ಮಾಲಿವುಡ್‍ದಲ್ಲಿ ತಮ್ಮದೆ ಛಾಪು ಮೂಡಿಸಿಕೊಂಡಿರುವ ನಟ, ನಿರ್ಮಾಪಕ, ನಿರ್ದೇಶಕ ಮತ್ತು ವಿತರಕ ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ಲೂಸಿಫರ್, ಜನಗಣಮನ, ಬ್ರೋಡ್ಯಾಡಿ ಚಿತ್ರಗಳ ನಂತರ ಅವರು ಅಭಿನಯಿಸಿರುವ ಹೊಸ ಚಿತ್ರ ಕಡವ ಇದೇ 30ರಂದು ಬಿಡುಗಡೆಯಾಗಲಿದೆ. ಕನ್ನಡ ಸೇರಿದಂತೆ ತೆಲುಗು, ಹಿಂದಿ ಹಾಗು ತಮಿಳು ಭಾಷೆಯಲ್ಲಿ ತೆರೆಗೆ ಬರುತ್ತಿರುವುದರಿಂದ ಪ್ರಚಾರದ ಸಲುವಾಗಿ ಬೆಂಗಳೂರಿಗೆ ಆಗಮಿಸಿದ್ದರು. ನಾಯಕಿಯಾಗಿ ಸಂಯುಕ್ತಾ ಮೆನನ್ ಕಾಣಿಸಿಕೊಂಡಿದ್ದು, ಪೋಲೀಸ್ ಆಫೀಸರ್ ಪಾತ್ರದಲ್ಲಿ ಬಾಲಿವುಡ್‍ನ ವಿವೇಕ್ ಓಬಿರಾಯ್ ನಟಿಸಿದ್ದಾರೆ. ಶಾಜಿಕೈಲಾಸ್ ನಿರ್ದೇಶನ ಮಾಡಿರುವ ಸಿನಿಮಾದ ಟೀಸರ್ ಈಗಲೇ ಸದ್ದು ಮಾಡುತ್ತಿದೆ. ಕಡುವಕ್ಕುಣ್ಣೇಲ್ ಗುರುವಚ್ಚನ ಎಂಬ ವ್ಯಕ್ತಿಯ ನೈಜ ಕತೆಯನ್ನಾಧರಿಸಿ ನಿರ್ಮಾಣಗೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪೃಥ್ವಿರಾಜ್ ಸುಕುಮಾರನ್ ಕಳೆದ ಆರು ತಿಂಗಳಿಂದ ನಾನು ಅನಧಿಕೃತವಾಗಿ ಕೇರಳದಲ್ಲಿ ಕನ್ನಡ ಚಿತ್ರದ ರಾಯಭಾರಿಯಾಗಿದ್ದೇನೆ. ಪೃಥ್ವಿರಾಜ್ ಪ್ರೊಡಕ್ಷನ್‍ನಡಿ ವಿತರಣೆ ಮಾಡಿದ ಕೆಜಿಎಫ್, 777 ಚಾರ್ಲಿ ಸದರಿ ಎರಡು ಚಿತ್ರಗಳು ಅಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಜತೆಗೆ ಲಾಭವು ಬಂದಿದೆ. ಕಡುವ ನನಗೆ ವಿಶೇಷ ಚಿತ್ರ. ಜನಗಣಮನ ಸಿನಿಮಾವನ್ನು ಬೆಂಗಳೂರಿನಲ್ಲಿ ಹೆಚ್ಚು ಜನ ನೋಡಿದ್ದಾರೆ. ನನ್ನ ಈ ಹಿಂದಿನ ಚಿತ್ರಗಳಿಗೆ ಕರ್ನಾಟಕದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇಂದು ಭಾರತದಾದ್ಯಂತ ನಾವು ನಮ್ಮ ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದೇವೆ. ಬಾಹುಬಲಿ ಮೂಲಕ ಪ್ಯಾನ್ ಇಂಡಿಯಾ ಚಿತ್ರ ಹೆಚ್ಚು ಪ್ರಚಲಿತಕ್ಕೆ ಬಂದಿತು. ನಂತರ ಕೆಜಿಎಫ್ ಮತ್ತೋಂದು ಹಂತಕ್ಕೆ ತೆಗೆದುಕೊಂಡು ಹೋಯಿತು. ಉದ್ಯಮದ ವಿಚಾರವಾಗಿ ಐದು ಭಾಷೆಯಲ್ಲಿ ರಿಲೀಸ್ ಮಾಡುತ್ತಿರುವುದು ಒಂದು ಕಡೆಯಾದರೆ, ಜನರಿಗೆ ತಲುಪಬೇಕೆನ್ನುವುದೇ ನನ್ನ ಇನ್ನೊಂದು ಆಶಯ ಎಂದರು.
Previous Articleಸಮೂಹ ಶಕ್ತಿಯಿಂದ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ: ದೀಪಕ್ ತಿಮ್ಮಯ
Next Article ಕಾರು ಹೊಳೆಗೆ ಬಿದ್ದ ಪ್ರಕರಣ; ಇಬ್ಬರ ಮೃತದೇಹ ಪತ್ತೆ