲ್ಲಿ ಇರುವ ಇತರೆ ಯುವತಿಯರ ನೆರವನ್ನು ಇದಕ್ಕೆ ಪಡೆದುಕೊಳ್ಳುತ್ತಿದ್ದ ಎನ್ನಲಾಗಿದೆ.
ಈತ ತನ್ನ ಜಾಣ್ಮೆಯ ಮಾತುಗಳ ಮೂಲಕ ಪ್ರತಿಷ್ಠಿತರನ್ನು ಯುವತಿಯರ ಮೋಸದ ಜಾಲದಲ್ಲಿ ಬೀಳುವಂತೆ ಮಾಡಿದರೆ ಆ ಬಳಿಕ ಅವುಗಳ ದೃಶ್ಯಗಳನ್ನ ಚಿತ್ರಿಕರಿಸಿಕೊಂಡು ಸ್ನೇಹಿತ ಯೂಟ್ಯೂಬ್ ರ್ ಗೆ ನೀಡುತ್ತಿದ್ದ.
ಯೂಟ್ಯೂಬರ್ ಅವುಗಳನ್ನು ಬಳಸಿಕೊಂಡು ಪ್ರತಿಷ್ಠಿತರಿಗೆ ಬೆದರಿಕೆ ಹೊಡ್ಡಿ ಹಣ ವಸೂಲಿ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಮರ್ಯಾದೆಗೆ ಅಂಜಿ ಅನೇಕರು ಇವರು ಹೇಳಿದಷ್ಟು ಹಣ ಕೊಟ್ಟು ಸುಮ್ಮನಾಗುತ್ತಿದ್ದರು ಎನ್ನಲಾಗಿದೆ.
ಇದೆ ತಂತ್ರವನ್ನು ಶಾಸಕ ಹರೀಶ್ ಅವರಿಗೂ ಬಳಸಲು ಪ್ರಯತ್ನಿಸಿದ್ದು ಎಚ್ಚೆತ್ತುಕೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಇವರು ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ವಂಚಕರ ಮೋಸದ ಜಾಲವನ್ನು ಬಯಲಿಗೆ ಎಳೆದಿದ್ದಾರೆ.
ಇವರಿಂದ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಅನೇಕರ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