ಕಾಶಿ ಯಾತ್ರೆಗೆ ಹೋಗುವ 30000 ಯಾತ್ರಿಗಳಿಗೆ ಕರ್ನಾಟಕ ಸರ್ಕಾರ 7ಕೋಟಿ ಹಣವನ್ನು ಮೀಸಲಿಟ್ಟಿದೆ ಎಂದು ಕರ್ನಾಟಕದ ಧಾರ್ಮಿಕ ದತ್ತಿ, ಹಜ್, ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದರು. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಯಾತ್ರಿಗಳಿಗೆ ನೇರವಾಗಿ ಅವಾರ ಅಕೌಂಟಿಗೆ ಹಣವನ್ನು ವರ್ಗಾವಣೆ ಮಾಡಲಾಗುವುದು. 5000 ನೇರ ನಗದು ವರ್ಗಾವಣೆಗೆ ನಿನ್ನೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ ನೀಡಿದ್ದಾರೆ,. ಇನ್ನು ಕಾಶಿ ಯಾತ್ರೆಗೆ ಯಾರೆಲ್ಲ ಯಾವಾಗ ಹೋಗಬಹುದು ಎನ್ನುವ ಮಾಹಿತಿ ಇಲ್ಲಿದೆ.
ನೋಂದಣಿ :
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವವರು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಗಳಾದ http://sevasindhuservices.karnataka.gov.in/ ಮತ್ತು http://itms.kar.nic.in/hrcehome/index.php ಸಬ್ಸಿಡಿಗಳಿಗಾಗಿ ನೋಂದಾಯಿಸಿಕೊಳ್ಳಬಹುದು.
ಯೋಜನೆಯ ಅರ್ಹತೆಯ ಮಾಹಿತಿ
೧. ಯಾತ್ರಿಯು ಕರ್ನಾಟಕದ ನಿವಾಸಿ ಆಗಿರಬೇಕು
೨. ವೋಟರ್ ಐಡಿ, ಆಧಾರ್, ಪಡಿತರ ಚೀಟಿ ಹಿಒಂದಿರಬೇಕು
೩. ಯಾತ್ರಿಯು 18 ವರ್ಷ ಮೇಲ್ಪಟ್ಟವರಾಗಿರಬೇಕು.
೪. ಸಬ್ಸಿಡಿಯು ಒಂದು ಸಲ ಮಾತ್ರ ನೀಡಲಾಗುವುದು.
ಬೇಕಾಗಿರುವ ದಾಖಲೆಗಳು
೧. ವೋಟರ್ ಐಡಿ
೨. ಆಧಾರ್ ಕಾರ್ಡ್, ಪಡೀತಾ ಚೀಟಿ, ಪಾಸ್ಪೋರ್ಟ್ ಸೈಜ್ ಫೋಟೋ, ಕರ್ನಾಟಕ ಮೂಲದ ನಿವಾಸದ ಪುರಾವೆ
೩. ಬ್ಯಾಂಕ್ ಡೀಟೇಲ್ಸ್
೪. ಕೋವಿಡ್ ಲಸಿಕೆ ಪ್ರಮಾಣ ಪತ್ರ
ಉಳಿದಂತೆ ಆಹಾರ, ವಸತಿ, ಊಟ, ನೀರು, ಮೂಲಭೂತ ಸೌಕರ್ಯಗಳು ರೈಲ್ವೆ ಅಧೀನ ಸಂಸ್ಥೆ IRCTC ಜೊತೆ ಒಪ್ಪಂದ ಮಾಡಿಕೊಂಡಿದೆ. 7 ದಿನಗಳ ಪ್ರವಾಸಕ್ಕೆ ಒತಾರೆ 15,000 ಖರ್ಚು ತಗುಲಲಿದ್ದು ಅದರಲ್ಲಿ 5,000 ಕರ್ನಾಟಕ ಸರ್ಕಾರ ಸಹಾಯ ಧನವನ್ನಾಗಿ ನೀಡುತ್ತದೆ.