ಇಂದು ಬೆಳಿಗ್ಗೆ (ಜುಲೈ 19), ಖ್ಯಾತ ಚಲನಚಿತ್ರ ನಿರ್ದೇಶಕ ಮಣಿರತ್ನಂ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಅವರಿಗೆ ಕೋವಿಡ್ 19 ಸೊಂಕು ತಗುಲಿದೆ ಎಂದು ವರದಿಗಳು ಹರಿದಾಡಿದವು. ಆದಾಗ್ಯೂ, ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಪರೀಕ್ಷಾ ಫಲಿತಾಂಶಗಳು ನೆಗೆಟಿವ್ ಬಂದಿದೆ ಮತ್ತು ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗುತ್ತದೆ. ಈ ಕುರಿತು ಆಸ್ಪತ್ರೆ ಅಧಿಕೃತ ಹೇಳಿಕೆಗಾಗಿ ಕಾಯಬೇಕಾಗಿದೆ. ಮಣಿರತ್ನಂ ಅವರು ಶೀಘ್ರವಾಗಿ ಗುಣಮುಖರಾಗಲಿ, ಶೀಘ್ರದಲ್ಲೇ ಸಿನಿಮಾ ಕೆಲಸಗಳಿಗೆ ಮರಳಲಿ ಎಂದು ನಾವು ಬಯಸುತ್ತೇವೆ.
ಮಣಿರತ್ನಂ ಪ್ರಸ್ತುತ ತಮ್ಮ ಬಹು ನಿರೀಕ್ಷಿತ ಐತಿಹಾಸಿಕ ಸಿನಿಮಾ ಪೊನ್ನಿಯಿನ್ ಸೆಲ್ವನ್‌ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿದ್ದಾರೆ, ಇದು ಸಿನಿ ಪ್ರೇಮಿಗಳಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ನಿರ್ದೇಶಕ ಮಣಿರತ್ನಂ ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲು – ಕೋವಿಡ್ 19 ನೆಗೆಟಿವ್ ವರದಿ
Previous Articleಗಣಿ ಅಕ್ರಮ ತಡೆಗೆ ಯತ್ನ: ಜೀವತೆತ್ತ DYSP
Next Article ಮಳೆಯಿಂದ ನೂರಾರು ಎಕರೆ ಬೆಳೆ ಹಾನಿ