ಬಾಲಿವುಡ್ ಗಾಯಕ ಅದ್ನಾನ್ ಸಾಮಿ ತಮ್ಮ ಎಲ್ಲಾ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಅಳಿಸಿಹಾಕಿ ಕೇವಲ ‘ಅಲ್ವಿದಾ’ ಎಂದು ಪೋಸ್ಟ್ ಮಾಡಿದ್ದನ್ನು ಕಂಡ ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಅವರು ಆರೋಗ್ಯವಾಗಿದ್ದಾರೆಯೆ? ಎಂದು ಹಲವರು ಆತಂಕದಿಂದ ಕೇಳಿದರೆ, ಇತರರು ಅದನ್ನು ‘ಹೊಸ ಆರಂಭ’ ಎಂದು ಅರ್ಥ ಮಾಡಿಕೊಂಡಿದ್ದಾರೆ. ಒಬ್ಬ ಅಭಿಮಾನಿ, “ಏನಾಯಿತು ಸರ್? ಇದು ಹೊಸ ಆರಂಭ ಎಂದು ನಾನು ಭಾವಿಸುತ್ತೇನೆ! ನಿಮ್ಮ ಹೊಸ ಹಾಡು ಅಥವಾ ಇನ್ನೇನಾದರೂ?” ಎಂದು ಕೇಳಿದರೆ ಕೆಲವರು ನಿನ್ನೆ ನಿಧನರಾದ ಗಾಯಕ ಭೂಪಿಂದರ್ ಸಿಂಗ್ ಅವರಿಗಾಗಿಯೇ? ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಭಯಭೀತರಾಗಿ, ‘ಹೀಗೆ ಮಾಡಬೇಡಿ’ ಎಂದು ಮನವಿ ಮಾಡಿದ್ದಾರೆ.
ಕೆಲವೇ ವಾರಗಳ ಹಿಂದೆ, ಅದ್ನಾನ್ ತನ್ನ ಮಾಲ್ಡೀವ್ಸ್ ಹಾಲಿಡೇ ಫೋಟೋಗಳನ್ನು ಹಂಚಿಕೊಂಡಿದ್ದರು ಮತ್ತು ಅವರ ಬದಲಾದ ವೇಷಭೂಷಣಗಳಿಂದ ಅಭಿಮಾನಿಗಳನ್ನು ಬೆರಗುಗೊಳಿಸಿದ್ದರು. ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದ ಗಾಯಕ ಇದೀಗ 155 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಅದ್ನಾನ್ ಸಾಮಿ ಪಾಕಿಸ್ತಾನದವರಾಗಿದ್ದು, 2016 ರಲ್ಲಿ ಭಾರತೀಯ ಪೌರತ್ವವನ್ನು ಪಡೆಯದಿದ್ದಲ್ಲದೆ. 2020 ರಲ್ಲಿ, ಕಲಾಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಗಳಿಸಿದರು.