Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ವಿಜಯೇಂದ್ರ ಪ್ರಸಾದ್ ರಾಜ್ಯಸಭೆ ಸದಸ್ಯರಾಗಿದ್ದು ಯಾಕೆ ಗೊತ್ತಾ‌‌.. ?
    ಸುದ್ದಿ

    ವಿಜಯೇಂದ್ರ ಪ್ರಸಾದ್ ರಾಜ್ಯಸಭೆ ಸದಸ್ಯರಾಗಿದ್ದು ಯಾಕೆ ಗೊತ್ತಾ‌‌.. ?

    vartha chakraBy vartha chakraಆಗಷ್ಟ್ 16, 2022Updated:ಆಗಷ್ಟ್ 16, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬಾಹುಬಲಿ, ಆರ್‌ಆರ್‌ಆರ್‌ನಂತಹ ದೊಡ್ಡ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿರುವ ವಿಜಯೇಂದ್ರ ಪ್ರಸಾದ್ ಅವರು ಇತ್ತೀಚೆಗೆ ರಾಷ್ಟ್ರಪತಿ ಕೋಟಾದಡಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದು ಗೊತ್ತೇ ಇದೆ. ಕೇಂದ್ರ ಸರ್ಕಾರ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವುದರೊಂದಿಗೆ ಅದರ ಹಿಂದಿನ ನಿಜವಾದ ಉದ್ದೇಶ ಈಗ ಬೆಳಕಿಗೆ ಬಂದಿದೆ.
    ಅಂದಹಾಗೆ ವಿಜಯೇಂದ್ರ ಪ್ರಸಾದ್ ಭಾರತೀಯ ಸಿನಿಮಾ ರಂಗದಲ್ಲಿ ಅತ್ಯಂತ ಯಶಸ್ವಿ ಕಥಾ ಲೇಖಕ ಎಂದೇ ಪರಿಗಣಿಸಲ್ಪಡುತ್ತಿದ್ದಾರೆ.
    ನಿರ್ದೇಶಕರಾಗಿ ಕೂಡ ವಿಜಯೇಂದ್ರ ಪ್ರಸಾದ್ ಯಶಸ್ಸುಗಳಿಸಿದ್ದಾರೆ. ಇತ್ತೀಚೆಗೆ ನಿರ್ದೇಶನದ ಕ್ಯಾಪ್ ಬಿಟ್ಟು ಬಾಹುಬಲಿ, ಆರ್ ಆರ್ ಆರ್ ನಂತಹ ಫ್ಯಾಂಟಸಿ ಕತೆಗಳ ರಚನೆಯಲ್ಲಿ ತೊಡಗಿದ್ದಾರೆ. ಸದ್ಯ ಮಹೇಶ್ ಬಾಬು ಅಭಿನಯದ ಸಿನಿಮಾ ಕತೆಯಲ್ಲಿ ತೊಡಗಿರುವ ಅವರು ನಿರ್ದೇಶನದಲ್ಲಿ ತಮ್ಮ ಪುತ್ರ ರಾಜಮೌಳಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.
    ಇದರ ನಡುವೆ ಈಗ ಸುದೀರ್ಘ ಅವಧಿಯ ನಂತರ ನಿರ್ದೇಶಕನ ಕ್ಯಾಪ್ ತೊಡುತ್ತಿದ್ದಾರೆ. ಅಂದಹಾಗೆ ಇದೊಂದು ಬಿಗ್ ಬಜೆಟ್ ಸಿನಿಮಾವಾಗಲಿದ್ದು, ಹಿಂದಿಯಲ್ಲಿ ಸಿದ್ದಗೊಳ್ಳುವ ಈ ಸಿನಿಮಾ ಎಲ್ಲಾ ಭಾರತೀಯ ಭಾಷೆಗಳಿಗೆ ಡಬ್ ಆಗಲಿದೆ. ಈ ಸಿನಿಮಾಕ್ಕೆ ಯಾರು ಬಂಡವಾಳ ಹೂಡಲಿದ್ದಾರೆ, ತಾರಾಗಣದಲ್ಲಿ ಯಾರುಯಾರಿರಲಿದ್ದಾರೆನ್ನುವುದು ಗೌಪ್ಯ.
    ಸಿನಿಮಾದ ಕಥೆ ಸಿದ್ದವಾಗಿದೆ. ಅಂದಹಾಗೆ ಈ ಸಿನಿಮಾದ ಹೆಸರು ಭಗವಾಧ್ವಜ. ದೇಶಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಗಮ ಮತ್ತು ಅದರ ಬೆಳವಣಿಗೆಯ ಹಲವು ಘಟನಾವಳಿಗಳಿಗೆ ರೋಚಕತೆಯ ಸ್ಪರ್ಷ ನೀಡಿ ವಿಜಯೇಂದ್ರ ಪ್ರಸಾದ್ ಸಿನಿಮಾ ಕತೆಯನ್ನು ಸಿದ್ಧಪಡಿಸಿದ್ದಾರೆ.
