ಇತ್ತೀಗಷ್ಟೇ ಚಾನೆಲ್ ಒಂದರ ಇಂಟರ್ವ್ಯೂನಲ್ಲಿ ಪಾಲ್ಗೊಂಡಿದ್ದ ಸಾಯಿ ಪಲ್ಲವಿ ಅವರು ದಿ ಕಾಶ್ಮೀರ್ ಪೈಲ್ಸ್ ಸಿನೆಮಾದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕುರಿತು ಬಜರಂಗ ದಳದ ಕಾರ್ಯಕರ್ತ ನಿಖಿಲ್ ಎನ್ನುವವರು ನೀಡಿದ ದೂರಿನನ್ವಯ ತೆಲಂಗಾಣ ಪೊಲೀಸರು FIR ದಾಖಲಿಸಿದ್ದರು. ಜೂನ್ 21 ರೊಳಗೆ ವಿಚಾರಣೆಗೆ ಒಳಗಾಗುವಂತೆ ನೋಟಿಸ್ ಕೂಡ ಜಾರಿ ಮಾಡಿತ್ತು. ಈ ನೋಟಿಸ್ ಅನ್ವಯ ಕೋರ್ಟ್ ಮೆಟ್ಟಿಲೇರಿದ ನಟಿ ಸಾಯಿ ಪಲ್ಲವಿ ನೋಟಿಸ್ ರದ್ದು ಮಾಡುವಂತೆ ತೆಲಂಗಾಣ ಹೈಕೋರ್ಟಿನಲ್ಲಿ ಮನವಿ ಮಾಡಿದ್ದರು. ಆದರೆ, ತೆಲಂಗಾಣ ಹೈಕೋರ್ಟಿನ ನ್ಯಾಯಮೂರ್ತಿ ಲಲಿತಾ ಅವರು ನಟಿಯ ಮನವಿಯನ್ನು ತಿರಸ್ಕರಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ನಟಿ ಸಾಯಿ ಪಲ್ಲವಿ ಹೈಕೋರ್ಟ್ ಹಾಜರಾಗುವಂತೆ ಸೂಚನೆ..
Previous Articleರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ನಿಷೇಧ
Next Article ಮೆಜೆಸ್ಟಿಕ್ ಬಳಿ ಗಾಂಜಾ ಮಾರಾಟ