ಚಂಢೀಗಡ: ಹರ್ಯಾಣದಲ್ಲಿ ಅಕ್ರಮ ಗಣಿಗಾರಿಕೆ ಪ್ರದೇಶದ ಮೇಲೆ ದಾಳಿ ಮಾಡಿದ ಹಿರಿಯ ಪೊಲೀಸ್ ಅಧಿಕಾರಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತ ಪಟ್ಟ ಅಧಿಕಾರಿಯನ್ನು ಡಿವೈಎಸ್‌ಪಿ ಸುರೇಂದ್ರ ಸಿಂಗ್ ಬಿಷ್ಣೋಯಿ ಎಂದು ಗುರುತಿಸಲಾಗಿದೆ.
ಹರ್ಯಾಣದ ನುಹಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಯ ಮೇಲೆ ಲಾರಿ ಚಲಾಯಿಸಿ ಹತ್ಯೆ ಮಾಡಲಾಗಿದೆ. ಕಲ್ಲು ತುಂಬಿದ ಲಾರಿಯನ್ನು ತಡೆಯಲು ಯತ್ನಿಸಿದಾಗ ದುಷ್ಕರ್ಮಿಗಳು ಡಿವೈಎಸ್ ಪಿ ಮೇಲೆ ಲಾರಿ ಚಲಾಯಿಸಿ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಪೊಲೀಸ್ ಅಧಿಕಾರಿ ಬಿಷ್ಣೋಯಿ ಮೃತಪಟ್ಟಿದ್ದಾರೆ.