    ತೆಲುಗಿನ ಸೂಪರ್ ಹಿಟ್ ಶ್ರೀವಲ್ಲಿಯ ನಂತರ ವಿಜಯೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಬರುತ್ತಿರುವ ಈ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.
    1925 ರಲ್ಲಿ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಅವರಿಂದ ಆರ್ ಎಸ್ ಎಸ್ ಸ್ಥಾಪನೆಯೊಂದಿಗೆ ಆರಂಭವಾಗಲಿರುವ ಈ ಸಿನಿಮಾ ಅಂತ್ಯವಂತೂ ಅದ್ಭುತ ವಾಗಿ ಮೂಡಿಬರಲಿದೆಯಂತೆ. ಈ ಮೂಲಕ ಬಿಜೆಪಿ ಸರ್ಕಾರ ವಿಜಯೇಂದ್ರ ಪ್ರಸಾದ್ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿದ ಅಸಲಿ ಉದ್ದೇಶ ಬೆಳಕಿಗೆ ಬಂದಿದೆ‌.
    ಆರ್ ಆರ್ ಆರ್ ಸಿನಿಮಾ ಸಮಯದಲ್ಲಿ ಮಾಜಿ ಪ್ರಧಾನಿ ದಿವಂಗತ ನೆಹರು ಅವರ ನಿಲುವುಗಳ ಕುರಿತು ಮಾಡಿದ ಟೀಕೆಗಳು ಸಾಕಷ್ಟು ವಿವಾದ ಸೃಷ್ಟಿಸಿದ್ದವು. ಕಾಶ್ಮೀರ ಕುರಿತಾದ ನೆಹರು ಬಗೆಗಿನ ವಿಜಯೇಂದ್ರ ಪ್ರಸಾದ್ ಅವರ ವಿಡಿಯೋ ಸಾಕಷ್ಟು ವಿವಾದ ಸೃಷ್ಟಿಸಿತ್ತು.
    ಇದೀಗ ಇವರ ಹೊಸ ಸಿನಿಮಾ ಭಗವಾದ್ವಜ 1925 ರಲ್ಲಿ ಆರ್ ಎಸ್ ಎಸ್ ಉಗಮದೊಂದಿಗೆ ಆರಂಭವಾಗಲಿದ್ದು, 1963ಕ್ಕೆ ಮುಕ್ತಾಯವಾಗಲಿದೆ. ಇಲ್ಲೇ ಇರುವುದು ವಿಶೇಷ ಅಂದು ಭಾರತ ಮತ್ತು ಚೀನಾ ನಡುವೆ ನಡೆದ ಸಮರದ ವೇಳೆ ಆರ್ ಎಸ್ ಎಸ್ ಪಾತ್ರವನ್ನು ಮುಕ್ತ ಕಂಠದಿಂದ ಹೊಗಳಿದ್ದ ಪ್ರಧಾನಿ ಜವಹರಲಾಲ್ ನೆಹರು ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸಲು ಆರ್ ಎಸ್ ಎಸ್ ಕಾರ್ಯಕರ್ತರಿಗೆ ಅವಕಾಶ ನೀಡಿದ್ದರು. ಗಣವೇಶಧಾರಿಗಳಾದ ನೂರು ಮಂದಿ ಸಂಘದ ಕಾರ್ಯಕರ್ತರು ಭಾರತೀಯ ಯೋಧರೊಂದಿಗೆ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸಿದ್ದು ಅತ್ಯಂತ ರೋಮಾಂಚಕ ಸನ್ನಿವೇಶ ಇದರೊಂದಿಗೆ ಸಿನಿಮಾ ಅಂತ್ಯವಾಗುತ್ತದೆ.
    ಆರ್ ಎಸ್ ಎಸ್ ತತ್ವ, ಸಿದ್ಧಾಂತಗಳನ್ನು ನಖ ಶಿಖಾಂತ ವಿರೋಧಿಸುವ ನೆಹರು ಅವರ ಮರಿ ಮೊಮ್ಮಗ ರಾಹುಲ್ ಗಾಂಧಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ನಾಯಕ. ಇವರ ತಾತ ನೆಹರು ಪ್ರಧಾನಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಶ್ಲಾಘಿಸಿದ ವ್ಯಕ್ತಿ ಈ ವೈರುಧ್ಯವನ್ನು ವಿಜಯೇಂದ್ರ ಪ್ರಸಾದ್ ಮೂಲಕ ಜನರ ಮುಂದಿಡುವ ಬಿಜೆಪಿಯ ಕಾರ್ಯಸೂಚಿ ಎಷ್ಟರ ಮಟ್ಟಿಗೆ ಜನರನ್ನು ತಲುಪಲಿದೆ ಕಾದು ನೋಡಬೇಕಿದೆ.

