ತೆಲುಗು ಧಾರಾವಾಹಿ ಸೆಟ್ನಲ್ಲಿ ಕನ್ನಡ ಕಿರುತೆರೆ ನಟ ಚಂದನ್ಗೆ ಕಪಾಳಮೋಕ್ಷ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಯಾವ ಕಾರಣಕ್ಕಾಗಿ ಈ ಹಲ್ಲೆ ನಡೆದಿದೆ ಎಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಮೊದಲು ಚಂದನ್ ಅವರಿಂದ ಕ್ಯಾಮೆರಾಮ್ಯಾನ್ ಮೇಲೆ ಹಲ್ಲೆ ನಡೆಯಿತು. ಆ ಕಾರಣದಿಂದಲೇ ತಂತ್ರಜ್ಞರು ಚಂದನ್ ವಿರುದ್ಧ ತಿರುಗಿ ಬಿದ್ದರು ಎಂದು ಹೇಳಲಾಗುತ್ತಿದೆ. ಬಳಿಕ ಚಂದನ್ ಕ್ಷಮೆ ಕೇಳಿದರೂ ಕೂಡ ಅಲ್ಲಿದ್ದ ಯಾರೊಬ್ಬರೂ ಸಮಾಧಾನಗೊಂಡಿಲ್ಲ. ಪರಿಸ್ಥಿತಿ ಬಿಗಡಾಯಿಸಿದಾಗ ಕೈಕೈ ಮಿಲಾಯಿಸಿದ್ದಾರೆ. ‘ಸಾವಿತ್ರಮ್ಮಗಾರಿ ಅಬ್ಬಾಯಿ’ ಎಂಬ ತೆಲುಗು ಧಾರಾವಾಹಿ ಸೆಟ್ನಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಮಾತನಾಡಿದ ನಟ ಚಂದನ್ ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ ನಾನು ರೆಸ್ಟ್ ಮಾಡುತ್ತಿದ್ದಾಗ ಅಸ್ಟಿಸ್ಟೆಂಟ್ ಕ್ಯಾಮರಾ ಮೆನ್ ಬಂದು ನನ್ನ ಅಸಿಸ್ಟಂಟ್ ಜೊತೆ ಗಲಾಟೆ ಮಾಡಿದ್ದಾನೆ. ಆಗ ನಾನು ಸಲುಗೆಯಿಂದಲೇ ನಿಧಾನಕ್ಕೆ ತಳ್ಳಿದ್ದೆ. ಆದರೆ ಅದನ್ನೇ ಅಪಾರ್ಥ ಮಾಡಿಕೊಳ್ಳಲಾಯಿತು ಎಂದರು. ಅಲ್ಲದೆ , ಗಲಾಟೆ ನಡೆದ ದಿನ ಟೆನ್ಶನ್ನಲ್ಲಿದ್ದೆ. ಅಮ್ಮನಿಗೆ ಅನಾರೋಗ್ಯವಾಗಿತ್ತು. ಆ ನಡುವೆಯೂ ಶೂಟಿಂಗ್ನಲ್ಲಿ ಭಾಗಿಯಾಗಿದ್ದೆ. ಈ ವೇಳೆ ಮಿಸ್ ಕಮ್ಯೂನಿಕೇಷನ್ನಿಂದ ಗಲಾಟೆ ನಡೆದಿದೆ, ಕ್ಯಾಮೆರಾಮನ್ ಸಹಾಯಕ ನನ್ನ ಸಹಾಯಕನಿಗೆ ಏರು ಧ್ವನಿಯಲ್ಲಿ ಮಾತನಾಡಿದ್ದ. ನಾನು ಆ ಹುಡುಗನಿಗೆ ಹಾಗೆ ಮಾತನಾಡುವುದು ತಪ್ಪು ಎಂದು ತಳ್ಳಿದ್ದೆ. ಇದರ ಹೊರತಾಗಿ ಅಲ್ಲಿ ಏನೂ ನಡೆದಿಲ್ಲ ಎಂದಿದ್ದಾರೆ. ಕನ್ನಡದ ‘ರಾಧಾ ಕಲ್ಯಾಣ’, ‘ಲಕ್ಷ್ಮೀ ಬಾರಮ್ಮ’ ಮುಂತಾದ ಧಾರಾವಾಹಿಯಿಂದ ಚಂದನ್ ಅಭಿನಯಿಸಿ ಮನೆಮಾತಾಗಿದ್ದಾರೆ. ‘ಸಾವಿತ್ರಮ್ಮ ಗಾರಿ ಅಬ್ಬಾಯಿ’ ಮೂಲಕ ತೆಲುಗು ಕಿರುತೆರೆಗೂ ಚಂದನ್ ಕುಮಾರ್ ಎಂಟ್ರಿ ನೀಡಿದ್ದರು.
ತೆಲುಗು ಸೀರಿಯಲ್ ಸೆಟ್ ನಲ್ಲಿ ಲಕ್ಷ್ಮಿ ಬಾರಮ್ಮ ನಟ ಚಂದನ್ ಗೆ ಕಪಾಳಮೋಕ್ಷ!
Previous Articleದಕ್ಷಿಣ ಕನ್ನಡಕ್ಕೆ ಪೊಲೀಸ್ ಸರ್ಪಗಾವಲು…!
Next Article ISIS ನಂಟು: ತುಮಕೂರು, ಭಟ್ಕಳದಲ್ಲಿ ಶೋಧ.. !