    News ಕಾಂಗ್ರೆಸ್ ಸಿನಿಮ
    Share. Facebook Twitter Pinterest LinkedIn Tumblr Email WhatsApp
    Previous Articleಭಾರತೀಯ ಸೇನೆಗೆ ಅವಮಾನ:‘ಲಾಲ್​ ಸಿಂಗ್​ ಚಡ್ಡಾ’ ಅಮೀರ್ ಖಾನ್ ವಿರುದ್ಧ ದೂರು
    Next Article ಕಾಂತಾರದ ಸಿಂಗಾರ ಸಿರಿಯೇ ಹಾಡು ರಿಲೀಸ್
    vartha chakra
    • Website

    Related Posts

    ಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !

    ಸೆಪ್ಟೆಂಬರ್ 1, 2025

    ಬಿಜೆಪಿ ಚಾಮುಂಡಿ ಯಾತ್ರೆ !

    ಸೆಪ್ಟೆಂಬರ್ 1, 2025

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    ಸೆಪ್ಟೆಂಬರ್ 1, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !

    ಬಿಜೆಪಿ ಚಾಮುಂಡಿ ಯಾತ್ರೆ !

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    ಜಮೀರ್ ಅಹಮದ್ ಖಾನ್ ಗೆ ರಾಧಿಕಾ ಕುಮಾರಸ್ವಾಮಿ ಹಣ ಕೊಟ್ಟಿದ್ದಾರಾ.?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • kashpo napolnoe _jcmn ರಲ್ಲಿ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸ್.
    • betwinner_vhsa ರಲ್ಲಿ ದರೋಡೆ ಗ್ಯಾಂಗ್ ದಾವಣಗೆರೆಯಲ್ಲಿ
    • kashpo napolnoe _gpmn ರಲ್ಲಿ ಇದು ದರೋಡೆಕೋರರ ಹೆದ್ದಾರಿ | Bengaluru-Mysuru Highway
    Latest Kannada News

    ಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !

    ಸೆಪ್ಟೆಂಬರ್ 1, 2025

    ಬಿಜೆಪಿ ಚಾಮುಂಡಿ ಯಾತ್ರೆ !

    ಸೆಪ್ಟೆಂಬರ್ 1, 2025

    ಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !

    ಸೆಪ್ಟೆಂಬರ್ 1, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    PORN ವೆಬ್ ಸೈಟ್ ನಲ್ಲಿ ಇಟಲಿ ಪ್ರಧಾನಿ ಅಸಭ್ಯ ಫೋಟೋ
    Subscribe